Bengaluru CityDistrictsKarnatakaLatestLeading NewsMain Post

‘ನಮ್ಮ ಮನೆ’ ಎಕ್ಸ್‌ಪೋ 4 ನೇ ಆವೃತ್ತಿಗೆ ತೆರೆ

ಬೆಂಗಳೂರು: ‘ಪಬ್ಲಿಕ್ ಟಿವಿ’ ಪ್ರಸ್ತುತಪಡಿಸಿರುವ ‘ನಮ್ಮ ಮನೆ’ ರಿಯಲ್ ಎಸ್ಟೇಟ್ ಎಕ್ಸ್‌ಪೋ 4 ನೇ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಎಕ್ಸ್‌ಪೋಗೆ ಎರಡು ದಿನವೂ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ಕೊನೆಯ ದಿನವಾದ ಭಾನುವಾರ ಬೆಳಗ್ಗೆಯಿಂದಲೇ ಗ್ರಾಹಕರು ಎಕ್ಸ್‌ಪೋಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.

30 ಕ್ಕೂ ಹೆಚ್ಚು ಪ್ರತಿಷ್ಠಿತ ಡೆವಲಪರ್ಸ್ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದರು. ಗ್ರಾಹಕರಿಗಾಗಿ ಹಲವು ಬಂಪರ್ ಆಫರ್‍ಗಳನ್ನು ಸಹ ನೀಡಲಾಗಿತ್ತು. ಕೊನೆಯ ದಿನವಾದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿದ್ದರು. ಇದನ್ನೂ ಓದಿ: ಕೊಡಗಿನಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ತುಡಿತ – 5 ವರ್ಷಗಳಲ್ಲಿ 48 ಪೋಷಕರ ಅರ್ಜಿ 

ಎಕ್ಸ್‌ಪೋ ಬೆಳಗ್ಗೆ 10 ರಿಂದ ಸಂಜೆ 6 ವರೆಗೆ ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯಿತು. ಈ ಎಕ್ಸ್‌ಪೋದಲ್ಲಿ ದೇಶದ ಪ್ರತಿಷ್ಠಿತ ಡೆವಲಪರ್ಸ್ ಭಾಗಿಯಾಗಿದ್ದರು. ಮನೆ, ಸೈಟ್, ವಿಲ್ಲಾ, ಫ್ಲ್ಯಾಟ್‍ಗಳ ಬಗ್ಗೆ ಎಕ್ಸ್‌ಪೋದಲ್ಲಿ ಮಾಹಿತಿ ನೀಡಲಾಯಿತು. ಕಾರ್ಯಕ್ರಮಕ್ಕೆ ಮೊದಲ ದಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ದಿನ ಎಕ್ಸ್‌ಪೋದಲ್ಲಿ ಭಾಗಿಯಾಗಿದ್ದ ಗ್ರಾಹಕರು ಭರ್ಜರಿ ಗಿಫ್ಟ್‌ಗಳನ್ನ ಪಡೆದಿದ್ದರು.

ಇಂದು ಸಹ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗಿಯಾಗಿ ಹಲವು ಗಿಫ್ಟ್‌ಗಳನ್ನು ಬಾಚಿಕೊಂಡರು. ಎಕ್ಸ್‌ಪೋದಲ್ಲಿ ಭಾಗಿಯಾಗುವ ಗ್ರಾಹಕರಿಗೆ ಪ್ರತಿ ಅರ್ಧಗಂಟೆಗೊಮ್ಮೆ ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯ ಗೆಲ್ಲುವ ಅವಕಾಶವಿತ್ತು.

ಎಕ್ಸ್‌ಪೋ ಸಮಾರೋಪ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಭಾಗಿಯಾಗಿದ್ದರು. ಈ ವೇಳೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಕ್ಸ್‌ಪೋದಲ್ಲಿ ಭಾಗಿಯಾದವರು ನಿಮ್ಮನ್ನ ವಿಮರ್ಶೆ ಮಾಡಿಕೊಳ್ಳಿ. ಯಾವ ಕಾರಣಕ್ಕೆ ನಾವು ಉತ್ತಮವಾಗಿ ಜನರನ್ನ ತಲುಪಿದ್ದೇವೆ, ಏಕೆ ತಲುಪಲಾಗಲಿಲ್ಲ ಎನ್ನುವುದನ್ನ ವಿಮರ್ಶೆ ಮಾಡಿಕೊಳ್ಳಿ. ಭೂಮಿ ಯಾವತ್ತು ಯಾರನ್ನೂ ಕೈ ಬಿಡಲ್ಲ ಎಂದರು. ಇದನ್ನೂ ಓದಿ:  ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ 

ಜನರಿಗೆ ಆಸೆ, ನಿರೀಕ್ಷೆ ಹೆಚ್ಚಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಧತ್ರಿ ಹೆಸರಿನಂತೆ ಒಳ್ಳೆಯದಾಗಲಿ ಎಂದು ಶುಭಕೋರಿದರು. ನಂತರ ರಂಗನಾಥ್ ಅವರು ಎಕ್ಸ್‌ಪೋದಲ್ಲಿ ಭಾಗಿಯಾದ ಎಲ್ಲ ಡೆವಲಪರ್ಸ್‍ಗೂ ಕಾಣಿಕೆ ನೀಡಿ ಗೌರವಿಸಿದರು.

Leave a Reply

Your email address will not be published.

Back to top button