ಬೆಂಗಳೂರು: 108 ಆಂಬುಲೆನ್ಸ್ (108 Ambulances) ಸೇವೆ ಸಮಸ್ಯೆಗಳ ಗೂಡಾಗಿದೆ. ಜೀವ ಉಳಿಸಬೇಕಿರೋ ಆಂಬುಲೆನ್ಸ್ಗಳು ಡಕೋಟ ಎಕ್ಸ್ಪ್ರೆಸ್ ಆಗ್ತಿವೆ. 340ಕ್ಕೂ ಹೆಚ್ಚು ಆಂಬುಲೆನ್ಸ್ಗಳು ಗುಜರಿಗೆ ತಲುಪಿದ್ದು. 340 ಆಂಬುಲೆನ್ಸ್ಗಳ ಸ್ಥಗಿತಕ್ಕೆ ಆರೋಗ್ಯ ಇಲಾಖೆ (Health Department) ಮುಂದಾಗಿದೆ.
Advertisement
ಕಳೆದ ಎರಡ್ಮೂರು ತಿಂಗಳ ಹಿಂದೆ ಸಂಬಳ ವಿಚಾರಕ್ಕೆ ನೌಕರರು ಮುಷ್ಕರ ಮಾಡಿ 108 ಸೇವೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತೆರೆದಿಟ್ಟು ಸೇವೆ ಸ್ಥಗಿತಕ್ಕೆ ಮುಂದಾಗಿದ್ರು. ಈ ಘಟನೆ ಆದ ಬಳಿಕ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದ 108 ಸೇವೆಯ ಆಂಬುಲೆನ್ಸ್ಗಳು ಗುಜರಿಗೆ ತಲುಪಿರೋ ವಿಚಾರ ಬಯಲಾಗಿದೆ. ಇಂಜಿನ್ ಸಮಸ್ಯೆ, ಬೋರ್ ಸಮಸ್ಯೆ ಮತ್ತು ಟೆಕ್ನಿಕಲ್ ಸಮಸ್ಯೆಯಿಂದ 340ಕ್ಕೂ ಹೆಚ್ಚು ಆಂಬುಲೆನ್ಸ್ಗಳನ್ನು ಸ್ಥಗಿತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ (Bengaluru) ಒಟ್ಟು 709 ಆಂಬುಲೆನ್ಸ್ಗಳಿದ್ದು, ಅದರಲ್ಲಿ 340 ಆಂಬುಲೆನ್ಸ್ಗಳು ಕೆಟ್ಟು ನಿಂತಿವೆ. ಕೆಲವೊಂದನ್ನು ರೆಡಿ ಮಾಡಿಸಿಕೊಂಡು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!
Advertisement
Advertisement
ಶೀಘ್ರದಲ್ಲಿ 340 ಆಂಬುಲೆನ್ಸ್ ಸ್ಥಗಿತಗೊಳಿಸಿ ಹೊಸದಾಗಿ ಖರೀದಿ ಮಾಡೋ ಪ್ಲ್ಯಾನ್ ಮಾಡಿದ್ದಾರಂತೆ. ಸದ್ಯ ಜಿವಿಕೆ (GVK) ಆವರಣ ಸೇರಿದಂತೆ ಹಲವೆಡೆ ಕೆಟ್ಟು ನಿಂತ ಆಂಬುಲೆನ್ಸ್ಗಳನ್ನು ನಿಲ್ಲಿಸಲಾಗಿದೆ. 2008ರಿಂದಲೂ ಕೂಡ ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸೇವೆ ನೀಡ್ತಾ ಇದೆ. ಆದರೆ ಜಿವಿಕೆ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಅಪಸ್ವರ ಎದ್ದಿದ್ದು, ಸಂಸ್ಥೆಯ ಕಾರ್ಯ ವೈಖರಿ ಚೆನ್ನಾಗಿಲ್ಲ ಅಂತಾ ಸ್ವತಃ ಆಂಬುಲೆನ್ಸ್ ನೌಕರರೇ ಹೇಳಿದ್ದಾರೆ. ಹೀಗಾಗಿ ಜಿವಿಕೆ ಟೆಂಡರ್ ಅವಧಿ ಮುಕ್ತಾಯ ಆಗಿರುವ ಹಿನ್ನೆಲೆ ಹೊಸದಾಗಿ ಟೆಂಡರ್ ಕರೆದ್ರು ಆಂಬುಲೆನ್ಸ್ ಸೇವೆ ನೀಡಲು ಯಾವ ಕಂಪನಿಗಳು ಮುಂದೆ ಬರದೇ ಇರೋದು ಬಹಿರಂಗ ಆಗಿದೆ. ಫೆಬ್ರವರಿ 6ಕ್ಕೆ ಟೆಂಡರ್ ಅವಧಿ ಮುಕ್ತಾಯ ಆಗ್ತಾ ಇದ್ದು. ಯಾವ ಕಂಪನಿಗಳು ಮುಂದೆ ಬರದೇ ಇದ್ರೆ ಸದನದ ಗಮನಕ್ಕೆ ತಂದು ಆಂಬುಲೆನ್ಸ್ಗಳಲ್ಲಿ ಇರುವ ಸಮಸ್ಯೆಯನ್ನು ಸರಿಪಡಿಸುತ್ತೇವೆ ಅಂತಿದ್ದಾರೆ ಇಲಾಖೆ ಅಧಿಕಾರಿಗಳು. ಇದನ್ನೂ ಓದಿ: ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k