ಬೆಂಗಳೂರು: ಹಣ ವಿತ್ ಡ್ರಾ ಮಾಡಲು ಎಟಿಎಂಗೆ (ATM) ಬರುತ್ತಿದ್ದ ವೃದ್ಧರೊಬ್ಬರಿಗೆ (Old Man) ಸೆಕ್ಯೂರಿಟಿ ಗಾರ್ಡ್ (Security Guard) ವಂಚಿಸಿ ಲಕ್ಷ, ಲಕ್ಷ ರೂ. (Money) ದೋಚಿರುವ ಘಟನೆ ಬೆಂಗಳೂರಿನ (Bengaluru) (ಪೀಣ್ಯದಲ್ಲಿ Peenya) ನಡೆದಿದೆ.
ಪೀಣ್ಯದ ಚಿಕ್ಕರಂಗಯ್ಯ ಕಳೆದ ವರ್ಷ ಖಾಸಗಿ ಕಂಪನಿಯಿಂದ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕ ಗ್ರಾಜುಟಿ ಪಂಡ್ ಅಂತಾ ಬಂದ ಹಣದಲ್ಲಿ ಹೇಗೋ ಜೀವನ ಸಾಗಿಸಬಹುದು ಅಂತಾ ಇದ್ದ ಇವರಿಗೆ ಮನೆ ಬಳಿಯ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಅನಕ್ಷರಸ್ಥರಾಗಿರೋ ಚಿಕ್ಕರಂಗಯ್ಯಗೆ ಎಟಿಎಂನಿಂದ ಹಣ ಡ್ರಾ ಮಾಡಲು ಕಷ್ಟವಾಗುತ್ತಿತ್ತು. ಹಾಗಾಗಿ ಹಣ ಡ್ರಾ ಮಾಡಿಕೊಡುವಂತೆ ತಮ್ಮ ಮನೆಯ ಬಳಿಯೇ ಇರುವ ಎಟಿಎಂನ ಸೆಕ್ಯೂರಿಟಿ ಗಾರ್ಡ್‍ಗೆ ಹೇಳುತ್ತಿದ್ದರು. ಹೀಗೆ ಇವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗಲೆಲ್ಲಾ ಸೆಕ್ಯೂರಿಟಿ ಗಾರ್ಡ್ ಹಣ ಡ್ರಾ ಮಾಡಿ ಕೊಟ್ಟು ಚಿಕ್ಕರಂಗಯ್ಯಗೆ ಗೊತ್ತಾಗದಂತೆ ಬರೋಬ್ಬರಿ 2.50 ಲಕ್ಷದಷ್ಟು ರೂ. ಖಾತೆಯಿಂದ ಎಗರಿಸಿದ್ದಾನೆ. ಇದನ್ನೂ ಓದಿ: ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ
ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ (Hospital) ಸೇರಿದ ಸಂದರ್ಭ ಚಿಕ್ಕರಂಗಯ್ಯಗೆ ತನ್ನ ಖಾತೆಯಿಂದ ಇಷ್ಟೊಂದು ಹಣ ಡ್ರಾ ಆಗಿದೆ ಅನ್ನೋದು ಗೊತ್ತಾಗಿದೆ. ಕೂಡಲೇ ಯಶವಂತಪುರ (Yeswanthpur) ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ 4 ತಿಂಗಳು ಆದ್ರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಠಾಣೆಗೆ ಬಂದು ಬಂದು ಸಾಕಾಗಿ ಹೋಗಿದೆ. ನನಗೆ ನನ್ನ ಹಣ ಹಿಂತಿರುಗಿಸಿ ಕೊಡಿ ಎಂದು ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: ಸ್ನೇಹಿತರಿಗೆ 1 ಲಕ್ಷ ರೂ. ಸಾಲ ಕೊಡಿಸಲು ಮಧ್ಯಸ್ಥಿಕೆ- ಕಿರುಕುಳದಿಂದ ಮಹಿಳೆ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k