– ಅಮೂಲ್ಯ ತಂದೆ, ಮನೆಗೆ ಪೊಲೀಸ್ ಭದ್ರತೆ
ಚಿಕ್ಕಮಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ ಅಮೂಲ್ಯ ಘೋಷಣೆ ಹಿಂದೂಪರ ಸಂಘಟನೆಗಳನ್ನ ಕೆರಳಿಸಿದೆ. ಚಿಕ್ಕಮಗಳೂರಿನ ಕೊಪ್ಪದ ಶಿವಪುರದಲ್ಲಿರುವ ಅಮೂಲ್ಯ ನಿವಾಸಕ್ಕೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿ, ಮನೆ ಮೇಲೆ ಕಲ್ಲು, ಇಟ್ಟಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ
Advertisement
ಇತ್ತ ಹಿಂದೂ ಪರ ಸಂಘಟನೆಗಳು ಮನೆ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದು, ಅಮೂಲ್ಯ ತಂದೆ ವಾಜಿ ಹಾಗೂ ಮನೆಗೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್
Advertisement
Advertisement
ಅಷ್ಟೇ ಅಲ್ಲದೇ ಅಮೂಲ್ಯ ಹೇಳಿಕೆ ಖಂಡಿಸಿ ಇಂದು ಚಿಕ್ಕಮಗಳೂರಿನ ಜಯಪುರ, ಬಾಳೆಹೊನ್ನೂರಿನಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ ಪ್ರತಿಭಟನೆಗೆ ಕರೆ ನೀಡಿದೆ. ಹಾಗೆಯೇ ಈಕೆ ವಿರುದ್ಧ ಸಚಿವ ಸಿ.ಟಿ ರವಿ ಅವರು ಕೂಡ ಆಕ್ರೋಶ ಹೊರಹಾಕಿ ಅವಳು ಯಾವ ಸಂಘಟನೆಗೆ ಸೇರಿದವಳು, ಎಲ್ಲಿ ತರಭೇತಿ ಪಡೆದಿದ್ದಾಳೆಂದು ತನಿಖೆಯಾಗಬೇಕೆಂದು ಎಂದು ಆಗ್ರಹಿಸಿದ್ದಾರೆ. ಮಗಳ ದೇಶದ್ರೋಹಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಮೂಲ್ಯ ತಂದೆ, ಅವಳು ಮಾಡಿದ್ದು ತಪ್ಪು, ಆಕೆಯ ಕೈಕಾಲು ಮುರೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ
Advertisement
ಬೆಂಗಳೂರು, ಮಂಗಳೂರು, ಬಳ್ಳಾರಿಗಳಲ್ಲಿ ಎವಿವಿಪಿ ಕಾರ್ಯಕರ್ತರು ಅಮೂಲ್ಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅತ್ತ ಯಾದಗಿರಿಯ ಯೋಧ ದೇವೇಂದ್ರ ಅವರು ಪ್ರತಿಕ್ರಿಯಿಸಿ, ನಾವು ಗಡಿಯಲ್ಲಿ ನಿಂತು ಭಾರತಾಂಬೆಯ ಸೇವೆ ಮಾಡುತ್ತೇವೆ. ಆದರೆ ದೇಶದ ಒಳಗಡೆ ಅಮೂಲ್ಯನಂತ ವಿಕೃತ ಮನಸ್ಸಿನವರು ಇದ್ದಾರೆ ಅಂತ ಕಿಡಿಕಾರಿದ್ದಾರೆ.