– ಬಂಗಾಳದಲ್ಲಿ ಬಿಜೆಪಿ ಯುಗಾರಂಭ
ಕೋಲ್ಕತ್ತಾ: ದಶಕಗಳ ಕಾಯುವಿಕೆಯ ನಂತ್ರ ಬಂಗಾಳದಲ್ಲಿ ಬಿಜೆಪಿ ಯುಗಾರಂಭವಾಗಿದೆ. ಶನಿವಾರ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸುವೇಂದು ಅಧಿಕಾರಿ (Suvendu Adhikari) ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಆದ್ರೆ ಈ ಸಮಾರಂಭದಲ್ಲಿ ಮೋದಿ (Narendra Modi) ಅವರು ಹಿರಿಯ ಕಾರ್ಯಕರ್ತರೊಬ್ಬರಿಗೆ ತೋರಿದ ಗೌರವದ ನಡೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
How BJP respects its seniors and karyakartas…
On the stage, the Prime Minister took the blessings of Shri Makhanlal Sarkar, one of the BJP’s most senior workers in West Bengal.
At the age of 98, Shri Makhanlal Sarkar remains one of the earliest grassroots figures associated… pic.twitter.com/TmtslxD4wQ
— Amit Malviya (@amitmalviya) May 9, 2026
ಹೌದು. ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ವೇದಿಗೆ ಆಗಮಿಸಿದ ಮೋದಿ ಅವರು, 98 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತರೊಬ್ಬರ ಪಾದಮುಟ್ಟಿ ನಮಸ್ಕರಿಸಿದರು. ಶಾಲು ಹೊದಿಸಿ ಗೌರವಿಸಿ, ಪ್ರೀತಿಯ ಅಪ್ಪುಗೆ ನೀಡಿ ಶುಭಹಾರೈಸಿದರು. ಸಾಮಾನ್ಯ ಕಾರ್ಯಕರ್ತರಾದ ಮಖನ್‌ಲಾಲ್ ಸರ್ಕಾರ್ (Makhanlal Sarkar) (98) ಮಖನ್ ಲಾಲ್ ಸರ್ಕಾರ್ ಅವರಿಗೆ ಪ್ರಧಾನಿ ಮೋದಿ ಅವರು ನೀಡಿದ ಗೌರವ, ಅಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬೆನ್ನಲ್ಲೇ ಪ್ರಧಾನಿಗಳೇ ಪಾದಮುಟ್ಟಿ ನಮಸ್ಕರಿಸಿದ ಮಖನ್‌ಲಾಲ್ ಸರ್ಕಾರ್ ಯಾರು? ಅನ್ನೋ ಕುತೂಹಲ ಹೆಚ್ಚಾಗಿದೆ. ಹಲವಾರು ಜನ ಈ ವ್ಯಕ್ತಿಯ ಬಗ್ಗೆ ತಿಳಿಯಲು ಜಾಲತಾಣದಲ್ಲಿ ಹುಡುಕಾಡಿದ್ದಾರೆ.
#WATCH Kolkata | BJP leader Suvendu Adhikari takes oath as the first BJP Chief Minister of West Bengal since independence pic.twitter.com/tTMotWpIld
— ANI (@ANI) May 9, 2026
98 ವರ್ಷದ ಮಖನ್‌ಲಾಲ್ ಸರ್ಕಾರ್ ಯಾರು?
98 ವರ್ಷದ ಮಖನ್‌ಲಾಲ್ ಸರ್ಕಾರ್ ಸರ್ಕಾರ್ ಅವರನ್ನು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯವಾದಿ ಚಳವಳಿಯಲ್ಲಿ ತೊಡಗಿಸಿಕೊಂಡ ಆರಂಭಿಕ ಹಾಗೂ ತಳಮಟ್ಟದ ಕಾರ್ಯಕರ್ತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದರು.
1980 ರಲ್ಲಿ ಬಿಜೆಪಿ ರಚನೆಯಾದ ನಂತರ, ಅವರನ್ನ ಪಶ್ಚಿಮ ದಿನಾಜ್‌ಪುರ, ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳಿಗೆ ಸಂಘಟನಾ ಸಂಯೋಜಕರಾಗಿ ನೇಮಿಸಲಾಗಿತ್ತು. ಕೇವಲ ಒಂದೇ ವರ್ಷದೊಳಗೆ, ಮಖನ್‌ಲಾಲ್ ಸರ್ಕಾರ್ ಅವರು ಸುಮಾರು 10,000 ಹೊಸ ಸದಸ್ಯರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು.
1981 ರಿಂದ ಸತತ 7 ವರ್ಷಗಳ ಕಾಲ ಅವರು ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಸಮಯದಲ್ಲಿ ಇದನ್ನು ಅಸಾಧಾರಣ ಸಾಧನೆ ಎಂದೇ ಪರಿಗಣಿಸಲಾಗಿತ್ತು. ಏಕೆಂದ್ರೆ ಬಿಜೆಪಿ ನಾಯಕರು ಸಾಮಾನ್ಯವಾಗಿ 2 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ಸಂಘಟನಾ ಹುದ್ದೆಯಲ್ಲಿ ಉಳಿಯುತ್ತಿರಲಿಲ್ಲ.

