ಚಿಕ್ಕಮಗಳೂರು: ಜಿಲ್ಲೆಯ (Chikkamagaluru) ಕೊಟ್ಟಿಗೆಹಾರ, ಬಣಕಲ್, ಆಲ್ದೂರು ಹಾಗೂ ಮತ್ತಿಕಟ್ಟೆಯಲ್ಲಿ ಭಾರೀ ಗಾಳಿ (Rain) ಮಳೆಯಾಗುತ್ತಿದೆ. ಗುಡುಗು-ಸಿಡಿಲಿನ ಸಹಿತ ಭಾರೀ ಮಳೆ ಸುರಿಯುತ್ತಿದೆ. ಹಲವೆಡೆ ಭಾರೀ ಆಲಿಕಲ್ಲಿನ ಮಳೆಯಾಗಿದೆ.
ಇದ್ದಕ್ಕಿದ್ದಂತೆ ಆರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದೆ. ಹಗಲಲ್ಲಿ ಭಾರೀ ಬಿಸಿಲು, ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲು-ಮಳೆಯಿಂದ ಭೂಮಿಯ ಧಗೆ ಹೆಚ್ಚಾಗಿ ಜನರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಕಾಫಿ, ಅಡಿಕೆಗೆ ನೀರು ಹಾಯಿಸಲು ಪರದಾಡುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಮಳೆ ಕಂಡು ಖುಷಿಯಾದ ವೃದ್ಧರೊಬ್ಬರು, ಮಳೆಯಲ್ಲಿ ನೆನೆಯುತ್ತಾ ರಸ್ತೆ ಮಧ್ಯೆ ಸಂತೋಷದಿಂದ ಡ್ಯಾನ್ಸ್ ಮಾಡಿದ್ದಾರೆ.
ಆಲ್ದೂರು ಸಮೀಪದ ಅಡ್ಡಮಕ್ಕಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿಯುತ್ತಿದ್ದು, ಮಹಿಳೆಯೊಬ್ಬರು ಆಲಿಕಲ್ಲುಗಳನ್ನು ಆರಿಸಿದ್ದಾರೆ. ಅಲ್ಲಿಕಲ್ಲು ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕದಲ್ಲಿ ಬೆಳೆಗಾರರಿದ್ದಾರೆ. ಇದನ್ನೂ ಓದಿ: ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ವಿದ್ಯುತ್ ಕಂಬ, ಮರಗಳು



