ಪ್ರೆಗ್ನೆನ್ಸಿ ಕನ್‌ಫ್‌ರ್ಮ್ ಮಾಡಿದ ಕೆಲ ದಿನಗಳ ನಂತರ ನಟಿ ಸಮಂತಾ (actress Samantha) ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಗರ್ಭಾವಸ್ಥೆಯನ್ನು (Instagram Post) ಸಂತೋಷದಿಂದ ಎಂಜಾಯ್ ಮಾಡುತ್ತಿರುವ ನಟಿ ಸಮಂತಾ ಪ್ರಸ್ತುತ ಎರಡನೇ ತ್ರೈಮಾಸಿಕದಲ್ಲಿ, ಎಂದಿನಂತೆ ತಮ್ಮ ದೈನಂದಿನ ಜೀವನವನ್ನು ಸಹಜವಾಗಿ ಮುಂದುವರಿಸಿದ್ದಾರೆ. ಏಕಾಂಗಿಯಾಗಿ ಪ್ರಯಾಣ ಮಾಡುವುದು, ಮಾಡೆಲಿಂಗ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 38 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ (Social Media) ಸದಾ ಸಕ್ರಿಯರಾಗಿರುತ್ತಾರೆ. ಫ್ಯಾಷನ್ ಟ್ರೆಂಡ್‌ಗಳನ್ನು ಅನುಸರಿಸುವುದಕ್ಕಿಂತ ಹೊಸ ಟ್ರೆಂಡ್‌ಗಳನ್ನು ಸೃಷ್ಟಿಸುವವರಾಗಿ ಅವರು ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅನೇಕ ಯುವತಿಯರಿಗೆ ಸಮಂತಾ ರೋಲ್ ಮಾಡೆಲ್ ಆಗಿದ್ದಾರೆ.ಇದನ್ನೂ ಓದಿ: ಹೀರೋ ಆದ ಮ್ಯೂಸಿಕ್ ಮಾಂತ್ರಿಕ ಡಿಎಸ್‌ಪಿ- ಯಲ್ಲಮ್ಮ ಸಿನಿಮಾ ಫಸ್ಟ್ ಲುಕ್ ರಿಲೀಸ್
ಇದೀಗ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕೆಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಡಿಸೈನರ್ ಉಡುಗೆಯಲ್ಲಿ ಅವರು ಮಿಂಚಿದ್ದು, ಅವರ ಪ್ರೆಗ್ನೆನ್ಸಿ ಗ್ಲೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಹಿಂದೆ ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರದ ವೇಳೆಯೂ ಸಮಂತಾ ಗರ್ಭಿಣಿಯಾಗಿದ್ದರು. ಈಗಲೂ ಯಾವುದೇ ಹಿಂಜರಿಕೆ ಇಲ್ಲದೆ ಸಹಜವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗರ್ಭಾವಸ್ಥೆಯನ್ನು ಮರೆಮಾಚುವ ಪ್ರಯತ್ನ ಮಾಡದೇ, ಪ್ರತಿ ತಾಯಿಗೂ ಪ್ರಕೃತಿ ನೀಡುವ ಈ ಸುಂದರ ಬದಲಾವಣೆಯನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇದೇ ಕಾರಣಕ್ಕೆ ಸಮಂತಾ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸುತ್ತಿದ್ದು, ಸದ್ಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಅಪ್‌ಕಮಿಂಗ್ ಮಾಮ್ ಆಗಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.ಇದನ್ನೂ ಓದಿ: ಸಿದ್ದು ಪೂರ್ಣಚಂದ್ರ ನಿರ್ದೇಶನದ ಬ್ರಹ್ಮಕಮಲ ಟ್ರೈಲರ್ ರಿಲೀಸ್
