– ಮತ್ತೆ ಪ್ರತಿಭಟನೆಗೆ ಕೂರಬೇಕಾಗಬಹುದು
ನವದೆಹಲಿ: ನಾನು ನನ್ನ ಪದವಿ ಪ್ರಮಾಣಪತ್ರ ತೋರಿಸಲು ಸಿದ್ಧವಿದ್ದೇನೆ. ಚಕ್ರವರ್ತಿ ತೋರಿಸಲು ಸಿದ್ಧವಿದ್ದಾರಾ? ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಪ್ರಧಾನಿ ಮೋದಿ (PM Modi) ಅವರಿಗೆ ಪ್ರಶ್ನಿಸಿದ್ದಾರೆ.
ತಮ್ಮ ಅಮೆರಿಕ ಬೋಸ್ಟನ್ ವಿವಿಯಲ್ಲಿ ವಿದ್ಯಾಭ್ಯಾಸಕ್ಕೆ ಎಲ್ಲಿಂದ ಹಣ ಬಂತು? ಸಿಜೆಪಿಯ ಫಂಡ್ ಮೂಲ ಏನು? ಅಂತ ಪ್ರಶ್ನಿಸಿರುವ ಸೂರತ್ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿಗೆ ಕೌಂಟರ್ ಕೊಟ್ಟು, ಸ್ಕಾಲರ್‌ಶಿಪ್, ಎಜುಕೇಷನ್ ಲೋನ್ ಮೂಲಕ ವಿದ್ಯಾಭ್ಯಾಸ ಮಾಡಿದ್ದೇನೆ. ಬೇಕಿದ್ದರೆ ತನಿಖೆ ಮಾಡಲಿ ಅಂತ ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ಬಗ್ಗೆ ಕೇಳಿದ ರೀತಿಯೇ ಮೊದಲು `ಪಿಎಂ ಕೇರ್ಸ್ ಫಂಡ್’ ಬಗ್ಗೆಯೂ ಗಮನಹರಿಸಿ ಅಂದಿದ್ದಾರೆ. ಜೊತೆಗೆ, ದೇಶದ ದೊರೆ ತನ್ನ ಪದವಿಯನ್ನು ಬಹಿರಂಗಪಡಿಸುವರೇ? ಅಂತ ಮೋದಿಗೂ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಛಿದ್ರ – ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್‌ಗೆ ಗೆಲುವು
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಇನ್ನೂ 1 ಕೋಟಿ ರೂ. ಪರಿಹಾರ ನೀಡಿಲ್ಲ. ನೀವು ನಿಮ್ಮ ಮಾತನ್ನು ಈಡೇರಿಸಲ್ಲ. ನಾವು ಮತ್ತೆ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗುತ್ತದೆ. ಸಂಸದರು ಅಥವಾ ಶಾಸಕರನ್ನು ಖರೀದಿಸಬೇಕಾದಾಗ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತೀರಿ. ಆದರೆ ಪರಿಹಾರ ನೀಡುವಾಗ ಮಾತ್ರ ನಿಯಮಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ, ಪ್ರಹ್ಲಾದ್ ಜೋಶಿ ಅವರನ್ನು ಹೊಸ ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಿಸಿರುವುದನ್ನು ನಾವು ಬೆಂಬಲಿಸುವುದಿಲ್ಲ. ಬಿಲ್ಕಿಸ್ ಬಾನೋ ಪ್ರಕರಣದ ಅತ್ಯಾಚಾರಿಗಳಿಗೆ ಅವರು ಹಾರ ಹಾಕಿ ಗೌರವಿಸುತ್ತಿರುವುದು ಕಂಡುಬಂದಿದೆ. ಇಂತಹ ದೃಶ್ಯಗಳನ್ನು ನೋಡಿದಾಗ ಶಾಲೆಗೆ ಹೋಗುವ ಬಾಲಕಿಯರಿಗೆ ಹೇಗೆ ಅನಿಸಬಹುದು ಎಂಬುದನ್ನು ಊಹಿಸಿಕೊಳ್ಳಿ. ಈ ಮಧ್ಯೆ, ಮೋದಿಯನ್ನು ನಿಂದಿಸಿ ಕ್ಷಮೆ ಕೇಳಿರುವ ಅಪ್ರಾಪ್ತೆ ರುಚಿಕಾ ಸಿಂಗ್ ಮೇಲೆ ಕಾನೂನು ಕ್ರಮ ಇಲ್ಲ ಅಂತ ದೆಹಲಿ ಪೊಲೀಸರು ಹೇಳಿದ್ದಾರೆ. ಮೋದಿ ಅವರು ಕ್ಷಮಾಧಾನ ನೀಡಿದಾಗಲೇ ಕೇಸ್ ಕ್ಲೋಸ್ ಆಗಿದೆ ಅಂದಿದ್ದಾರೆ.ಇದನ್ನೂ ಓದಿ: ಸಮಯ ಬಂದಾಗ ನಿರ್ಧಾರ ತೆಗೆದುಕೊಳ್ತೀನಿ: ಮಂಕಾಳು ವೈದ್ಯ
