– ಸಿದ್ದರಾಮಯ್ಯ & ನಾನು ಒಟ್ಟಿಗೆ ಪಟ್ಟಿ ರೆಡಿ ಮಾಡಿದ್ವಿ, ಅಸಮಾಧಾನ ಏನೂ ಇಲ್ಲ ಎಂದ ಡಿಕೆಶಿ
ಬೆಂಗಳೂರು: ಧರ್ಮಸಿಂಗ್ ಕಾಲದಲ್ಲಿ ನನ್ನ, ಪರಮೇಶ್ವರ್‌ರನ್ನ ದೂರ ಇಟ್ಟಿದ್ದರು. ತಾಳ್ಮೆ ಇರಬೇಕು ಎಂದು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರಿಗೆ ಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ನೂತನ ಸಚಿವ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ತಾನೆ ಕ್ಯಾಬಿನೆಟ್, ನೂತನ ಸಚಿವರ ಜೊತೆ ಮಾತನಾಡಿ ಮಾರ್ಗದರ್ಶನ ನೀಡಿದ್ದೇನೆ. ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮದು ದೊಡ್ಡ ಪಕ್ಷ. ಎಲ್ಲರೂ ಆರ್ಹತೆಯಿದ್ದವರೇ. ಧರ್ಮಸಿಂಗ್ ಕಾಲದಲ್ಲಿ ನನ್ನ, ಪರಮೇಶ್ವರ್‌ರನ್ನ ದೂರ ಇಟ್ಟಿದ್ದರು. ತಾಳ್ಮೆ ಇರಬೇಕು ಎಂದು ತಿಳಿಸಿದರು.
ಇರೋದು 33 ಸ್ಥಾನ. ಮಹಿಳಾ ಸ್ಥಾನವನ್ನ ಫಿಲ್ ಮಾಡ್ತೇವೆ. ಏನೇನು ಸವಾಲು, ಸಮಸ್ಯೆಗಳು ಬರಬಹುದು ಎಂದು ನೂತನ ಸಚಿವರಿಗೆ ಹೇಳಿದ್ದೇನೆ ಎಂದರು.
ನೂತನ ಸಚಿವರ ಪ್ರಮಾಣ ವಚನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು, ಅವ್ರು ಒಟ್ಟಿಗೆ ಸೇರಿ ಪಟ್ಟಿ ರೆಡಿ ಮಾಡಿದ್ವಿ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಇವತ್ತು. ಅಸಮಾಧಾನ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ಸಚಿವರಲ್ಲಿ ಕೆಲವರ ಹೆಸರು ಕೈಬಿಟ್ಟ ವಿಚಾರದ ಬಗ್ಗೆ ಮಾತನಾಡಿ, ಹೈಕಮಾಂಡ್‌ನಿಂದ ಏನು ಬಂದಿದೆ ಅಷ್ಟೆ. ಗಾಯಿತ್ರಿ ಶಾಂತನಗೌಡರನ್ನ ಪಟ್ಟಿಯಿಂದ ಕೈಬಿಟ್ಟ ವಿಚಾರ ಟೆಕ್ನಿಕಲ್ ಸಮಸ್ಯೆ. ಮಂಕಾಳು ವೈದ್ಯ ಅವರು ನನ್ ಜೊತೆಯಲ್ಲಿಯೇ ಇದ್ದಾರೆ. ಹೆಣ್ಮಕ್ಕಳಿಗೆ ಸಚಿವ ಸ್ಥಾನ ಕೊಡ್ತೀವಿ ಎಂದು ಸಿಎಂ ತಿಳಿಸಿದರು.
ನಾಗೇಂದ್ರಗೆ ಸಚಿವ ಸ್ಥಾನ ಕೊಟ್ಟಿರೋದಕ್ಕೆ ಬಿಜೆಪಿ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮೇಲೆಯೂ ಭ್ರಷ್ಟಾಚಾರ ಪ್ರಕರಣಗಳಿವೆ. ನನ್ ಮೇಲೆ ಕೇಸ್ ಹಾಕ್ತಾರಾ ಎಂದು ಪ್ರಶ್ನಿಸಿದರು.
