ವಿಜಯಪುರ: ವಿಧಾನಸಭೆ ಚುನಾವಣೆಗೆ ಇನ್ನು 2 ವರ್ಷ ಇದೆ. ಆದ್ರೆ ಈಗಾಗಲೇ ರಾಜ್ಯದಲ್ಲಿ ತಮ್ಮ ತಮ್ಮ ಬಲವರ್ಧನೆಗೆ ಪಕ್ಷಗಳು ಮುಂದಾಗಿವೆ. ಸದ್ಯ ರಾಜ್ಯ ಬಿಜೆಪಿ (BJP) ಮನೆಯೊಂದು ಹತ್ತು ಬಾಗಿಲಿನಂತಾಗಿದೆ.
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಿತರು, ಉಚ್ಚಾಟಿತರೇ ಜಾಸ್ತಿ ಆಗಿದ್ದು, ಇದರೊಂದಿಗೆ 2028ರ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸುವುದು ಅಸಾಧ್ಯ ಅನ್ನೋದು ಬಿಜೆಪಿ ಹೈಕಮಾಂಡ್‌ಗೆ ತಿಳಿದಿದೆ. ಹೀಗಾಗಿ ರಾಜ್ಯ ಬಿಜೆಪಿ ಗಟ್ಟಿಗೊಳಿಸಲು ಇದೀಗ ಬಿಜೆಪಿ ಹೈಕಮಾಂಡ್ (BJP High Command) ಮಾಸ್ಟರ್ ಪ್ಲ್ಯಾನ್ ಹೆಣದಿದೆ. ಇದನ್ನೂ ಓದಿ: ಕರಾವಳಿಯ ಪ್ರತಿ ಕ್ಷೇತ್ರಕ್ಕೆ 200 ಕೋಟಿ ಅನುದಾನ ಬಿಡುಗಡೆ ಮಾಡಿ: ವಿಜಯೇಂದ್ರ ಆಗ್ರಹ
ರಾಜ್ಯ ಬಿಜೆಪಿ ಸದ್ಯ ಮನೆಯೊಂದು ಮೂರು ಬಾಗಿಲು ಅಲ್ಲ, ಹತ್ತು ಬಾಗಿಲು ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ಉಳಿದ ನಾಯಕರು ಒಗ್ಗುಡುತ್ತಿಲ್ಲ. ಜೊತೆಗೆ ಅನೇಕ ಬಿಜೆಪಿಯ ಪ್ರಮುಖ ನಾಯಕರು ಪಕ್ಷ ಬಿಟ್ಟು ಹೋದ್ರೆ, ಕೆಲವರು ಉಚ್ಚಾಟನೆಗೊಂಡಿದ್ದಾರೆ. ಇನ್ನು ಕೆಲವು ಹಾಲಿ ಮತ್ತು ಮಾಜಿ ಶಾಸಕರಂತೂ ವಿಜಯೇಂದ್ರ ವಿರುದ್ಧ ಆಗಾಗ ಅಸಮಾಧಾನ ಹೊರಹಾಕುತ್ತಲೇ ಇರುತ್ತಾರೆ. ಇದರಿಂದ ಮುಂದಿನ 2028ರ ವಿಧಾನಸಭೆ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಅನ್ನೋ ಸತ್ಯ ಬಿಜೆಪಿ ಹೈಕಮಾಂಡ್‌ಗೆ ತಿಳಿದಿದೆ. ಹೀಗಾಗಿ ಇದನ್ನ ಸರಿಪಡಿಸಿ ಶತಾಯ ಗತಾಯ ರಾಜ್ಯದಲ್ಲಿ ಮತ್ತೆ ಬಿಜೆಪಿ ತರಬೇಕು ಅಂತಾ ಹೈಕಮಾಂಡ್ ನಿರ್ಧರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಜಯೇಂದ್ರ ಹೊರತುಪಡಿಸಿ ಬೇರೆಯವರಿಗೆ ಕೊಡುವುದು. ಬಿಜೆಪಿ ಬಿಟ್ಟು ಹೋಗಿರುವ ಹಾಗೂ ಉಚ್ಚಾಟಿತರಾಗಿರುವ ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರನ್ನ ಮರಳಿ ಪಕ್ಷಕ್ಕೆ ಕರೆತರಲು ಹೈಕಮಾಂಡ್ ಚಿಂತನೆ ನಡೆಸಿದೆ. ಅಷ್ಟೆ ಅಲ್ಲದೇ ಅನೇಕ ಕಾಂಗ್ರೆಸ್‌ನ ಹಾಲಿ ಶಾಸಕರು, ಮಾಜಿ ಶಾಸಕರನ್ನು ಬಿಜೆಪಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆಂದು ಮಾಜಿ ಸಚಿವ ಮುರಗೇಶ ನಿರಾಣಿ ಬಹಿರಂಗವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಇದನ್ನೂ ಓದಿ: ಇನ್ಸ್‌ಪೆಕ್ಟರ್ ಧನಂಜಯ್ ಧಮ್ಕಿಗೆ ಸವಾಲ್ ಆಗಿ ಶುಕ್ರವಾರ ಟಿ. ನರಸೀಪುರದಲ್ಲಿ ಶೋಭಾಯಾತ್ರೆ
ರಾಜ್ಯದ ಚುಕ್ಕಾಣಿ ಹಿಡಿಯುವುದು ನಂಬರ್ ಗೇಮ್ ಆಗಿದ್ದು, ಬಿಜೆಪಿಯ ಎಲ್ಲ ನಾಯಕರು ಮರಳಿ ಒಟ್ಟಾದ್ರೆ ಇದೇನು ದೊಡ್ಡ ಸಂಖ್ಯೆಯಲ್ಲ. ಅದಕ್ಕಾಗಿ ಈಗಾಗಲೇ ಹೈಕಮಾಂಡ್ ಚಿಂತನೆ ನಡೆಸಿದ್ದು, ಆದಷ್ಟು ಬೇಗ ಈ ಕಾರ್ಯ ನಡೆಯಲಿದೆ ಎಂದು ನಿರಾಣಿ ಹೇಳಿದ್ದಾರೆ. ನಿರಾಣಿ ಈ ಹೇಳಿಕೆಯಿಂದ ಬಿಜೆಪಿ ನಾಯಕರ ಜೊತೆಗೆ ಕಾಂಗ್ರೆಸ್ ನಾಯಕರಲ್ಲಿ ಕೌತುಕ ಮನೆ ಮಾಡಿದೆ.ಇದನ್ನೂ ಓದಿ: ಸಿಡಿಲಬ್ಬರದ ಶತಕ, ಇತಿಹಾಸ ನಿರ್ಮಿಸಿದ ಅಭಿ – 13 ವರ್ಷ ಹಿಟ್‌ಮ್ಯಾನ್ ಹೆಸರಲ್ಲಿದ್ದ ದಾಖಲೆ ಉಡೀಸ್

