ಬೆಂಗಳೂರು: ಎಂಎಲ್‌ಎ ಆದರೂ ಬಾಡಿಗೆ ಮನೆಯಲ್ಲೇ ವಾಸ.. ಸಿಂಪಲ್ ಹಾಗೂ ಜನಸಾಮಾನ್ಯರ ಶಾಸಕ ಎಂದೇ ಹೆಸರಾಗಿರುವ ಕೆ.ಎಸ್.ಬಸವಂತಪ್ಪ (K.S.Basavantappa) ಈಗ ಸಚಿವರಾಗಿದ್ದಾರೆ.
ಮೊದಲ ಬಾರಿಗೆ ದಾವಣಗೆರೆ (Davanagere) ಜಿಲ್ಲೆ ಮಾಯಕೊಂಡ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಸವಂತಪ್ಪಗೆ ಸಚಿವ ಸ್ಥಾನ ಸಿಕ್ಕಿದೆ. ಎಸ್.ಎಸ್ ಬಡಾವಣೆ ಬಿ ಬ್ಲಾಕ್‌ನ ನಿವಾಸದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಸಿದ್ದು ಅಪ್ತರಲ್ಲಿ ಗುರುತಿಸಿಕೊಂಡಿದ್ದ ಆರ್.ಬಿ.ತಿಮ್ಮಾಪುರ ಬದಲಿಗೆ ಬಸವಂತಪ್ಪಗೆ ಸಚಿವ ಸ್ಥಾನ ಲಭಿಸಿದೆ. ಶಾಸಕಾರಾದರೂ ಸ್ವಂತ ಮನೆಯನ್ನು ಹೊಂದಿರದ ಬಸವಂತಪ್ಪ ಜನಸಾಮ್ಯಾನರ ಶಾಸಕರಂದೇ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಡಿಕೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು
ದಲಿತ ಎಡಗೈ ಮಾದಿಗ ಸಮುದಾಯದ ಬಸವಂತಪ್ಪ ಅವರು ಮಾಜಿ ಸಚಿವ ಹೆಚ್.ಆಂಜನೇಯ ಅವರ ಸೋದರಳಿಯ ಕೂಡ ಹೌದು. ಇವರು ಈ ಹಿಂದೆ ದಾವಣಗೆರೆ ಜಿಪಂ ಸದಸ್ಯರಾಗಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ಜನಸಾಮಾನ್ಯರೊಂದಿಗೆ ಬೆರೆಯುವ ಇವರು ಸರಳತೆ ಬದುಕು ಅಳವಡಿಸಿಕೊಂಡಿದ್ದಾರೆ.
ಕ್ಷೇತ್ರದ ಮತದಾರರು ಅಪಘಾತ ಅಥವಾ ಇನ್ನಿತರ ಅವಘಡಗಳಲ್ಲಿ ಗಾಯಗೊಂಡರೆ ಶಾಸಕ ಬಸವಂತಪ್ಪ ಅವರು ತಕ್ಷಣ ನೆರವಿಗೆ ಧಾವಿಸುತ್ತಾರೆ. ಸರಳ ಮತ್ತು ಸಜ್ಜನಿಗೆ ಬದುಕನ್ನು ರೂಢಿಸಿಕೊಂಡಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಹಾಗೂ ಮೊದಲ ಬಾರಿ ಶಾಸಕರಾಗಿ ಗೆದ್ದವರಿಗೂ ಅವಕಾಶ ಸಿಕ್ಕಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಸಿಗದ ಕಾರಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಗೆಲುವು ಸಾಧಿಸಿದ ಲಕ್ಷ್ಮಣ್ ಸವದಿ ಸಚಿವರಾಗಿದ್ದಾರೆ. ಸವದಿ ಪುತ್ರ ಶಶಿಕಾಂತ್ ಕಟೀಲು ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಖರ್ಗೆ ತವರು ಜಿಲ್ಲೆಗೆ ಜಾಕ್‌ಪಾಟ್; ಅಜಯ್ ಸಿಂಗ್‌ಗೆ ಸಚಿವ ಸ್ಥಾನ, ಭಾವುಕರಾಗಿ ಕಣ್ಣೀರಿಟ್ಟ ತಾಯಿ
ಅಜಾತಶತ್ರುವಾಗಿ ಮೆರೆದಿದ್ದ ದಿವಂಗತ ಎನ್.ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು, ಬೆಂಗಳೂರಿನ ಅಜಯ್ ಸಿಂಗ್ ನಿವಾಸದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಮಗ ಮಂತ್ರಿಯಾಗುತ್ತಿರುವುದನ್ನು ಕೇಳಿ ಸಂತಸಗೊಂಡ ತಾಯಿ ಪ್ರಭಾವತಿ ಧರ್ಮಸಿಂಗ್ ಆನಂದಬಾಷ್ಪ ಸುರಿಸಿದರು. ಚಿತ್ರದುರ್ಗದ ರಘುಮೂರ್ತಿ, ಹಾಸನ ಅರಸೀಕೆರೆಯ ಶಿವಲಿಂಗೇಗೌಡ ಹಾಗೂ ಸಚಿವರಾದವರ ಫ್ಯಾನ್ಸ್ ಅಂತೂ ತಮ್ಮೂರುಗಳಲ್ಲಿ ಪಟಾಕಿ ಸಿಡಿಸಿ, ಜಯಘೋಷ ಮೊಳಗಿಸಿದರು.
