ಯಾದಗಿರಿ: ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟದಲ್ಲಿ (Western Ghats) ವರುಣನ ಅಬ್ಬರ ಜೋರಾಗಿದ್ದು, ಬತ್ತಿಹೋಗಿದ್ದ ಭೀಮಾ ನದಿಯ (Bhima River) ಒಡಲು ಒಂದೇ ದಿನ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಗುರುಸಣಗಿ ಬ್ಯಾರೇಜ್‌ನಿಂದ 50 ಸಾವಿರ ಕ್ಯೂಸೆಕ್ ನೀರನ್ನು ಭೀಮಾನದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Karnataka Cauvery Protest Live Updates | ಕರ್ನಾಟಕ ಬಂದ್‌ಗೆ ಸಂಘಟನೆಗಳ ಬೆಂಬಲ
ಅಪಾರ ಪ್ರಮಾಣ ನೀರು ಹರಿದುಬರುತ್ತಿರುವ ಹಿನ್ನೆಲೆ ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪರಿಣಾಮ ನದಿ ತೀರದಲ್ಲಿರುವ ವೀರಾಂಜನೇಯ, ಕಂಗಳೇಶ್ವರ ದೇಗುಲಗಳಿಗೆ ಜಲದಿಗ್ಬಂಧನವಾಗಿದೆ. ದೇಗುಲಗಳ ಮುಳುಗಡೆ ಹಿನ್ನೆಲೆ ಭಕ್ತರಿಗೆ ದರ್ಶನ ಭಾಗ್ಯ ಮರಿಚಿಕೆಯಾಗಿದ್ದು, ನದಿ ತೀರದ ದೂರದಿಂದಲೇ ದರ್ಶನ ಪಡೆಯುತ್ತಿದ್ದಾರೆ.
ಇತ್ತ ಭೀಮಾನದಿಗೆ ಜೀವಕಳೆಯಿಂದ ಬೆಳೆ ಬೆಳೆಯಲು ಅನ್ನದಾತರಿಗೆ ವರದಾನ ಸಿಕ್ಕಿದಂತಾಗಿದೆ.ಇದನ್ನೂ ಓದಿ: ಮುಂದಿನ ಮೂರು ದಿನ ರಾಜ್ಯದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
