ಜನರು ಆರೋಗ್ಯವಾಗಿರುವುದು ತಿನ್ನುವ ಆಹಾರದಿಂದ. ಅದರಲ್ಲಿಯೂ ನಾವು ಯಾವ ರೀತಿಯ ಆಹಾರ ತಿನ್ನುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತೆ. ಅದಕ್ಕೆ ಓಟ್ಸ್ ಪಾಕವಿಧಾನಗಳು ಅನೇಕ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಮುಖ್ಯವಾಗಿ ಬೆಳಗ್ಗಿನ ಆಹಾರಕ್ಕಾಗಿ ಸೇವಿಸಲಾಗುತ್ತದೆ. ಆದರೆ ಇದನ್ನು ಹೆಚ್ಚು ಜನರು ಹಾಲು ಅಥವಾ ಹಣ್ಣುಗಳ ಜೊತೆ ತಿನ್ನುತ್ತಾರೆ. ಆದರೆ ಇಂದು ನಾವು ಮಸಾಲೆಯುಕ್ತ ಓಟ್ಸ್ ಮಾಡುವುದು ಹೇಗೆ ಎಂದು ಸರಳ ಉಪಾಯದಲ್ಲಿ ಹೇಳಿಕೊಡುತ್ತೇವೆ.
Advertisement
ಬೇಕಾಗಿರುವ ಪದಾರ್ಥಗಳು:
* ಓಟ್ಸ್ – 1 ಕಪ್
* ಎಣ್ಣೆ – 1 ಟೇಬಲ್ಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಉದ್ದಿನ ಬೇಳೆ – ಅರ್ಧ ಟೀಸ್ಪೂನ್
* ಜೀರಿಗೆ – ಅರ್ಧ ಟೀಸ್ಪೂನ್
* ಕರಿಬೇವಿನ ಎಲೆ – 5 ರಿಂದ 10
* ಗೋಡಂಬಿ – 10
* ಶುಂಠಿ – 1 ಇಂಚು
* ಮೆಣಸಿನಕಾಯಿ – 2
Advertisement
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಕ್ಯಾರೆಟ್ – ಅರ್ಧ ಕಪ್
* ಕಟ್ ಮಾಡಿದ ಬೀನ್ಸ್ – ಅರ್ಧ ಕಪ್
* ಕಟ್ ಮಾಡಿದ ಕ್ಯಾಪ್ಸಿಕಂ – ಕಾಲು ಕಪ್
* ಬಟಾಣಿ – 2 ಟೇಬಲ್ಸ್ಪೂನ್
* ಅರಿಶಿನ – ಅರ್ಧ ಟೀಸ್ಪೂನ್
* ಉಪ್ಪು – ಅರ್ಧ ಟೀಸ್ಪೂನ್
* ನೀರು – 1 ಕಪ್
* ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
* ತುರಿದ ತೆಂಗಿನಕಾಯಿ – 2 ಟೇಬಲ್ಸ್ಪೂನ್
* ನಿಂಬೆ ರಸ – 1 ಟೇಬಲ್ಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಓಟ್ಸ್ ಅನ್ನು 5 ನಿಮಿಷಗಳ ಕಾಲ ಹುರಿಯಿರಿ. ಓಟ್ಸ್ ಗರಿಗರಿಯಾಗುವ ತನಕ ರೋಸ್ಟ್ ಮಾಡಿ. ಪಕ್ಕಕ್ಕೆ ಇರಿಸಿ.
* ಈಗ ಒಂದು ದೊಡ್ಡ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಕರಿ ಬೇವು ಮತ್ತು ಗೋಡಂಬಿಗಳನ್ನು ಸೇರಿಸಿ. ಗೋಡಂಬಿಗಳು ಗೋಲ್ಡನ್ ಬ್ರೌನ್ ಆಗುವ ತನಕ ಫ್ರೈ ಮಾಡಿ.
* ನಂತರ ಶುಂಠಿ, ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ಅದಕ್ಕೆ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಬಟಾಣಿ, ಅರಿಶಿನ ಮತ್ತು ಉಪ್ಪು ಸೇರಿಸಿ. 2 ನಿಮಿಷಗಳ ಕಾಲ ಫ್ರೈ ಮಾಡಿ.
* ಈಗ ಅದಕ್ಕೆ ನೀರು ಸೇರಿಸಿ, ಮುಚ್ಚಿ ಮತ್ತು 5 ನಿಮಿಷಗಳ ಕಾಲ ಬಿಡಿ. ತರಕಾರಿಗಳನ್ನು ಚೆನ್ನಾಗಿ ಬೇಯುವ ತನಕ ಕುಕ್ ಮಾಡಿ.
* ತರಕಾರಿಗಳು ಬೆಂದ ಮೇಳೆ ಅದಕ್ಕೆ ಹುರಿದ ಓಟ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಓಟ್ಸ್ ಎಲ್ಲ ನೀರನ್ನು ಹೀರಿಕೊಳ್ಳುವವರೆಗೂ ಮಿಶ್ರಣ ಮಾಡಿ 5 ನಿಮಿಷಗಳ ಕಾಲ ಮುಚ್ಚಿ.
* ಕೊನೆಗೆ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಮತ್ತು ನಿಂಬೆ ರಸವನ್ನು ಸೇರಿಸಿ. ಓಟ್ಸ್ ಸಂಪೂರ್ಣವಾಗಿ ಬೇಯಲು ಬಿಡಿ.
– ಆರೋಗ್ಯಕರ ತರಕಾರಿ ಓಟ್ಸ್ ಉಪ್ಪಿಟ್ಟು ಆನಂದಿಸಿ.