– ಸರ್ಕಾರಿ ದಾಖಲೆ ಕದ್ದು ಮಿಸ್ಸಿಂಗ್ ಅಂದ್ರು, ಜನರನ್ನ ಬೀದಿಗೆ ನಿಲ್ಲಿಸಿದ್ರು; ವಾಗ್ದಾಳಿ
ನವದೆಹಲಿ: 2006 ರಲ್ಲಿ ನಾನು ಸಿಎಂ ಆಗಿದ್ದಾಗ ರಾಜಕಾಲುವೆ ಮೇಲೆ ರಸ್ತೆ ಮಾಡಲು ನಿರ್ಧರಿಸಿದೆ. 5 ಟೌನ್ ಶಿಪ್ ಮಾಡಲು ನಿರ್ಧಾರ ಮಾಡಿದ್ದೆ, ಇದನ್ನ ನೂರಾರು ಬಾರಿ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಪ್ರತಿ ಹೇಳಿಕೆಗಳಿಗೂ ಕೌಂಟರ್ ಕೊಟ್ಟರು. ಬಿಡದಿ ಟೌನ್‌ಶಿಪ್ (Bidadi Township) ವಿಚಾರದಲ್ಲಿ ಪ್ರತಿನಿತ್ಯ ಕೆಸೆರೆಚಾಟ ಶುರುವಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ದಿನದಿಂದ ಸ್ವಂತಿಕೆ ಅನ್ನೊದೇ ಇಲ್ಲ. ವಿಧಾನಸೌಧದ ಮೆಟ್ಟಿಲಿಗೆ ಗೌರವ ಸಲ್ಲಿಸಿದ್ದು ಕಾಪಿ, ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದ ಕಾಪಿ ಮಾಡಿದ್ದಾರೆ ಎಂದು ಕುಟುಕಿದರು.
ಬಿಡದಿ ಯೋಜನೆಯ ಪಿತಾಮಹಾ ನಾನಲ್ಲ ಎಂದು ಹೇಳಿದ್ದಾರೆ. ನನ್ನ ಕನಸಿನ ಯೋಜನೆಯಲ್ಲ, ಅವಶ್ಯಕತೆ ಇಲ್ಲ ಎಂದಿದ್ದಾರೆ. ಅವಶ್ಯಕತೆ ಇಲ್ಲ ಅಂದ್ಮೇಲೆ ಯಾಕೆ ಕೈ ಹಾಕಿದ್ದಾರೆ? ಯಾರು ಇವರಿಗೆ ಮಾಡೋಕೆ ಹೇಳಿದ್ದು? ಈ ಯೋಜನೆಯ ಉದ್ದೇಶ ಏನಾಗಿತ್ತು ಹಿಂದೆ ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಯೋಜನೆಗೆ 2 ತಿಂಗಳು ತಾತ್ಕಾಲಿಕ ಬ್ರೇಕ್ – ಸಮಿತಿ ರಚಿಸುತ್ತೇನೆ ಎಂದ ಸಿಎಂ
ಎಂ.ಬಿ ಪಾಟೀಲ್ ಕೈಗಾರಿಕೆ ಸಚಿವರಾಗಿದ್ದರು. ಭೂಮಿ ಹಂಚಿಕೆಗೆ ಯಾರನ್ನ ಇಟ್ಟುಕೊಂಡಿದ್ದಾರೆ? ಯಾವ ಏಜೆಂಟ್ ಅನ್ನು ಇಟ್ಟುಕೊಂಡಿದ್ದರು? ನಾನು ಯಾವತ್ತು ಏಜೆಂಟ್ ಇಟ್ಟುಕೊಂಡಿರಲಿಲ್ಲ. ಒಂದೂವರೆ ಲಕ್ಷ ಭೂಮಿ ಕೊಟ್ಟಿದ್ದರು ಎಂದು ಸಿಎಂ ಹೇಳಿದ್ದಾರೆ. ಇಂದು ಕೋಟ್ಯಂತರ ಬೆಲೆ ಬಾಳಬಹುದು. ಆವತ್ತು ರೈತರು ಭೂಮಿಗಾಗಿ ಹೋರಾಟ ಮಾಡಲಿಲ್ಲ. ನಾನು ರೈತರಿಗೆ ನೋವು ಕೊಟ್ಟು ಒಕ್ಕಲೆಬಿಸುವುದಿಲ್ಲ, ಯೋಜನೆ ಮುಂದುವರಿಸಲ್ಲ ಎಂದು ನಾನು ಹೇಳಿದ್ದೆ. ಇವತ್ತು ಭೂಮಿ ಒತ್ತಾಯದಿಂದ ಪಡೆಯಲ್ಲ ಎಂದು ಸಿಎಂ ಹೇಳಿದ್ದಾರೆ. ಸಮಿತಿ ರಚನೆ ಮಾಡಿ ವರದಿ ನೀಡಲು ಸಮಯ ನೀಡುವುದಾಗಿ ಹೇಳಿದ್ದಾರೆ. ಯಾರ ನೇತೃತ್ವದಲ್ಲಿ ಸಮಿತಿ ರಚನೆ ಮಾಡ್ತಾರೆ? ನನ್ನದೂ ಜಮೀನು ಕೇತಾಗನಹಳ್ಳಿಯಲ್ಲಿದೆ. ಅಸೂಯೆ ಪಡೋದು ನನ್ನ ಚಾಳಿ ಅಲ್ಲ. ನಾನು ಸಿನಿಮಾದಲ್ಲಿ ಇದ್ದಾಗಲೇ ಜಮೀನು ಖರೀದಿಸಿದ್ದೆ. ಈವರೆಗೂ ಪೋಡಿ ಆಗಿಲ್ಲ, ನಾನು ಯಾರಿಗೂ ಬೆದರಿಸಿಲ್ಲ? ಎಂದು ಹೇಳಿದರು.
ನಾನು ಆಕಸ್ಮಿಕವಾಗಿ ಸಿಎಂ ಆದವನು, ನಾನು ಬೆಂಗಳೂರು ಅಭಿವೃದ್ಧಿಗೆ ಹಲವು ಯೋಜನೆ ತಂದಿದ್ದು ನಿಜ. ಇನರ್ ರಿಂಗ್ ರೋಡ್ ಮಾಡಲು 2006 ರಲ್ಲಿ ತಿರ್ಮಾನ ಮಾಡಿದ್ದೆ. ರಾಜಾಕಾಲುವೆ ಮೇಲೆ ರಸ್ತೆ ಮಾಡಲು ನಿರ್ಧರಿಸಿದ್ದೆ. ಐದು ಟೌನ್‌ಶಿಪ್ ಮಾಡಬೇಕು ಅಂತಲೂ ನಾನು ಯೋಚಿಸಿದ್ದೆ. ಇದನ್ನು ನೂರಾರು ಬಾರಿ ಹೇಳಿದ್ದೇನೆ. ಈ ಯೋಜನೆ ಬಗ್ಗೆ ಯೋಚನೆ ಮಾಡಿದಾಗ ಬಿಡದಿ ಭಾಗದ ರೈತರ ಜೊತೆಗೆ ಚರ್ಚಿಸಿದೆ. ಮೂರು ಸಭೆಯಲ್ಲಿ ರೈತರು ಮುಖಂಡರ ಅಭಿಪ್ರಾಯ ಕೇಳಿದೆ. ಏಕಾಏಕಿ ಅವರನ್ನು ಹೊರದಬ್ಬುವ ಕೆಲಸ ಮಾಡಲಿಲ್ಲ. ನೀವು ಏನ್ ಮಾಡುತ್ತಿದ್ದೀರಿ? ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಏನ್ ಮಾಡಿದ್ರಿ? ಸರ್ಕಾರಿ ದಾಖಲೆ ಕದ್ದು, ದಾಖಲೆ ಮಿಸ್ಸಿಂಗ್ ಅಂದ್ರು. ಜನರನ್ನು ಬೀದಿಗೆ ತಂದು ನಿಲ್ಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಧಿಕಾರಿಗಳಿಗೆ ಹೊಡೆಯೋದು ಬೇಡ, ತಪ್ಪುಮಾಡಿದ್ರೆ ನನಗೆ ಹೊಡೀರಿ, ಹೊಡೆಸಿಕೊಳ್ಳೋಕೆ ರೆಡಿ ಇದ್ದೀನಿ: ಡಿಕೆಶಿ
2007 ಅಕ್ಟೋಬರ್ ನಲ್ಲಿ ನಾನು ರಾಜೀನಾಮೆ ನೀಡಿದೆ. ಮುಂದೆ ಬಂದಿರುವ ಸರ್ಕಾರ ಏನು ಮಾಡಿದವು? ಡಿಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಎನ್ನಲು ಸಾಧ್ಯವಿಲ್ಲ. ಮಿಸ್ಟರ್ ಡಿ.ಕೆ ಶಿವಕುಮಾರ್, ಜನರು ಕೂಡ 70% ಮುಖ್ಯಮಂತ್ರಿ ಅಂತ ಇನ್ನೂ ಒಪ್ಪಿಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆ ಜಾರಿಗೆ ಯತ್ನ ನಡೆದಿದೆ. ನೀವು ಮುಖ್ಯಮಂತ್ರಿಯಾದ ಬಳಿಕ ವೇಗ ನೀಡಿದ್ದಾರೆ. ರೈತರು ಖುಷಿಯಿಂದ ಭೂಮಿ ಕೊಟ್ಟರೆ ನಮ್ಮದೇನು ಅಡ್ಡಿಯಿಲ್ಲ. ನಾವು ಜನರನ್ನು ಎತ್ತಿ ಕಟ್ಟಿಲ್ಲ, ಈ ಯೋಜನೆ ಮಾಡಬೇಕು ಅನ್ನೊ ಹಠ ಇದಿದ್ದರೆ. ನಾನು ಎರಡನೇ ಸಲ ಸಿಎಂ ಆದಾಗ ಮಾಡಬೇಕಿತ್ತು ಎಂದು ತಿಳಿಸಿದರು.
ಹೆಚ್.ಕೆ ಪಾಟೀಲ್ ಅವರನ್ನ ಜೊತೆಗೆ ಕೂರಿಸಿಕೊಂಡಿಲ್ಲ, ಎಂ.ಬಿ ಪಾಟೀಲ್ ಅವರನ್ನ ಯಾಕೆ ಕೂರಿಸಿಕೊಂಡ್ರಿ? ಸತ್ಯಶೋಧನ ಸಮಿತಿ ಅಧ್ಯಕ್ಷರು ಹೆಚ್.ಕೆ ಪಾಟೀಲ್ ಆಗಿದ್ದರು. ಮುಖ್ಯಮಂತ್ರಿಗಳ ಮುಖದಲ್ಲಿ ಪಾಪಪ್ರಜ್ಞೆ ಕಾಣುತ್ತಿತ್ತು. 24 ಗಂಟೆ ಸಾಲದಷ್ಟು ಮಾಡಲು ಕೆಲಸ ಇದೆ, ಯಾರು ಮುಖ್ಯಮಂತ್ರಿ ಅಂತಾ ಯೋಚನೆ ಮಾಡ್ತಾ ಹೊಟ್ಟೆ ಉರಿದುಕೊಂಡು ಕೂರಲು ಸಮಯ ಇಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರೈತ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರ: ಬಿ.ವೈ.ವಿಜಯೇಂದ್ರ
