– ಆರೋಪಿ ಚಿನ್ನಯ್ಯ ಸುಳ್ಳು ಕೇಸ್ ದಾಖಲಿಸಿದ್ದ ವರದಿ ಸಲ್ಲಿಕೆ
ಮಂಗಳೂರು: ಧರ್ಮಸ್ಥಳದ (Dharmasthala Case) ಬಂಗ್ಲೆಗುಡ್ಡದಿಂದ ಆರೋಪಿ ಚಿನ್ನಯ್ಯ ಬುರುಡೆ ಹೊರತೆಗೆದು ಸುಳ್ಳು ದೂರು ನೀಡಿದ್ದ ಷಡ್ಯಂತ್ರ ಪ್ರಕರಣದ ಅಂತಿಮ ವರದಿಯನ್ನು ಇಂದು ಎಸ್ಐಟಿ (SIT) ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಈ ಹಿಂದೆ ಅಧಿಕಾರಿಗಳು ಮಧ್ಯಂತರ ವರದಿ ಸಲ್ಲಿಸಿದ್ದರು. ಇಂದು ಬರೋಬ್ಬರಿ 7 ಸಾವಿರಕ್ಕೂ ಅಧಿಕ ಪುಟಗಳ ಅಂತಿಮ ವರದಿಯನ್ನ ಎಸ್ಐಟಿ ಎಸ್ಪಿ ಸೈಮನ್ ನೇತೃತ್ವದ ತಂಡದಿಂದ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಸ್‌ಐಟಿಗೆ ಮಾಸ್ಕ್‌ಮ್ಯಾನ್ ದೂರು
ಒಟ್ಟು 255 ಸಾಕ್ಷಿಗಳ ಹೇಳಿಕೆ ಹಾಗೂ ವಿಡಿಯೋ ಸ್ಟೇಟ್ಮೆಂಟ್ ಮಾಡಿದ 4ಟಿಬಿ ಹಾರ್ಡ್ ಡಿಸ್ಕನ್ನು ಸಲ್ಲಿಕೆ ಮಾಡಲಾಗಿದೆ. ಎಫ್‌ಎಸ್‌ಎಲ್ ವರದಿ, ಬುರುಡೆ, ಅಸ್ಥಿಪಂಜರ, ಮೊಬೈಲ್ ದಾಖಲೆಗಳು ಎಫ್‌ಎಸ್‌ಎಲ್‌ನಿಂದ ಬಂದ ಎಲ್ಲಾ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯದ ಆವರಣದಲ್ಲಿ ಚಿನ್ನಯ್ಯ ಹಾಗೂ ಆತನ ಪತ್ನಿ ಆಗಮಿಸಿದ್ದರು.
