ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ಪರ ಹಾಗೂ ವಿರೋಧ ಹೋರಾಟಗಳು ತೀವ್ರಗೊಂಡಿರುವ ಹೊತ್ತಿನಲ್ಲೇ ಸಿಎಂ ಡಿಕೆ ಶಿವಕುಮಾರ್ (DK Shivakumar) ಯೋಜನೆಗೆ 2 ತಿಂಗಳು ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಸುದೀರ್ಘವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಬಿಡದಿ ಟೌನ್‌ಶಿಪ್ ಯೋಜನೆ 2 ತಿಂಗಳು ಮುಂದೂಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಸಣ್ಣ ಸಮಿತಿಯೊಂದನ್ನ ರಚನೆ ಮಾಡುತ್ತೇನೆ. 2 ತಿಂಗಳಲ್ಲಿ ವರದಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.
ಇಷ್ಟ ಇದ್ದವರು ಕೊಡಲಿ, ಕೊಡದಿದ್ದವರು ಬೇಡ. ಆದ್ರೆ ಇದು ನಿರಂತರ ಪ್ರಕ್ರಿಯೆ, ಎರಡ್ಮೂರು ತಿಂಗಳ ಬಳಿಕ ಸಮಿತಿ ವರದಿ ಕೊಡಲಿ, ಅಮೇಲೆ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ನಿಖಿಲ್ ಬರ ವೀಕ್ಷಣೆ – ಸರ್ಕಾರಕ್ಕೆ ಎಕರೆಗೆ 25 ಸಾವಿರ ಪರಿಹಾರ ನೀಡಲು ಆಗ್ರಹ

ನನ್ನ ಕನಸಿನ ಯೋಜನೆ ಅಲ್ಲ
ಬಿಡದಿಯಲ್ಲಿ (Bidadi) ನಡೆದ ಘಟನೆ ನನ್ನ ಮನಸ್ಸಿಗೆ ನೋವಾಗಿದೆ. ಬಿಡದಿ ಟೌನ್ ಶಿಪ್ ನನ್ನ ಕನಸಿನ ಯೋಜನೆ ಅಲ್ಲ. ನಾನು ಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ ಫೌಂಡೇಶನ್ ಹಾಕಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಕ್ಕೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ನಾನು ಸಿಎಂ ಆಗಿದ್ದಕ್ಕೆ ಕೆಲವರು ನಿದ್ದೆನೇ ಮಾಡುತ್ತಿಲ್ಲ. ನಾನೊಬ್ಬ ರೈತನ ಮಗ ರೈತರ ಶ್ರಮದ ಬಗ್ಗೆ ನನಗೆ ಗೊತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ; ಜುಲೈ 19ಕ್ಕೆ ದೆಹಲಿಯಲ್ಲಿ ಹೈಕಮಾಂಡ್ ಸಭೆ
