ಹಾಸನ: ಹಾಸನಾಂಬ ದೇವಿ (Hasanamba Jatre) ಸಾರ್ವಜನಿಕ ದರ್ಶನಕ್ಕೆ ಎರಡನೇ ದಿನವೂ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ.
ಮಧ್ಯರಾತ್ರಿಯಿಂದಲೂ ಸರತಿ ಸಾಲಿನಲ್ಲಿ ಭಕ್ತರು ಕಾದು ನಿಂತಿದ್ದಾರೆ. 300 ರೂ. ವಿಶೇಷ ದರ್ಶನದ ಸಾಲಿನಲ್ಲೂ ಸಹ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ದೇವಿ ದರ್ಶನ ಆರಂಭವಾಗಿದೆ. 1000 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಖಾಲಿ ಇದೆ. ಇದನ್ನೂ ಓದಿ: ಹಾಸನಾಂಬೆ ಜಾತ್ರೆ ಇತಿಹಾಸದಲ್ಲೇ ಮೊದಲ ದಿನ ಭಾರೀ ಜನಸಾಗರ – ಇದು ದೇವಿಯ ಪವಾಡ ಎಂದ ಶಿವಲಿಂಗೇಗೌಡ
ದೇವಾಲಯದ ಬಳಿ ಬೆಳಿಗ್ಗೆಯೇ ಆಗಮಿಸಿರುವ ಎಸ್ಪಿ ಶುಭನ್ವಿತಾ ಅವರು ಗರ್ಭಗುಡಿ ಬಳಿ ನಿಂತು ಜನರನ್ನು ನಿಯಂತ್ರಿಸುತ್ತಿದ್ದಾರೆ.
ಹಾಸನಾಂಬೆ ಜಾತ್ರೆಯ ಮೊದಲ ದಿನ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇತಿಹಾಸದಲ್ಲೇ ಮೊದಲ ಬಾರಿಗೆ ಜಾತ್ರೆಯ ಮೊದಲ ದಿನ ಈ ಪ್ರಮಾಣದ ಭಕ್ತರು ಆಗಮಿಸಿದ್ದರು. ಭಕ್ತಸಾಗರ ಕಂಡು ಪ್ರತಿಕ್ರಿಯಿಸಿದ್ದ ಸಚಿವ ಕೆ.ಎಂ ಶಿವಲಿಂಗೇಗೌಡ (K.M Shivalingegowda), ಇದು ದೇವಿಯ ಪವಾಡ ಎಂದಿದ್ದರು. ಇದನ್ನೂ ಓದಿ: 60 ರೂ.ಗೆ 2 ಲಾಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್: ಶಿವಲಿಂಗೇಗೌಡ ಗರಂ
