Connect with us

ಬ್ಯಾಂಕ್ ಉದ್ಯೋಗಿಯ ನಿಗೂಢ ಸಾವು – ಕ್ರೇಟಾ ಕಾರ್ ಗಾಗಿ ಪತ್ನಿಯ ಕೊಲೆ?

ಬ್ಯಾಂಕ್ ಉದ್ಯೋಗಿಯ ನಿಗೂಢ ಸಾವು – ಕ್ರೇಟಾ ಕಾರ್ ಗಾಗಿ ಪತ್ನಿಯ ಕೊಲೆ?

– ಪ್ರೀತಿಸಿ ಮದ್ವೆಯಾಗಿದ್ದ ಜೋಡಿ
– ಮಹಿಳೆ ಪೋಷಕರಿಂದ ದೂರು ದಾಖಲು

ಗುರುಗ್ರಾಮ: ಬ್ಯಾಂಕ್ ಉದ್ಯೋಗಿಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮಹಿಳೆಯ ಪೋಷಕರು ಕೊಲೆ ಎಂದು ಆರೋಪಿಸಿದ್ದಾರೆ. ವರದಕ್ಷಿಣೆಗಾಗಿ ಪತಿ ತನ್ನ ಕುಟುಂಬಸ್ಥರೊಂದಿಗೆ ಸೇರಿ ಪುತ್ರಿಯನ್ನ ಕೊಲೆಗೈದಿದ್ದಾರೆ ಎಂದು ಮೃತ ಮಹಿಳೆ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುರುಗ್ರಾಮದ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ತನುಜಾ ಮದುವೆ ಖರ್ಖಡಿ ಗ್ರಾಮದ ಸಂದೀಪ್ ಜೊತೆ ನಡೆದಿತ್ತು. ಇಬ್ಬರು ಪ್ರೀತಿಯನ್ನ ಒಪ್ಪಿ ಕುಟುಂಬಸ್ಥರು 2020 ಮೇ 24ರಂದು ಮದುವೆ ಮಾಡಿದ್ದರು. ಮದುವೆಯಲ್ಲಿ ಕ್ರೇಟಾ ಕಾರ್ ನೀಡಬೇಕೆಂದು ಸಂದೀಪ್ ಡಿಮ್ಯಾಂಡ್ ಮಾಡಿದ್ದ. ಮಾರ್ಚ್ ಏಳರಂದು ಕರೆ ಮಾಡಿದ ಸಂದೀಪ್ ಮಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ. ಆದ್ರೆ ಅಲ್ಲಿ ತೆರಳಿದಾಗ ಮಗಳು ಸಾವು ಆಗಿತ್ತು ಎಂದು ತನುಜಾ ಪೋಷಕರು ಹೇಳಿದ್ದಾರೆ.

ಮದುವೆಯಲ್ಲಿ ಕ್ರೇಟಾ ಕಾರ್ ಕೊಡಿಸದ ಹಿನ್ನೆಲೆ ಸಂದೀಪ್ ತನ್ನ ಕುಟುಂಬಸ್ಥರ ಜೊತೆ ಸೇರಿ ಕಿರುಕುಳ ನೀಡುತ್ತಿದ್ದನು. ಇದೇ ವಿಷಯವಾಗಿ ಕೆಲವು ಬಾರಿ ರಾಜಿ ಪಂಚಾಯ್ತಿ ಸಹ ಮಾಡಲಾಗಿದೆ. ಆದ್ರೆ ಈಗ ಮಗಳ ಸಾವು ಆಗಿದೆ ಎಂದು ತನುಜಾ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ತನುಜಾ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಸಂದೀಪ್ ಆ್ಯಂಡ್ ಫ್ಯಾಮಿಲಿ ಎಸ್ಕೇಪ್ ಆಗಿದ್ದಾರೆ.

 

Advertisement
Advertisement
Advertisement