Cricket

ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

Published

on

Share this

ದುಬೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಅನ್​ಕ್ಯಾಪ್ಡ್​ ಪ್ಲೇಯರ್ ಆಗಿ ನೂತನ ದಾಖಲೆಯೊಂದನ್ನು ಮಾಡಿದ್ದಾರೆ.

14ನೇ ಆವೃತ್ತಿಯ ಐಪಿಎಲ್‍ನಲ್ಲಿ ಹರ್ಷಲ್ ಪಟೇಲ್ ಪ್ರತಿ ಪಂದ್ಯದಲ್ಲೂ ಕೂಡ ಉತ್ತಮವಾದ ದಾಳಿ ಸಂಘಟಿಸಿ ವಿಕೆಟ್ ಬೇಟೆಯಾಡುತ್ತಿದ್ದು, ಈ ಮೂಲಕ ಆರ್​ಸಿಬಿ ಪಾಳಯದಲ್ಲಿ ಹರ್ಷ ತಂದಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಒಂದು ಬಾರಿ ಹ್ಯಾಟ್ರಿಕ್ ಸಹಿತ 11 ಪಂದ್ಯದಲ್ಲಿ 26 ವಿಕೆಟ್ ಪಡೆದು ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಅನ್​ಕ್ಯಾಪ್ಡ್​ ಪ್ಲೇಯರ್( 3 ಮಾದರಿಯ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರ) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.  ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?

ಈ ಹಿಂದೆ 2015ರಲ್ಲಿ ತಮ್ಮದೆ ತಂಡದ ಆಟಗಾರ ಯಜುವೇಂದ್ರ ಚಹಲ್ ಸೀಸನ್ ಒಂದರಲ್ಲಿ 25 ವಿಕೆಟ್ ಕಿತ್ತು ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಹರ್ಷಲ್ ಪಟೇಲ್ ಮುರಿದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಯುವ ಆಟಗಾರರ ದರ್ಬಾರ್

ಐಪಿಎಲ್‍ನಲ್ಲಿ ಸೀಸನ್ ಒಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಸಿಎಸ್‍ಕೆ ತಂಡದ ಆಟಗಾರ ಡ್ವೇನ್ ಬ್ರಾವೋ ಹೆಸರಲ್ಲಿದೆ. ಬ್ರಾವೋ 2013ರ ಐಪಿಎಲ್‍ನಲ್ಲಿ 32 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯಲು ಪಟೇಲ್‍ಗೆ ಇನ್ನು 6 ವಿಕೆಟ್‍ಗಳ ಅವಶ್ಯಕತೆ ಇದೆ. ಈ ರೀತಿ ವಿಕೆಟ್ ಬೇಟೆಯಾಡುತ್ತ ಹೋದರೆ ಹರ್ಷಲ್ ಪಟೇಲ್ ಈ ದಾಖಲೆ ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications