– ಈ ಕುಮಾರಸ್ವಾಮಿಯನ್ನ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಟಚ್ ಮಾಡೋಕಾಗಲ್ಲ
ಬೆಂಗಳೂರು: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದಲ್ಲಿ (Sting Operation) ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಹೆಸರನ್ನು ಪ್ರಸ್ತಾಪಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲವಾಗಿದ್ದಾರೆ.
ನಗರದ ಪೊಲೀಸರ ಆಯುಕ್ತರ ಮಾಹಿತಿ ಕುರಿತು ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಡಿಕೆ, ಯಾರ್ರೀ ಅದು ಕಮೀಷನರ್? ಅವರು ಪೊಲೀಸ್ ಕಮೀಷನರ್ರಾ? ಹೆಡ್ ಕ್ಲರ್ಕ್ ಗಿಂತ ಕಡೆಯಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಯಾರ ಹಂಗಿನಲ್ಲಿ ಕೆಲಸ ಮಾಡ್ತಿದ್ದಾರೆ? ಜಾಗ ಉಳಿಸಿಕೊಳ್ಳೋಕೆ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಿದೆ ಎಂದು ಸಿಡಿಮಿಡಿಗೊಂಡಿದ್ದಾರೆ.
ನಾಳೆ ಸಂಪೂರ್ಣ ಮಾಹಿತಿ ಕೊಡ್ತೀನಿ. ಯಾರು ಗಾಬರಿ ಆಗಬೇಕಿಲ್ಲ. ಸ್ಟಿಂಗ್ ಆಪರೇಷನ್ ತಿರುಗುಬಾಣ ಯಾರಿಗೆ ಅಂತಾ ಹೇಳ್ತೀನಿ. ತನಿಖೆ ಯಾವ ಮಟ್ಟಕ್ಕೆ ಹೋಗ್ತಾ ಇದೆ? ಈ ಸರ್ಕಾರದ ಆಡಳಿತ ಯಾವ ರೀತಿ ಇದೆ ಹೇಳ್ತೀನಿ? ಸಿದ್ದರಾಮಯ್ಯ ಯಾಕೆ ಸ್ಟೇ ತಗೊಂಡಿದ್ದಾರೆ? ಯತೀಂದ್ರ ನಮ್ಮ ಪಕ್ಷದವರೆ ಸ್ಟಿಂಗ್ ಮಾಡಿದ್ದಾರೆ ಅಂತಾ ಹೇಳಿದ್ದಾರೆ. ಈ ಕುಮಾರಸ್ವಾಮಿಯನ್ನ, ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಟಚ್ ಮಾಡೋಕೆ ಆಗಲ್ಲ. ಕುಮಾರಸ್ವಾಮಿಯನ್ನ ಅಷ್ಟು ಸುಲಭವಾಗಿ ಇವರು ಹೆದರಿಸಲು ಆಗಲ್ಲ. ಸರ್ಕಾರ ಯಾರನ್ನೆಲ್ಲಾ ರಕ್ಷಣೆ ಮಾಡ್ತಿದೆ ಗೊತ್ತಿದೆ ಎಂದು ಗುಡುಗಿದ್ದಾರೆ.
ಇನ್ನೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟ್ರೈಲರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೆಲ್ಲಾ ಯಾವ ಟ್ರೈಲರ್. ನಾನು ಸಿನಿಮಾ ಮಾಡಿರೋನು. ಇವರು ಈಗ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಇವರ ಸಿನಿಮಾ ಬಗ್ಗೆ ನಾಳೆ ನಾನು ಡಿಟೈಲ್ಸ್ ಆಗಿ ಹೇಳ್ತೀನಿ. ಈ ಟ್ರೇಲರ್ ಬಿಡುಗಡೆ ಮಾಡಲು ಹೋಗಿ, ಸಿದ್ದರಾಮಯ್ಯರನ್ನ ಯಾವ ರೀತಿ ಕೆಡವಲು ಹೊರಟಿದ್ದಾರೆ ಅನ್ನೋದನ್ನ ಹೇಳ್ತಿನಿ ಅಂತಾ ಹೇಳಿದ್ದಾರೆ.
