ಉಡುಪಿ: ಮತ್ತೆ ಐದು ದಿನ ಪ್ರಕೃತಿ ಚಿಕಿತ್ಸೆಗೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಪತ್ನಿ ಚನ್ನಮ್ಮ ಅವರ ಜೊತೆ ಉಡುಪಿಗೆ ಆಗಮಿಸಿದ್ದಾರೆ.
ಎಚ್.ಡಿ ದೇವೇಗೌಡ ದಂಪತಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಳಿಕ ಮಂಗಳೂರು ವಿಮಾನ ನಿಲ್ದಾಣ ಮೂಲಕ ಉಡುಪಿಗೆ ಬಂದಿದ್ದಾರೆ. ಕಾಪು ಬಳಿಯ ಮುಳೂರಿನ ಖಾಸಗಿ ರೆಸಾರ್ಟಿನಲ್ಲಿ ದೇವೇಗೌಡರ ಜೊತೆ ಅವರ ಪತ್ನಿ ಚನ್ನಮ್ಮ ಕೂಡ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.
Advertisement
Advertisement
ಕಳೆದ ವಾರ ದೇವೇಗೌಡ ಅವರು ರೆಸಾರ್ಟ್‍ನಲ್ಲೇ ಚಿಕಿತ್ಸೆ ಪಡೆದಿದ್ದರು. ಅಂದು ದೇವೇಗೌಡರಿಗೆ ಸಿಎಂ ಕುಮಾರಸ್ವಾಮಿ ಸಾಥ್ ನೀಡಿದ್ದರು. ಈಗ ದೇವೇಗೌಡರು ತಮ್ಮ ಕೋರ್ಸ್ ಪೂರ್ಣಗೊಳಿಸಲು ತಮ್ಮ ಪತ್ನಿ ಚನ್ನಮ್ಮ ಅವರ ಜೊತೆ ಆಗಮಿಸಿದ್ದಾರೆ.
Advertisement
ದೇವೇಗೌಡ ಅವರು ಇಂದು ಅಥವಾ ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಕೊಲ್ಲೂರಿನ ಮುಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ ನಡೆಸಲಿದ್ದಾರೆ.