ಕೊಪ್ಪಳ: ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ (Gruhalakshmi Scheme) ಭಾರೀ ಗೋಲ್ಮಾಲ್ ನಡೆದಿರುವುದು ಬಯಲಾಗಿದೆ. ಸತ್ತವರ ಅಕೌಂಟ್‌ಗೆ ಜಮೆಯಾಗಿದ್ದ 86 ಲಕ್ಷ ರೂ. ರಿಕವರಿ ಆಗಿರುವುದಾಗಿ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ ಸ್ಪೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ (Koppal) ಜಿಲ್ಲೆಯಲ್ಲಿ 3,13,500 ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ. ಅವರ ಖಾತೆಗೆ ಸುಮಾರು ಸುಮಾರು 63 ಕೋಟಿ ರೂ. ಹಣ ಜಮೆಯಾಗುತ್ತದೆ. ಈ ಪೈಕಿ ಸತ್ತವರ ಅಕೌಂಟ್‌ಗೆ ಜಮೆಯಾಗಿದ್ದ ಸುಮಾರು 86 ಲಕ್ಷ ರೂ. ರಿಕವರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕಾರ ಕೊಟ್ಟವರು ಮುಖ್ಯಮಂತ್ರಿಗಳು, ಅವ್ರು ಹೇಳಿದ ಹಾಗೆ ಕೇಳ್ತೀನಿ: ಅಧಿಕಾರ ವಾಪಸ್ ಪ್ರಶ್ನೆಗೆ ಬಾಲಕೃಷ್ಣ ರಿಯಾಕ್ಷನ್
ಗೃಹಲಕ್ಷ್ಮೀ ಪರಿಷ್ಕರಣೆ ಮಾಡಲು ಸೂಚಿಸಿದ್ದರು. ಪರಿಷ್ಕರಣೆ ವೇಳೆ ಸುಮಾರು ಜಿಲ್ಲೆಯಲ್ಲಿ 7085 ಸತ್ತವರ ಅಕೌಂಟ್‌ಗೆ ಹಣ ಜಮೆಯಾಗಿತ್ತು. ಇದರಲ್ಲಿ ಯಾವ ಫಲಾನುಭವಿಗಳ ಮನೆಯವರು, ನಮ್ಮ ಮನೆಯಲ್ಲಿ ಸತ್ತಿದ್ದಾರೆ ಎಂದು ಹೇಳಿಲ್ಲ. ಜಿಲ್ಲೆಯಲ್ಲಿ ಮರಣ ಪ್ರಮಾಣ ಪತ್ರಗಳನ್ನ ನೋಡಿ, ನಾವು ಪರಿಶೀಲನೆ ಮಾಡಿದ್ದೇವೆ. ಅಧಿಕಾರಿಗಳ ಜೊತೆ ದಾಖಲೆಗಳನ್ನ ಪರಿಶೀಲನೆ ಮಾಡಿದ್ದೇವೆ. ಇಲ್ಲಿ ಸತ್ತವರ ಅಕೌಂಟ್‌ನಿಂದ ಕೆಲವರು ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಕೆಲ ಫಲಾನುಭವಿಗಳು ಹಣ ಡ್ರಾ ಮಾಡಿಲ್ಲ ಎಂದಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಎರಡರಿಂದ ಮೂರು ಕೋಟಿ ರೂ. ಹಣ ಹೋಗಿರಬಹುದು. ಇವತ್ತಿಗೆ 86 ಲಕ್ಷ ರೂ. ನಾವು ರಿಕವರಿ ಮಾಡಿಕೊಂಡಿದ್ದೇವೆ. ಅದನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹಣ ರಿಕವರಿ ಮಾಡಿರೋ ವಿಚಾರ ಸಿಎಂ ಗಮನಕ್ಕೆ ತಂದಿದ್ದೇವೆ. ಜಿಲ್ಲೆಯಲ್ಲಿ 26 ಸಾವಿರ ಫಲಾನುಭವಿಗಳ ಮಲ್ಟಿಪಲ್ ಅಕೌಂಟ್ ಇವೆ. ಕೆಲ ಫಲಾನುಭವಿಗಳ ಅಕೌಂಟ್ ಹೊರರಾಜ್ಯದಲ್ಲೂ ಇವೆ. ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ವಿದ್ಯಾಮಂದಿರ; ಪಿಜಿ ಶೈಕ್ಷಣಿಕ & ಉದ್ಯೋಗ ಮೇಳಕ್ಕೆ ಅದ್ದೂರಿ ಚಾಲನೆ



