ಕಾಂಗ್ರೆಸ್ ಬೆಂಬಲ ನೀಡಿದ ಉತ್ಸಾಹದಲ್ಲಿ ವಿಜಯ್‌ ಯಡವಟ್ಟು – ಇಂದು ಪ್ರಮಾಣವಚನ ಡೌಟ್?

2 Min Read

ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ (Tamilnadu Assembly) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚನೆ ಉಮೇದಿನಲ್ಲಿರುವ ವಿಜಯ್ ಆರಂಭದಲ್ಲಿ ಯಡವಟ್ಟು ಮಾಡಿಕೊಂಡ್ರಾ ಅನ್ನೊ ಪ್ರಶ್ನೆ ಉದ್ಭವಿಸಿದೆ.

ಕಾಂಗ್ರೆಸ್ ಬೆಂಬಲ ನೀಡಿದ ಉತ್ಸಾಹದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹೋದ ವಿಜಯ್‌ಗೆ ರಾಜ್ಯಪಾಲರು ಶಾಕ್ ಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬ್ಲಾಕ್‌ಬಾಸ್ಟರ್ ಪ್ರದರ್ಶನ ನೀಡಿದ ನಟ, ರಾಜಕಾರಣಿ ವಿಜಯ್ ಸರ್ಕಾರ ರಚನೆ ವಿಚಾರದಲ್ಲಿ ಆರಂಭದಲ್ಲೇ ಎಡವಿದ್ರಾ ಅನ್ನೊ ಪ್ರಶ್ನೆ ಹುಟ್ಟುಹಾಕಿದೆ. ಟಿವಿಕೆ ಅಧ್ಯಕ್ಷ ವಿಜಯ್ ಬುಧವಾರ (ಮೇ 7) ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಿದ್ದಾರೆ. ಆದರೆ ಬೆಂಬಲ ಪತ್ರ ನೀಡದ ಹಿನ್ನೆಲೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಬಹುಮತದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಈ ಮೂಲಕ ವಿಜಯ್‌ಗೆ ಶಾಕ್ ಕೊಟ್ಟಿದ್ದಾರೆ. ಇದನ್ನೂ ಓದಿ: ದಳಪತಿ ವಿಜಯ್‌ಗೆ ಸರ್ಕಾರ ರಚನೆಯೇ ಸವಾಲು – ಇಂದಾದ್ರೂ ಸಿಗಲಿದ್ಯಾ ಸ್ಪಷ್ಟತೆ?

234 ಸದಸ್ಯ ಬಲದ ತಮಿಳುನಾಡಿನಲ್ಲಿ ಬಹುಮತವನ್ನು ಸಾಬೀತು ಮಾಡಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 118. 107 ಸ್ಥಾನಗಳಲ್ಲಿ ಗೆಲುವು ದಾಖಲಿಸಿರುವ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ಬಹುಮತಕ್ಕೆ ಬೇಕಾಗಿರುವ ಅಧಿಕೃತ ಸಂಖ್ಯಾಬಲದ ಕೊರತೆ ಕಾಡುತ್ತಿದೆ. ಬೆಂಬಲದ ಬಗ್ಗೆ ಇತರೆ ಪಕ್ಷಗಳು ಬೆಂಬಲ ಪತ್ರ ನೀಡಿದ ಹಿನ್ನೆಲೆ ಬಹುಮತದ ಬಗ್ಗೆ ರಾಜ್ಯಪಾಲರಿಗೆ ಮನದಟ್ಟು ಮಾಡಿಸಲು ವಿಜಯ್‌ಗೆ ಸಾಧ್ಯವಾಗಿಲ್ಲ.

ಕಾಂಗ್ರೆಸ್‌ನ ಐದು ಸ್ಥಾನಗಳನ್ನು ಸೇರಿಸಿದರೆ ಟಿವಿಕೆ ಸಂಖ್ಯಾಬಲ 113ಕ್ಕೆ ಏರಿಕೆಯಾಗುತ್ತದೆ. ಆದರೆ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 118. ಅಂದರೆ ಇನ್ನೂ 6 ಸ್ಥಾನಗಳ ಕೊರತೆಯಿದೆ. ಆ 6 ಶಾಸಕರ ಬೆಂಬಲ ಯಾವ ಪಕ್ಷದಿಂದ ಸಿಗಲಿದೆ ಎಂದು ವಿಜಯ್ ವಿವರಿಸಿಲ್ಲ ಎನ್ನಲಾಗಿದೆ. ಹೀಗಾಗಿ ಸಂಖ್ಯೆಗಳ ಕೊರತೆ ಹಿನ್ನೆಲೆ ಸರ್ಕಾರ ರಚನೆಗೆ ಅನುಮತಿ ನೀಡಬೇಕೋ? ಬೇಡವೋ? ಎನ್ನುವುದಕ್ಕೆ ಕಾನೂನು ಸಲಹೆ ಪಡೆದು ತಿಳಿಸುವುದಾಗಿ ಹೇಳಿದ್ದಾರೆ.

ಟಿವಿಕೆ ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ:
108 ಟಿವಿಕೆ ಶಾಸಕರನ್ನು ಮಹಾಬಲಿಪುರಂ ಬಳಿಯ ಐಷಾರಾಮಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಹೈಕಮಾಂಡ್ ಅನುಮತಿ ಇಲ್ಲದೇ ಯಾರೂ ಹೊರಬರುವಂತಿಲ್ಲ ಎಂದು ಕಟ್ಟುನಿಟ್ಟಿನ ಆರ್ಡರ್ ಮಾಡಲಾಗಿದೆ. ಈ ರೆಸಾರ್ಟ್ ಈಗ ತಮಿಳುನಾಡು ರಾಜಕೀಯದ ವಾರ್ ರೂಮ್ ಆಗಿ ಬದಲಾಗಿದೆ. ಈಗಾಗಲೇ 5 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ವಿಜಯ್ ಅವರಿಗೆ ಬೇಷರತ್ತಾದ ಬೆಂಬಲ ಘೋಷಿಸಿದೆ. ಆದರೂ ವಿಜಯ್‌ಗೆ ಇನ್ನೂ 6 ಶಾಸಕರ ಕೊರತೆ ಕಾಡುತ್ತಿದೆ. ಬಹುಮತ ಸಿಗುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂಬ ಹಠಕ್ಕೆ ಬಿದ್ದಿರುವ ದಳಪತಿ, ಎರಡು ವಾರಗಳ ಕಾಲಾವಕಾಶದಲ್ಲಿ ಮ್ಯಾಜಿಕ್ ನಂಬರ್ ತಲುಪಲು ಹರಸಾಹಸ ಪಡುತ್ತಿದ್ದಾರೆ. ಅತಂತ್ರ ವಿಧಾನಸಭೆಯ ಈ ಹೈ-ವೋಲ್ಟೇಜ್ ಡ್ರಾಮಾ ಈಗ ಕ್ಲೈಮ್ಯಾಕ್ಸ್ ಕಡೆಗೆ ಸಾಗುತ್ತಿದೆ.ಇದನ್ನೂ ಓದಿ: ದೀದಿ ಸೋಲಿಸಿದ ಬಿಜೆಪಿ ಅಭ್ಯರ್ಥಿ ಪಿಎಗೆ ಗುಂಡಿಕ್ಕಿ ಹತ್ಯೆ – ʻಕೋಲ್ಡ್‌ ಬ್ಲಡ್‌ ಮರ್ಡರ್‌ʼ ಎಂದ ಸುವೇಂದು ಅಧಿಕಾರಿ

Share This Article