ನವದೆಹಲಿ: ಭಾರತೀಯ ಸೇನೆಯ 29ನೇ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅಧಿಕಾರ ಸ್ವೀಕರಿಸಿದ್ದಾರೆ.
Advertisement
ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಮನೋಜ್ ಮುಕುಂದ್ ನರವಾಣೆ ಇಂದು ನಿವೃತ್ತರಾದ ಬಳಿಕ ಮನೋಜ್ ಪಾಂಡೆ ಅಧಿಕಾರ ಸ್ವೀಕರಿಸಿದರು. ಈ ಮೊದಲು ಸೇನಾಪಡೆಯ ಉಪ ಮುಖ್ಯಸ್ಥರಾಗಿದ್ದ ಜನರಲ್ ಪಾಂಡೆಗೆ ನಿವೃತ್ತ ಜನರಲ್ ನರವಾಣೆ ಅಧಿಕಾರ ಹಸ್ತಾಂತರಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 45 ಸಾವಿರ ಲೌಡ್ ಸ್ಪೀಕರ್ ತೆರವು
Advertisement
Advertisement
1962ರ ಮೇ 6ರಂದು ಜನಿಸಿದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ 1982 ಡಿಸೆಂಬರ್ 24 ರಂದು ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಇಂಜಿನಿಯರ್ ಆಗಿ ನೇಮಕಗೊಂಡರು. ಸೇನಾಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಜನರಲ್ ಪಾಂಡೆ ಅವರು ಸೇನಾಪಡೆಯ ಇಂಜಿನಿಯರ್ ಕಾಪ್ರ್ಸ್‍ನಿಂದ ಸೇನಾ ಮುಖ್ಯಸ್ಥರಾದ ಮೊದಲ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಶತಾಯ ಗತಾಯ ಕಮಲ ಅರಳಿಸಲು ಬಿಜೆಪಿ ಪ್ಲಾನ್ – ಲಕ್ಷ್ಮೀ ಅಶ್ವಿನ್ ಗೌಡಗೆ ಗಾಳ
Advertisement
ಈ ಹಿಂದೆ ಪೂರ್ವ ಸೇನಾ ಕಮಾಂಡ್ ಮುಖ್ಯಸ್ಥರಾಗಿ ಚೀನಾ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಯನ್ನು ನಿಭಾಯಿಸುತ್ತಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಪಾಂಡೆ 1982ರಲ್ಲಿ ಇಂಜಿನಿಯರ್ ಕಾಪ್ರ್ಸ್‍ಗೆ ನಿಯೋಜಿಸಲ್ಪಟ್ಟರು. ಆಪರೇಷನ್ ಪರಾಕ್ರಮ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಲ್ಲನ್ವಾಲಾ ಸೆಕ್ಟರ್‌ನಲ್ಲಿ 117 ಇಂಜಿನಿಯರ್ ರೆಜಿಮೆಂಟ್‍ಗೆ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದರು.