– ಎಚ್ಚರಿಕೆ ನೀಡಿದ ಜಿಬಿಎ
ಬೆಂಗಳೂರು: ಪೌರಕಾರ್ಮಿಕರ (Pourakarmika’s) ಬೋನಸ್ ಹಣದಲ್ಲಿ ಕಮಿಷನ್ ಕೇಳಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತಿಳಿಸಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಪೌರಕಾರ್ಮಿಕರ ದಿನವಾಗಿ ಆಚರಿಸುವ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಮತ್ತು ‘ಡಿ’ ಗ್ರೂಪ್ ದರ್ಜೆಯ ನೌಕರರಿಗೆ ಬೋನಸ್ ಮಾದರಿಯಲ್ಲಿ 22,000 ರೂ. ಬೋನಸ್ ನೀಡಲಾಗಿದೆ. ಹಣವನ್ನು ಅವರ ಬ್ಯಾಂಕ್ ಖಾತೆಗೆ ಪಾವತಿಸಲು ತಿಳಿಸಲಾಗಿದೆ. ಇದನ್ನೂ ಓದಿ: ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ; ಹೂ-ಹಣ್ಣು ಬೆಲೆ ಗಗನಕ್ಕೇರಿದ್ರೂ, ಮುಗಿಬಿದ್ದು ಖರೀದಿಸಿದ ಜನ
ಆದರೆ, ಕೆಲವು ಸಂಘ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ತಾವು ಸಂಘ ಸಂಸ್ಥೆಗಳ ನಾಯಕರೆಂದು ಹೇಳಿಕೊಂಡು ಪೌರಕಾರ್ಮಿಕರ ಬಳಿ ಬೋನಸ್‌ನಲ್ಲಿ ಶೇಖಡವಾರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಿಮಗೆ ಬೋನಸ್ ಹಣ ಮಂಜೂರು ಮಾಡಿಸಿರುವುದಾಗಿ ಹೇಳಿ, ಅದರಲ್ಲಿ ತಮಗೆ ಇಂತಿಷ್ಟು ಕೊಡಿ ಎಂದು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಪೌರಕಾರ್ಮಿಕರು ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಗೆ ಬೋನಸ್ ಹಣದಲ್ಲಿ ಕಮಿಷನ್ ನೀಡಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಿಬಿಎ ತಿಳಿಸಿದೆ.
ಪೌರಕಾರ್ಮಿಕರ ಬಳಿ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳ ಹೆಸರು ಹೇಳಿಕೊಂಡು ಹಣಕ್ಕೆ ಇಟ್ಟಿರುವ ದೂರಿನ ಬಗ್ಗೆ ಕೂಡಲೇ ಪರಿಶೀಲಿಸುವಂತೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬಟವಾಡೆ ಅಧಿಕಾರಿಗಳಿಗೆ ಜಿಬಿಎ ಸೂಚನೆ ನೀಡಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಮುಂದುವರಿದ ಕಾಂಗ್ರೆಸ್ ನಾಯಕರ ಮುನಿಸು – ಬರ ವೀಕ್ಷಣೆಗೆ ಬಾರದ ಶಾಸಕ ಯಶವಂತರಾಯ ಗೌಡ
ಅಲ್ಲದೇ, ಯಾವುದೇ ಸಂಘಸಂಸ್ಥೆಗಳ ಹೆಸರು ಹೇಳಿಕೊಂಡು ಬರುವ ವ್ಯಕ್ತಿಗಳಿಗೆ ಹಣವನ್ನು ನೀಡದಂತೆ ಪೌರಕಾರ್ಮಿಕರಿಗೆ ಅರಿವು ಮೂಡಿಸಿ. ಜೊತೆಗೆ ಅಗತ್ಯ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಬಿಎ ಸೂಚಿಸಿದೆ.

