ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೆ ಅವರ ಹಿಂದೂ ಧರ್ಮ ವಿರೋಧಿ ನಿಲುವೇ ಕಾರಣ ಅಂತ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಿದೆ. ಕೋರ್ಟ್ ಗೆ ಸಲ್ಲಿಸಿರೋ 651 ಪುಟಗಳ ಜಾರ್ಜ್ ಶೀಟ್ ಪಬ್ಲಿಕ್ ಟಿವಿಗೆ ಸಿಕ್ಕಿದ್ದು, ಹತ್ಯೆಗೆ ನಡೆಸಲಾದ ಸಂಚು, ಪ್ರಮುಖ ಆರೋಪಿ ನವೀನ್ ಅಲಿಯಾಸ್ ಹೊಟ್ಟೆಮಂಜನ ಪತ್ನಿ ನೀಡಿರೋ ಹೇಳಿಕೆಯನ್ನು ದಾಖಲಿಸಲಾಗಿದೆ.
ಸದ್ಯ ಕೈಗೆ ಸಿಗದಿರೋ ಆರೋಪಿಗಳನ್ನು ಹಿಡಿಯೋ ಸಲುವಾಗಿ ನವೀನ್ ಮತ್ತು ಬಂಧನದಲ್ಲಿರೋ ಆತನ ಮೂವರು ಸಹಚರರು ನೀಡಿರೋ ಹೇಳಿಕೆಗಳನ್ನು ಬಹಿರಂಗಪಡಿಸಿಲ್ಲ. ಗೌರಿ ಲಂಕೇಶ್ ಅವರ ಹಿಂದೂ ಧರ್ಮ ವಿರೋಧಿ ಅಭಿಪ್ರಾಯಗಳಿಂದಾಗಿ ಹತ್ಯೆ ನಡೆದಿದೆ ಎಂದು ಎಸ್‍ಐಟಿ ಹೇಳಿದೆ.
Advertisement
ಹಾಗಾದ್ರೆ ಆ ಜಾರ್ಜ್ ಶೀಟ್‍ನಲ್ಲಿ ಏನಿದೆ ಅಂತ ನೋಡೋದಾದ್ರೆ:
1. ಸನಾತನ ಧರ್ಮ ಸಂಸ್ಥಾದೊಂದಿಗೆ ನನ್ನ ಗಂಡ ಸಂಪರ್ಕದಲ್ಲಿದ್ದರು. ಪ್ರಮುಖ ಆರೋಪಿ ಕೆ ಟಿ ನವೀನ್ ಕುಮಾರ್ ಪತ್ನಿ ರೂಪಾರಿಂದ ಸಾಕ್ಷಿ ಹೇಳಿಕೆಯನ್ನು ಚಾರ್ಜ್ ಶೀಟ್‍ನಲ್ಲಿ ದಾಖಲಿಸಲಾಗಿದೆ. ಬಿರೂರಲ್ಲಿ ಕೆಪಿಟಿಸಿಎಲ್‍ನಲ್ಲಿ ಡಿ ಗ್ರೂಪ್ ಉದ್ಯೋಗಿಯಾಗಿ ರೂಪಾ ಕೆಲಸ ಮಾಡಿಕೊಂಡಿದ್ದಾರೆ. 2017ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಸನಾತನ ಸಂಸ್ಥೆಯ ಸದಸ್ಯರಿಗೆ ಪತ್ನಿ ರೂಪಾರನ್ನು ನವೀನ್ ಪರಿಚಯಿಸಿದ್ದನು.
Advertisement
2. ಮೈಸೂರು ದಸರಾಕ್ಕೂ 3 ತಿಂಗಳು ಮೊದಲೇ ಪಿಸ್ತೂಲ್, ಬುಲೆಟ್ ಖರೀದಿಸಲಾಗಿತ್ತು. ಯಾಕೆಂದು ಪತ್ನಿ ಪ್ರಶ್ನಿಸಿದ್ದಾಗ `ಡಮ್ಮಿ’ ಬುಲೆಟ್ ಎಂದು ನವೀನ್ ಹೇಳಿದ್ದನು. ದಸರಾ ವೇಳೆ ಪಿಸ್ತೂಲ್‍ಗೆ ರಕ್ತ ಸುರಿದು ಆಯುಧ ಪೂಜೆ ಮಾಡಿದ್ದನಂತೆ.
Advertisement
Advertisement
3. ದಸರಾ ಬಳಿಕ ಮದ್ದೂರಲ್ಲಿ ಮನೆಗೆ ಸನಾತನ ಸಂಸ್ಥೆಯ ಸದಸ್ಯನನ್ನು ನವೀನ್ ಆಹ್ವಾನಿಸಿದ್ದನು. ಮನೆಗೆ ಆಗಮಿಸಿದ್ದ ಆ ಸದಸ್ಯ ಒಂದು ರಾತ್ರಿ ನವೀನ್ ಮನೆಯಲ್ಲೇ ಉಳಿದುಕೊಂಡಿದ್ದನು.
4. ಗೋವಾದಲ್ಲಿ ಧರ್ಮ ಶಿಕ್ಷಣ ಸಮ್ಮೇಳನಕ್ಕೆ ಆಯ್ಕೆಯಾಗಿದ್ದ 400 ಹಿಂದೂ ಕಾರ್ಯಕರ್ತರಲ್ಲೂ ನವೀನ್ ಕೂಡ ಒಬ್ಬ. ಈ ಸಮ್ಮೇಳನದ 2 ತಿಂಗಳ ಬಳಿಕ ಹುಬ್ಬಳ್ಳಿಯಲ್ಲೂ ಇದೇ ರೀತಿಯ ಸಮ್ಮೇಳನ ನಡೆದಿತ್ತು.
5. ಮಂಗಳೂರಲ್ಲಿರುವ ಸನಾತನ ಆಶ್ರಮಕ್ಕೆ ಪತ್ನಿಯನ್ನು ಕರೆದೊಯ್ಯಲು ದಿನ ನಿಗದಿ ಮಾಡಿದ್ದನು. ಆಶ್ರಮಕ್ಕೆ ಭೇಟಿ ನೀಡಿದ್ದ ದಿನ ಗೌರಿ ಲಂಕೇಶ್ ಹತ್ಯೆಯ ಸುದ್ದಿ ಟಿವಿಯಲ್ಲಿ ಪ್ರಸಾರವಾಗ್ತಿತ್ತು.
6. ಗೌರಿ ಹತ್ಯೆಯಾಗಿದೆ ಅನ್ನೋದು ಖಚಿತವಾಗುತ್ತಲ್ಲೇ ಬೆಂಗಳೂರು ಬಿಟ್ಟು ಮಂಗಳೂರಿಗೆ ಹೋಗಿದ್ದನು. ನೇರವಾಗಿ ಮಂಗಳೂರಿಗೆ ಹೋಗೋ ಬದಲು 5 ಬಸ್‍ಗಳನ್ನು ಬದಲಾಯಿಸಿದ್ದನು. ಬಿರೂರು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆಯಲ್ಲಿ ಬಸ್ ಬದಲಾಯಿಸಿ ಮಂಗಳೂರಿಗೆ ಹೋದರು.
7. ಮಂಗಳೂರಿಗೆ ಬಂದವ್ರಿಗೆ ನವೀನ್ ದಂಪತಿಗೆ ಸನಾತನ ಸಂಸ್ಥೆ ಕಾರು ನೀಡಿ ಸತ್ಕರಿಸಿತ್ತು. ಗೌರಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದಾಗ ಸಂಬಂಧವೇ ಇಲ್ಲದಂತೆ ನವೀನ್ ವರ್ತಿಸಿದ್ದನು. ಹತ್ಯೆಯ ಮೂರು ದಿನಗಳ ಬಳಿಕ ಬೆಂಗಳೂರಿಗೆ ಬಂದಿದ್ದ ನವೀನ್.
8. ಡಿಸೆಂಬರ್ 10, 2017ರಂದು ಮದ್ದೂರಲ್ಲಿ ನಡೆದಿದ್ದ ಸಭೆಯ ಬಗ್ಗೆ ಸನಾತನ್ ಆರ್ಗ್, ಹಿಂದೂ ಜಾಗೃತಿ ಆರ್ಗ್ ವೆಬ್‍ಸೈಟ್‍ಗಳಲ್ಲಿ ವರದಿಯ ದಾಖಲೆ. ಈ ಸಭೆಯಲ್ಲಿ ಪ್ರಮುಖ ಆರೋಪಿ ಕೆ ಟಿ ನವೀನ್ ಕುಮಾರ್ ಕೂಡಾ ಪಾಲ್ಗೊಂಡಿದ್ದನು.
9. ಗೌರಿ ಹತ್ಯೆಗಾಗಿ ಸೆಪ್ಟೆಂಬರ್ 2017ರಲ್ಲಿ ಬುಲೆಟ್ ಪೂರೈಕೆ ಮಾಡಿದ್ದ ನವೀನ್ ಬೆಂಗಳೂರಿನ ಕಲಾಸಿಪಾಳ್ಯದಲ್ಲಿರೋ `ಸಿಟಿ ಗನ್ ಹೌಸ್’ನಲ್ಲಿ ಗುಂಡುಗಳನ್ನು ಖರೀದಿಸಿದ್ದನು. 8 ವರ್ಷಗಳ ಹಿಂದೆಯೇ `ಬೆಂಗಳೂರು ಆರ್ಮರಿ’ ಎಂಬ ಅಂಗಡಿಯಿಂದ 3 ಸಾವಿರ ರೂಪಾಯಿ ಕೊಟ್ಟು 18 ಬುಲೆಟ್‍ಗಳನ್ನು ಖರೀದಿಸಲಾಗಿತ್ತು. ತಲಾ 3,500 ರೂಪಾಯಿ ಕೊಟ್ಟು ಎರಡು ಏರ್ ಪಿಸ್ತೂಲ್‍ಗಳ ಖರೀದಿಸಲಾಗಿತ್ತು. ಲೈಸನ್ಸ್ ಇಲ್ಲದೇ ಇದ್ದರೂ ಬುಲೆಟ್, ಪಿಸ್ತೂಲ್ ಕೊಡುವಂತೆ ಅಂಗಡಿ ಮಾಲೀಕರಲ್ಲಿ ನವೀನ್ ಅಂಗಲಾಚಿದ್ದನು.
10. ಕತ್ತಿಗೆ ಲಾಕೆಟ್ ಮಾಡಿಸ್ಬೇಕಿದೆ, ಅದಕ್ಕೆ ಬುಲೆಟ್ ಬೇಕು. ಆ ವೇಳೆ ನಾನಾಗ ದುಡ್ಡಿನ ತುರ್ತಲ್ಲಿದೆ. `ಬೆಂಗಳೂರು ಆರ್ಮರಿ’ಯಲ್ಲಿ ನನ್ನ ಸ್ನೇಹಿತ ಅಜ್ಮದ್‍ಗೆ ಟೆಸ್ಟಿಂಗ್ ವೆಸ್ಟೇಜ್ ಬುಲೆಟ್‍ಗಾಗಿ ಕೇಳಿದ್ದೆ. 3 ದಿನಗಳ ಬಳಿಕ 0.32 ಕ್ಯಾಲಿಬರ್‍ನ 18 ಬುಲೆಟ್‍ಗಳನ್ನು ಪೇಪರ್‍ನಲ್ಲಿ ನವೀನ್‍ಗೆ ಕೊಟ್ಟಿದ್ದೇನೆ ಎಂದು `ಸಿಟಿ ಗನ್ ಹೌಸ್’ನ ಸೈಯದ್ ಶಬ್ಬೀರ್ ವಿಶೇಷ ತನಿಖಾ ದಳ ಎದುರು ಹೇಳಿಕೆ ದಾಖಲಿಸಿದ್ದಾನೆ.
11. ಗೌರಿ ಲಂಕೇಶ್ ಮಾತ್ರವಲ್ಲದೇ ಪ್ರೊ.ಕೆ ಎಸ್. ಭಗವಾನ್ ಸೇರಿ ಐವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಸ್ನೇಹಿತ ಅನಿಲ್ ಮತ್ತು ಗಿರಿ ಮಿಲ್ಟ್ರಿ ಜೊತೆಗೆ ಹತ್ಯೆ ಮಾಡುವ ಬಗ್ಗೆ ಹೊಟ್ಟೆ ಮಂಜ ಮಾತಾಡಿದ್ದ.