Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Ganesh Chaturthi: ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬ ಸಂಭ್ರಮ – ಎಲ್ಲೆಲ್ಲಿ ಆಚರಣೆ ಹೇಗೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | Ganesh Chaturthi: ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬ ಸಂಭ್ರಮ – ಎಲ್ಲೆಲ್ಲಿ ಆಚರಣೆ ಹೇಗೆ?

Latest

Ganesh Chaturthi: ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬ ಸಂಭ್ರಮ – ಎಲ್ಲೆಲ್ಲಿ ಆಚರಣೆ ಹೇಗೆ?

Public TV
Last updated: September 7, 2024 11:21 am
Public TV
Share
4 Min Read
ganesh chaturthi 2024
SHARE

ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ

ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ (Ganesh Chaturthi) ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ‘ಗಣಪತಪ.. ಐಸಾ.. ಅವನ ಹೊಟ್ಟೆ ನೋಡಿ.. ಅವನ ಸೊಂಡಿಲು ನೋಡಿ.. ಐಸಾ’ ಎಂದು ಗಣೇಶನ ರೂಪ ವರ್ಣಿಸುವುದು. ‘ಗಣೇಶ ಬಂದ.. ಕಾಯಿ ಕಡುಬು ತಿಂದ.. ಚಿಕ್ಕ ಕೆರೆಯಲ್ಲಿ ಬಿದ್ದ.. ದೊಡ್ಡ ಕೆರೆಯಲ್ಲಿ ಎದ್ದ’ ಎಂದು ಕೂಗುತ್ತಾ ಸಂಭ್ರಮದಿಂದ ಎಲ್ಲೆಲ್ಲೂ ಹಬ್ಬ ಆಚರಿಸುತ್ತಾರೆ.

ತಿಂಗಳಾನುಗಟ್ಟಲೆ ಗಣೇಶನನ್ನು ಕೂರಿಸಿ ಹಬ್ಬ ಆಚರಿಸುವುದು ವಾಡಿಕೆ. ದೇವಾಲಯ-ಚಪ್ಪರಗಳ ಅಲಂಕಾರ, ಸಂಗೀತ ಕಾರ್ಯಕ್ರಮ, ರುಚಿಕರವಾದ ಸಿಹಿತಿಂಡಿಗಳ ತಯಾರಿಯು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಗಣೇಶ ಚತುರ್ಥಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ ಪ್ರತಿಯೊಂದು ಕುಟುಂಬವೂ ತಮ್ಮ ಪ್ರಕಾರದ ಗಣೇಶ ಚತುರ್ಥಿಯನ್ನು ಆಚರಿಸುತ್ತವೆ. ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ರೀತಿಯಲ್ಲಿ ಹಬ್ಬ ಆಚರಣೆ ಇರುತ್ತದೆ. ಮಹಾರಾಷ್ಟ್ರವು ಗಣೇಶೋತ್ಸವಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದೆ. ಇದನ್ನೂ ಓದಿ: ಮಹಾಭಾರತವನ್ನು ಗಣಪತಿಯೇ ಬರೆದಿದ್ದು ಯಾಕೆ?

Mumbai Ganesha 2

ಎಲ್ಲೆಲ್ಲೆ ಆಚರಣೆ ಹೇಗೆ?
ಮಹಾರಾಷ್ಟ್ರ:
ಗಣೇಶ ಚತುರ್ಥಿಯ ಸಮಯದಲ್ಲಿ ಕನಸಿನ ನಗರ ಮುಂಬೈ, ಸಾಂಸ್ಕೃತಿಕ ಹಾಟ್‌ಸ್ಪಾಟ್ ಆಗಿ ಬದಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ನಗರದ ಉತ್ಸಾಹವು ಅಪ್ರತಿಮವಾಗಿರುತ್ತದೆ. ಮನೆಗಳಲ್ಲಿ ಮತ್ತು ಸಾರ್ವಜನಿಕ ಪೆಂಡಲ್‌ಗಳಲ್ಲಿ ಸುಂದರವಾಗಿ ರಚಿಸಲಾದ ಸಾವಿರಾರು ಗಣೇಶನ ಮೂರ್ತಿಗಳನ್ನು ಕೂರಿಸಲಾಗುತ್ತದೆ. ಬೃಹತ್ ಗಣೇಶ ಮೂರ್ತಿಗಳಿಗೆ ಭವ್ಯ ಅಲಂಕಾರ ಮಾಡಿ, ಅದ್ಭುತ ಮೆರವಣಿಗೆಯೊಂದಿಗೆ ನಗರಕ್ಕೆ ಜೀವ ತುಂಬುತ್ತವೆ. ‘ಗಣಪತಿ ಬಪ್ಪಾ ಮೋರಿಯಾ.. ಮಂಗಲ್ ಮೂರ್ತಿ ಮೋರಿಯಾ ಎಂಬ ಜೋರಾದ ಘಂಟಾಘೋಷಗಳೊಂದಿಗೆ ಮುಂಬೈ ನಗರವು ಹಬ್ಬದ ಕಳೆಯನ್ನು ತರುತ್ತದೆ. ವರ್ಣರಂಜಿತ ಮೆರವಣಿಗೆಗಳು, ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುತ್ತವೆ. ‘ವಿಸರ್ಜನ್’ ಎಂಬ ದೊಡ್ಡ ಇಮ್ಮರ್ಶನ್ ಮೆರವಣಿಗೆಯೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.

ಕರ್ನಾಟಕ:
ಕರ್ನಾಟಕದಲ್ಲಿ ‘ಗಣೇಶ ಹಬ್ಬ’ವನ್ನು ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ಇಲ್ಲಿ ಗಣೇಶ ಚತುರ್ಥಿಯನ್ನು ಹಲವಾರು ಸಾಂಸ್ಕೃತಿಕ ಮತ್ತು ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಗಣೇಶ ಹಬ್ಬದಂದು ಮೊದಲು ಗಣೇಶನ ತಾಯಿ ಗೌರಿಯ ಆಗಮನವಾಗುತ್ತದೆ. ನಂತರ ಗಣೇಶನನ್ನು ಕೂರಿಸಲಾಗುತ್ತದೆ. ಹಬ್ಬದ ದಿನಗಳಂದು ಪಾಯಸ, ಗೊಜ್ಜು, ಮೋದಕ ಮುಂತಾದ ಸಿಹಿತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯ ಇಡಲಾಗುತ್ತದೆ. ಪೂಜೆ, ಭಜನೆ, ಮಹಾಮಂಗಳಾರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಬೆಂಗಳೂರು ಮತ್ತು ಮೈಸೂರಿನಂತಹ ಸ್ಥಳಗಳಲ್ಲಿ ದೊಡ್ಡ, ದೊಡ್ಡ ಸಾರ್ವಜನಿಕ ಪೆಂಡಲ್‌ಗಳನ್ನು ಹಾಕಿ ಗಣೇಶನನ್ನು ಕೂರಿಸಲಾಗುತ್ತದೆ. ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಯಾದ ಮೋದಕವನ್ನು ನೈವೇದ್ಯ ಇಟ್ಟು, ನಂತರ ಕುಟುಂಬ ಮತ್ತು ಸ್ನೇಹಿತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಇದನ್ನೂ ಓದಿ: ಗಣೇಶನಿಗೆ ಮೊದಲ ಪೂಜೆ ಯಾಕೆ?

GANESHA

ಗೋವಾ:
ಗೋವಾದಲ್ಲಿ ‘ಚವತ್’ ಆಚರಣೆಯ ಸಂಪ್ರದಾಯವಿದೆ. ಮಹಾರಾಷ್ಟ್ರದಂತೆಯೇ ನೆರೆಯ ರಾಜ್ಯ ಗೋವಾ ಕೂಡ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸುತ್ತದೆ. ಹಬ್ಬದಂದು ಜನರು ಮನೆಗಳನ್ನು ಶುಚಿಗೊಳಿಸಿ, ಗಣೇಶನನ್ನು ಕೂರಿಸುತ್ತಾರೆ. ಹಬ್ಬ ಆಚರಣೆಯಲ್ಲಿ ಕುಟುಂಬದವರು ಪರಸ್ಪರ ಸೇರುತ್ತಾರೆ. ಗೋವಾದ ಆಚರಣೆಗಳಲ್ಲಿ ಧಾರ್ಮಿಕ ಪೂಜೆ, ಆರತಿ ಬೆಳಗುವುದು, ದೇವರ ಕುರಿತು ಹಾಡುವುದು, ‘ನೆವ್ರಿ’ ಮತ್ತು ‘ಪಟೋಲಿಯೊ’ನಂತಹ ರುಚಿಕರವಾದ ಸ್ಥಳೀಯ ಸಿಹಿತಿಂಡಿಗಳನ್ನು ತಯಾರಿಸುವುದು ಇರುತ್ತದೆ. ಗೋವಾದಲ್ಲಿ ರಜಾದಿನವು ಎರಡು ದಿನಗಳವರೆಗೆ ಇರುತ್ತದೆ. ಎರಡನೇ ದಿನ ಗಣೇಶ ಮೂರ್ತಿಯನ್ನು ಹತ್ತಿರದ ನದಿಗಳು, ಬಾವಿಗಳು ಅಥವಾ ಸರೋವರಗಳಲ್ಲಿ ವಿಸರ್ಜಿಸುತ್ತಾರೆ. ಗೋವಾದಲ್ಲಿ ‘ದಶಾವತಾರ್’ ಸಾಂಸ್ಕೃತಿಕ ಕಾರ್ಯಕ್ರಮದ ಪದ್ಧತಿ ಇದೆ.

ತಮಿಳುನಾಡು:
ತಮಿಳುನಾಡಿನಲ್ಲಿ ಗಣೇಶ ಚತುರ್ಥಿಯನ್ನು ‘ವಿನಾಯಕ ಚತುರ್ಥಿ’ ಎಂದು ಕರೆಯಲಾಗುತ್ತದೆ. ಗಣೇಶನನ್ನು ಪೂಜಿಸುವ ಜನರು ತಮ್ಮ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಮೂರ್ತಿಗಳನ್ನು ಕೂರಿಸುತ್ತಾರೆ. ಗಣೇಶನ ಪೂಜೆಗಾಗಿಯೇ ಇಲ್ಲಿ ಪ್ರಸಿದ್ಧ ‘ಪಿಳ್ಳೇರ್’ ದೇವಾಲಯಗಳಿವೆ. ಮೂರ್ತಿಗಳ ಅಲಂಕಾರಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ‘ಕೋಝುಕಟ್ಟೈ’ (ಮೋದಕ) ಸಿಹಿ ತಿಂಡಿಗಳನ್ನು ಮಾಡುತ್ತಾರೆ. ವಿನಾಯಕ ಸುಪ್ರಭಾತಂ ಎಂಬ ಮುಂಜಾನೆ ಹಾಡುಗಳನ್ನು ಹಾಡಲಾಗುತ್ತದೆ. ಚೆನ್ನೈ ಮತ್ತು ಇತರೆ ಸ್ಥಳಗಳಲ್ಲಿ ಆಚರಣೆ ಜೋರಾಗಿರುತ್ತದೆ. ಇದನ್ನೂ ಓದಿ: Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

Ganesh Chaturthi

ಆಂಧ್ರ-ತೆಲಂಗಾಣ:
ಈ ರಾಜ್ಯಗಳಲ್ಲಿ ‘ವಿನಾಯಕ ಚವಿತಿ’ ಎಂದು ಹಬ್ಬ ಆಚರಿಸಲಾಗುತ್ತದೆ. ಜನರು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜೇಡಿಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ ಕೂರಿಸಿ ಪೂಜಿಸುತ್ತಾರೆ. ವಿಶೇಷ ಪ್ರಾರ್ಥನೆಗಳು, ಆರತಿಗಳು ಮತ್ತು ಭಜನೆಗಳನ್ನು ಪಠಿಸುವ ಮೂಲಕ ಗಣೇಶನನ್ನು ಆರಾಧಿಸುತ್ತಾರೆ. ಹೈದರಾಬಾದ್‌ನಲ್ಲಿ ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಲಾಗುತ್ತದೆ. ದೇಶದ ಅತ್ಯಂತ ದೊಡ್ಡ ಮತ್ತು ಅತ್ಯಂತ ಪ್ರಸಿದ್ಧವಾದ ಗಣೇಶ ಮೂರ್ತಿಗಳಲ್ಲಿ ಒಂದು ಖೈರತಾಬಾದ್‌ನಲ್ಲಿದೆ. ಕೊನೆಯ ದಿನ ಹೈದರಾಬಾದ್‌ನಲ್ಲಿ ನಿಮಜ್ಜನ ಮೆರವಣಿಗೆಗಳು ಅದ್ಧೂರಿಯಾಗಿ ಜರುಗುತ್ತವೆ.

ಪಶ್ಚಿಮ ಬಂಗಾಳ-ಒಡಿಶಾ:
ಗಣೇಶ ಚತುರ್ಥಿಯನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವಿಶೇಷವಾಗಿ ನಗರಗಳಲ್ಲಿ ಹೆಚ್ಚು ಸಂಭ್ರಮದಿAದ ಆಚರಿಸಲಾಗುತ್ತದೆ. ಒಡಿಶಾದಲ್ಲಿ ಮಕ್ಕಳ ಶಾಲಾ ವರ್ಷದ ಪ್ರಾರಂಭದೊಂದಿಗೆ ಗಣೇಶ ಹಬ್ಬ ಸಮ್ಮಿಲನ ಹೊಂದಿದೆ. ಮಕ್ಕಳಲ್ಲಿ ಜ್ಞಾನ ಮತ್ತು ಬುದ್ದಿವಂತರಾಗಲಿ ಎಂಬ ಕಾರಣಕ್ಕೆ ಈ ಸಂದರ್ಭದಲ್ಲಿ ಆಚರಿಸುತ್ತಾರೆ. ಇದನ್ನೂ ಓದಿ: ಶ್ರೀರಾಮನಿಂದ ಎರಡು ಬಾರಿ ಪೂಜಿಸಲ್ಪಟ್ಟ ಗಣೇಶ ನೆಲೆಸಿದ್ದಾನೆ ಕರ್ನಾಟಕದ ಈ ಪುಣ್ಯ ನೆಲದಲ್ಲಿ!

ಗುಜರಾತ್:
ಈ ರಾಜ್ಯದಲ್ಲೂ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಮೋದಕ, ಸಿಹಿತಿಂಡಿಗಳನ್ನು ಗಣೇಶನಿಗೆ ನೈವೇದ್ಯವಾಗಿ ತಯಾರಿಸುತ್ತಾರೆ. ಅಹಮದಾಬಾದ್ ಮತ್ತು ಸೂರತ್‌ನಂತಹ ಸ್ಥಳಗಳಲ್ಲಿ ಹೆಚ್ಚೆಚ್ಚು ಜನರು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುತ್ತಾರೆ. ವಿಸರ್ಜನೆ ದಿನ ಬೃಹತ್ ಮೆರವಣಿಗೆ ನಡೆಯುತ್ತದೆ. ಹಬ್ಬದಂದು ದೇವಾಲಯಗಳು ಅಲಂಕಾರದೊಂದಿಗೆ ಕಂಗೊಳಿಸುತ್ತವೆ. ವಿಶೇಷ ಪೂಜೆಗಳು ನಡೆಯುತ್ತವೆ.

Share This Article
Facebook Whatsapp Whatsapp Telegram

Cinema news

Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories
Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi

You Might Also Like

Swamiji
Bengaluru City

ಪೂಜೆ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಕಾಮಿ ಸ್ವಾಮಿಯ ಮುಖವಾಡ ಕಳಚಿದ ಮಹಿಳೆ

Public TV
By Public TV
3 minutes ago
Rain 2
Bagalkot

ಇಂದಿನಿಂದ ಮೇ 9 ರವರೆಗೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

Public TV
By Public TV
6 minutes ago
tigers
Chamarajanagar

ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ತಾಯಿ, ಮೂರು ಹುಲಿ ಮರಿಗಳ ದರ್ಶನ

Public TV
By Public TV
9 minutes ago
crocodile
Crime

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ – ಗಂಭೀರ ಗಾಯ

Public TV
By Public TV
25 minutes ago
Mission Drishti launched its the worlds 1st OptoSAR satellite Why is it a headache for Pakistan and China
Karnataka

ಬೆಂಗಳೂರಿನ ಗ್ಯಾಲಕ್ಸ್ ಐ ಅಭಿವೃದ್ಧಿ ಪಡಿಸಿದ ವಿಶ್ವದ ಮೊದಲ OptoSAR ಉಪಗ್ರಹ ಉಡಾವಣೆ ಯಶಸ್ವಿ – ಪಾಕಿಸ್ತಾನ, ಚೀನಾಗೆ ತಲೆನೋವು ಯಾಕೆ?

Public TV
By Public TV
33 minutes ago
pune rape case
Belgaum

4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರ ಹತ್ಯೆಗೈದ ವೃದ್ಧ

Public TV
By Public TV
36 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?