DistrictsGadagKarnatakaLatestMain Post

ಬಿಟ್‍ಕಾಯಿನ್ ಬಗ್ಗೆ ತನಿಖೆ ಆಗಲಿ, ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆಯಾಗಲಿ: ಡಾ.ಜಿ ಪರಮೇಶ್ವರ್

Advertisements

ಗದಗ: ಬಿಟ್‍ಕಾಯಿನ್ ಬಗ್ಗೆ ತನಿಖೆ ಆಗಬೇಕು, ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆಯಾಗಬೇಕು ಎಂದು ಮಾಜಿ ಡಿಸಿಎಮ್ ಡಾ. ಜಿ ಪರಮೇಶ್ವರ್ ( G Parameshwara)ಆಗ್ರಹಿಸಿದ್ದಾರೆ.

ಗದಗ ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ತಲೆ ದಂಡ ಆಗುತ್ತೆ ಅಂತಾ ನಾವು ಹೇಳಲು ಹೇಗೆ ಸಾಧ್ಯ? ಸಿಎಮ್ ತಲೆದಂಡ ಆಗ್ಬೇಕಾದರೆ ಅವರಾಗಲಿ, ಅವರ ಕುಟುಂಬದವರಾಗಲಿ ಭಾಗಿಯಾಗಿರಬೇಕು. ತನಿಖೆ ಮಾಡಿ ಅವರ ಹೆಸರು ಬಂದರೆ ನಾವು ಹೇಳಬಹುದು. ಅವು ಕೇವಲ ಊಹೆ ಅನ್ನೋ ಮೂಲಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ನಟ ನಾಗಶೌರ್ಯ ತಂದೆ ಬಂಧನ

ಬಿಟ್ ಕಾಯಿನ್ ವಿಚಾರವಾಗಿ ಸಮಗ್ರ ತನಿಖೆಯಾಗಬೇಕು. ಸಾವಿರಾರು ಕೋಟಿ ರೂಪಾಯಿ ಹಗರಣ ಆಗಿರುವ ಬಗ್ಗೆ ಅನುಮಾನವಿದೆ. ಯಾರು ತಪ್ಪಿತಸ್ಥರು ಅವರಿಗೆ ಶಿಕ್ಷೆ ಆಗಬೇಕು. ಹ್ಯಾಕರ್ ಶ್ರೀಕಿ ಜೊತೆ ಯಾರಿದ್ದಾರೆ ಅನ್ನೋದು ಗೊತ್ತಿಲ್ಲ. ಎಲ್ಲವೂ ಊಹಾಪೋಹ, ರಾಜಕಾರಣಿಗಳಿದ್ದಾರೆ, ಅಧಿಕಾರಿಗಳಿದ್ದಾರೆ, ಬ್ಯುಸಿನೆಸ್ ಮ್ಯಾನ್‍ಗಳಿದ್ದಾರೆ ಎನ್ನಲಾಗಿದೆ. ಅವರು ಯಾರೇ ಇರಲಿ ಅವರಿಗೆ ಸಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ: ಬೊಮ್ಮಾಯಿ ಗರಂ

ದಲಿತರು ಸಿಎಂ ಆದರೆ ಖುಷಿ ಪಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಆಗಬೇಕು. ನಂತರ ಶಾಸಕಾಂಗ ಸಭೆಯಲ್ಲಿ ಸಿಎಂ ಬಗ್ಗೆ ನಿರ್ಧಾರ ಆಗುತ್ತದೆ.ಯಾರನ್ನು ಸಿಎಂ ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಈಗಲೇ ಸಿಎಂ ಯಾರು ಅಂತಾ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ:  ಬಿಟ್‌ಕಾಯಿನ್‌ ಹಗರಣದಲ್ಲಿ ಸಿಎಂ ತಲೆದಂಡ ಪಡೆಯಲಿದೆ: ಪ್ರಿಯಾಂಕ್ ಖರ್ಗೆ

ಪರಿಷತ್ ಚುನಾವಣೆಗೆ ಕಾಂಗ್ರೆಸ್ 25 ಕ್ಯಾಂಡಿಡೆಟ್ ಹಾಕುತ್ತೇವೆ. 25ರಲ್ಲಿ ಕಳೆದ ಬಾರಿ ಮೆಜಾರಿಟಿ ನಾವೇ ಗೆದ್ದಿದ್ದು, ಈ ಬಾರಿಯೂ ಗೆಲ್ಲುತ್ತೇವೆ. ಕೆಲವರು ವಿಧಾನ ಸಭೆಗೆ ಹೊಗ್ತಾರೆ. ಇನ್ನು ಕೆಲವರು ಸಂಸದರಾಗುತ್ತೇವೆ ಅಂತಿದ್ದಾರೆ ಅವರನ್ನು ಹೊರತು ಪಡಿಸಿ ಬೇರೆಯವರಿದ್ದಾರೆ. ಬೇರೆಯವರಿಗೆ ಅವಕಾಶ ಮಾಡಿಕೊಡುತ್ತೇವೆ. ಪ್ರತಿ ಚುನಾವಣೆಯಂತೆ ಈ ಚುನಾವಣೆಯನ್ನೂ ಸೀರಿಯಸ್ಸಾಗೇ ಮಾಡ್ತೀವಿ ಎಂದ್ರು. ಈ ವೇಳೆ ಮಾಜಿ ಸಂಸದ ಐ.ಜಿ ಸನದಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿದ್ದರು.

Leave a Reply

Your email address will not be published.

Back to top button