ನವದೆಹಲಿ: 2020 ರ ಈಶಾನ್ಯ ದೆಹಲಿ ಗಲಭೆಯಲ್ಲಿ (Delhi Riots 2020) ಹತ್ಯೆಗೀಡಾದ ಗುಪ್ತಚರ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ ಅವರ ಕೊಲೆ ಪ್ರಕರಣದಲ್ಲಿ, ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯವು ಆಪ್‌ನ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ (Tahir Hussain) ಸೇರಿದಂತೆ ಐವರನ್ನ ದೋಷಿಗಳೆಂದು ಎಂದು ತೀರ್ಪು ನೀಡಿದೆ.
ಕರ್ಕಾರ್ಡೂಮಾ ನ್ಯಾಯಾಲಯದ (Karkardooma Court) ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರಿದ್ದ ಪೀಠ ಸೋಮವಾರ (ಇಂದು) ಹುಸೇನ್ ಅವರನ್ನ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 (ಕೊಲೆ), 153 ಎ, 147, 148, 149, 365 ಮತ್ತು 188 ರ ಅಡಿಯಲ್ಲಿ ದೋಷಿ ಎಂದು ತೀರ್ಪು ಪ್ರಕಟಿಸಿದೆ. ಆದಾಗ್ಯೂ, ಕೋರ್ಟ್ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 129 ರ ಅಡಿಯಲ್ಲಿನ ಆರೋಪಗಳಿಂದ ಅವರನ್ನ ಖುಲಾಸೆಗೊಳಿಸಿದೆ.

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದ ಇತರ ನಾಲ್ವರು ಆರೋಪಿಗಳಾದ ನಾಜಿಮ್, ಕಾಸಿಮ್, ಜಾವೇದ್ ಮತ್ತು ಅನಸ್ ಅವರನ್ನು ದೋಷಿಗಳೆಂದು ಘೋಷಿಸಿದ್ದು, ಉಳಿದ 6 ಆರೋಪಿಗಳನ್ನ ಖುಲಾಸೆಗೊಳಿಸಿದೆ. ಇದನ್ನೂ ಓದಿ: ವಯನಾಡಿನಲ್ಲಿ ಭೂಕುಸಿತವಾದರೂ ಪ್ರಿಯಾಂಕಾ ಗಾಂಧಿ ಏಕೆ ಬರಲಿಲ್ಲ? – ಬಿಜೆಪಿ ಪ್ರಶ್ನೆ
2020ರ ಗಲಭೆಯಲ್ಲಿ ಏನಾಗಿತ್ತು?
ಫೆಬ್ರವರಿ 25ರ 2020 ರಲ್ಲಿ ನಡೆದ ದೆಹಲಿ ಗಲಭೆಯ ವೇಳೆ ಗುಪ್ತಚರ ಬ್ಯೂರೋ (IB) ಅಧಿಕಾರಿಯಾಗಿದ್ದ ಅಂಕಿತ್ ಶರ್ಮಾ (Ankit Sharma) ಅವರ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ನಂತರ ಅವರ ಮೃತದೇಹವು ಚಂದ್ ಬಾಗ್ ಪ್ರದೇಶದ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ದಯಾಳ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಎಫ್‌ಐಆರ್ ಸಂಖ್ಯೆ-65).ಇದನ್ನೂ ಓದಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಕಂಪನಿಯಿಂದ ಪ್ರವಾಸ ತೆರಳಿದ್ದ ನಾಲ್ವರು ಟೆಕ್ಕಿಗಳು ದುರ್ಮರಣ

ಶರ್ಮಾ ಕುಟುಂಬಸ್ಥರು ಆರಂಭದಲ್ಲಿ ನಾಪತ್ತೆ ಪ್ರಕರಣ ದೂರು ದಾಖಲಿಸಿದ್ದರು. ಬಳಿಕ ತನ್ನ ಮಗನ ಕೊಲೆಗೆ ತಾಹಿರ್ ಹುಸೇನ್ ಮತ್ತು ಅವನ ಸಹಚರರೇ ಕಾರಣ ಎಂದು ಆರೋಪಿಸಿ ಅಂಕಿತ್ ಶರ್ಮಾ ಅವರ ತಂದೆ ಮತ್ತೊಂದು ದೂರು ನೀಡಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶರ್ಮಾ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿರುವುದು ಗೊತ್ತಾಯಿತು. 51 ಗಾಯದ ಗುರುತುಗಳು ಕಂಡುಬಂದಿತ್ತು. ಸುದೀರ್ಘ ವಿಚಾರನೆಯ ಬಳಿಕ ಇದೀಗ ತಾಹಿರ್‌ನನ್ನ ದೋಷಿ ಎಂದು ಗುರುತಿಸಿ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನ ಕಾಯ್ದಿರಿಸಿದೆ.
