– ಸಿರಿಯಾದಲ್ಲಿ ಹೆಚ್ಚಿನ ಸಮಯ ಕಳೆದಿದ್ದ ʻಅಲ್ಹಮಾಮಿʼ
ಮಸ್ಕತ್: ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ಮಾಡಿದ್ದ ಸಹ ಪೈಲಟ್‌ಗೆ ಒಮಾನ್‌ನಲ್ಲಿ ವಿಮಾನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು ಎಂದು ವರದಿಯಾಗಿದೆ.
ಸಹ ಪೈಲಟ್‌ನ್ನು ಹಮಾಮ್ ಅಲ್ಹಮಾಮಿ (Hamam al-Hammami) ಎಂದು ಗುರುತಿಸಲಾಗಿದೆ. ಆತ ಉಗ್ರಗಾಮಿ ಮನಸ್ಥಿತಿಯನ್ನು ಹೊಂದಿದ್ದ. ಇದೇ ಕಾರಣಕ್ಕೆ ಒಮಾನ್‌ನಲ್ಲಿ ಹಾರಾಟ ನಡೆಸುವುದನ್ನು ನಿಷೇಧಿಸಲಾಗಿತ್ತು. ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಪೈಲಟ್ ಮೇಲೆ ದಾಳಿ: ಘಟನೆ ಹಿಂದೆ ಉಗ್ರ ಸಂಘಟನೆ ಕೈವಾಡ?
ಅಲ್ಹಮಾಮಿ ತನ್ನ ಹೆಚ್ಚಿನ ಸಮಯವನ್ನು ಸಿರಿಯಾದಲ್ಲಿ ಕಳೆದಿದ್ದ. ಅಲ್ಲಿ ಆತ ಉಗ್ರಗಾಮಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ. ನಂತರ ಆತ ಯುಎಇಗೆ ಪ್ರಯಾಣ ಬೆಳೆಸಿದ್ದ.
ನಿಷೇಧದ ಹೊರತಾಗಿಯೂ, ಫ್ಲೈದುಬೈ ಪೈಲಟ್‌ನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವಿನ ಸೂಕ್ಷ್ಮ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಿತ್ತು.
ವಿಮಾನದಲ್ಲಿ ನಡೆದಿದ್ದೇನು?
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಸಹ ಪೈಲಟ್ ಕ್ರ್ಯಾಶ್ ಆಕ್ಸ್ ಬಳಸಿ ಹಲ್ಲೆ ಮಾಡಿದ್ದ. ಆಗ ಸ್ಮಿತ್ ಜೋರಾಗಿ ಕಿರುಚಿದ್ದರು. ಈ ವೇಳೆ ಮಹಿಳಾ ಪ್ರಯಾಣಿಕರು ಕೂಡಲೇ ಕಾಕ್‌ಪಿಟ್‌ಗೆ ಧಾವಿಸಿದ್ದರು. ಕೂಡಲೇ ಆಕೆ ಕಿರುಚಿಕೊಂಡು ಸಹಾಯಕ್ಕಾಗಿ ಇತರರನ್ನು ಕರೆದಿದ್ದರು.
ಮುಂಭಾಗದ ಸೀಟುಗಳಲ್ಲಿದ್ದ ಹಲವು ಇಸ್ರೇಲಿ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ನುಗ್ಗಿ, ದಾಳಿ ನಡೆಸುತ್ತಿದ್ದ ಓಮನ್ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದರು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಚಾಲಕರೊಬ್ಬರು ವಿಮಾನವನ್ನು ನಿಯಂತ್ರಿಸಿದ್ದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಇದನ್ನೂ ಓದಿ: ಯಹೂದಿಗಳ ಹತ್ಯೆ ಬಗ್ಗೆ ಪೋಸ್ಟ್ ಮಾಡಿದ್ದ ಒಮಾನ್ ಪೈಲಟ್

