ಬೆಂಗಳೂರು: ತಿರುಪತಿಯ (Tirupati) ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಮೊದಲ ಆರತಿ (Aarti) ಸಾಂಪ್ರದಾಯಿಕವಾಗಿ ಕರ್ನಾಟಕ (Karnataka) ರಾಜ್ಯದ ಹೆಸರಿನಲ್ಲೇ ಸಲ್ಲಿಕೆಯಾಗುತ್ತಿರುವ ವಿಶೇಷ ಶಿಷ್ಟಾಚಾರಕ್ಕೆ ಇದೀಗ ಹೊಸ ಆಯಾಮ ದೊರೆಯುತ್ತಿದೆ. ಈವರೆಗೆ ಈ ಆರತಿ ವೇಳೆ ಕರ್ನಾಟಕ ಸರ್ಕಾರದ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದರೆ, ಇನ್ನು ಮುಂದೆ ರಾಜ್ಯದ ಸಚಿವರು, ಶಾಸಕರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ತಿರುಮಲ ತಿರುಪತಿ ದೇವಸ್ಥಾನಂ (TTD) ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯವೇ ಈ ಅವಕಾಶ ನೀಡಲಾಗುತ್ತಿದ್ದು, ಶಿಷ್ಟಾಚಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಟಿಟಿಡಿ ಮಾರ್ಗಸೂಚಿಗಳ ಪ್ರಕಾರವೇ ಎಲ್ಲ ವ್ಯವಸ್ಥೆಗಳು ನಡೆಯಲಿದ್ದು, ಸಂಪ್ರದಾಯವನ್ನು ಗೌರವಿಸುವ ರೀತಿಯಲ್ಲೇ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒತ್ತುವರಿ ತೆರವಿಗೆ ವಿರೋಧ – ತಾವೇ ಆಯ್ಕೆ ಮಾಡಿದ ನಾಯಕನ ವಿರುದ್ಧ ತಿರುಗಿಬಿದ್ದ ನೇಪಾಳದ Gen-Z ಪಡೆ
ಇದೇ ವಿಚಾರವಾಗಿ ಈ ಹಿಂದೆ ಮುಜರಾಯಿ ಖಾತೆ ನಿರ್ವಹಿಸಿದ್ದ ಹಾಗೂ ಹಾಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಕೂಡ, ಟಿಟಿಡಿಯ ಮಾರ್ಗಸೂಚಿಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 10,000 ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ – ಪ್ರತಿ ಸಂಘಕ್ಕೆ ತಲಾ 10 ಲಕ್ಷ ರೂ.
ತಿರುಪತಿ ದೇವಸ್ಥಾನದಲ್ಲಿ ಕರ್ನಾಟಕದ ಹೆಸರಿನಲ್ಲಿ ಮೊದಲ ಆರತಿ ಸಲ್ಲಿಸುವ ಸಂಪ್ರದಾಯಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಇದು ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಈ ಶಿಷ್ಟಾಚಾರ ಕರ್ನಾಟಕ ಮತ್ತು ತಿರುಮಲ ದೇವಾಲಯದ ನಡುವಿನ ಧಾರ್ಮಿಕ ಹಾಗೂ ಐತಿಹಾಸಿಕ ಬಾಂಧವ್ಯದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಇದೀಗ ರಾಜ್ಯದ ಗಣ್ಯರಿಗೂ ಈ ಶಿಷ್ಟಾಚಾರದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತಿರುವುದು ಕರ್ನಾಟಕದ ಪಾಲಿಗೆ ಮತ್ತೊಂದು ವಿಶೇಷ ಗೌರವದ ಸಂಗತಿ. ಇದನ್ನೂ ಓದಿ: ಆ.6ರಿಂದ ಮುಂಗಾರು ಅಧಿವೇಶನ; ಮೂರ್ನಾಲ್ಕು ದಿನದಲ್ಲಿ ಹೈಕಮಾಂಡ್ ದೆಹಲಿಗೆ ಕರೆಯಬಹುದು: ಡಿಕೆಶಿ
