ಮಂಡ್ಯ: ಮೆಡಿಸಿನ್ ತುಂಬಿಕೊಂಡು ಬೆಂಗಳೂರಿಂದ ಮಂಡ್ಯಕ್ಕೆ ಬರುತ್ತಿದ್ದ ಕಂಟೇನರ್ ಮೇಲೆ ಗುಂಡಿನ ದಾಳಿ ನಡೆದಿದ್ದು, ದರೋಡೆ ಯತ್ನ ಆರೋಪ ಕೇಳಿಬಂದಿದೆ. ಮಂಡ್ಯದ (Mandya) ಪ್ರಭಾವಿ ವ್ಯಕ್ತಿಯ ಪುತ್ರನಿಂದ ಫೈರಿಂಗ್ ನಡೆದಿದೆ ಎಂದು ಆರೋಪಿಸಲಾಗಿದೆ.
ಮಂಡ್ಯದ ಬಳಿ ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ನಿನ್ನೆ ಮುಂಜಾನೆ 4 ಗಂಟೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಐಷಾರಾಮಿ ಕಾರಿನಲ್ಲಿದ್ದ ಪ್ರಭಾವಿ ವ್ಯಕ್ತಿಯ ಪುತ್ರ ಹಾಗೂ ಆತನ ಗ್ಯಾಂಗ್‌ನಿಂದ ಕೃತ್ಯ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದ ಪೋಕ್ಸೊ ಕೇಸ್ ಆರೋಪಿ ಪರಾರಿ
ಮೆಡಿಸಿನ್ ತುಂಬಿಕೊಂಡು ಮಂಡ್ಯಗೆ ಕಂಟೇನರ್ ಬರುತ್ತಿತ್ತು. ಕಂಟೇನರ್‌ನಲ್ಲಿ ಚಾಲಕನ ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಮೈಸೂರು ಮೂಲದ ಕಂಟೇನರ್ ಚಾಲಕ ಶಂಕರ್ ಭಯದಲ್ಲಿ ಪೊಲೀಸರಿಗೂ ಮಾಹಿತಿ ನೀಡದೆಯೇ ತೆರಳಿದ್ದ.
ನಡೆದಿದ್ದೇನು?
ಮುಂಜಾನೆ 4 ಗಂಟೆಯಲ್ಲಿ ಐಷಾರಾಮಿ ಕಾರಿನಲ್ಲಿ ಕಂಟೇನರ್ ಲಾರಿ ಅಡ್ಡಗಟ್ಟಲು ಪ್ರಯತ್ನ ನಡೆದಿತ್ತು. ಚಾಲಕ ಲಾರಿಯನ್ನು ನಿಲ್ಲಿಸದೇ ಇದ್ದಾಗ ಉದ್ಯಮಿ ಪುತ್ರ ಗುಂಡು ಹಾರಿಸಿದ್ದಾನೆ. ಬಾಯಿಂದ ಬಾಯಿಗೆ ಸುದ್ದಿ ಹರಡಿದ ಬಳಿಕ ಪೊಲೀಸರು ಎಚ್ಚೆತ್ತಿದ್ದಾರೆ. ಲಾರಿ ಚಾಲಕ ಶಂಕರ್‌ನನ್ನು ಠಾಣೆಗೆ ಕರೆಸಿ ಪೊಲೀಸರು ದೂರು ದಾಖಲಿಸಿದ್ದಾರೆ. ಅದಾದ ಬಳಿಕ ಪ್ರಭಾವಿ ವ್ಯಕ್ತಿಯ ಪುತ್ರನನ್ನ ತಡರಾತ್ರಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಮಂಡ್ಯ DYSP ಕಚೇರಿಯಲ್ಲಿ ವಿಚಾರಣೆ ನಡೆದಿದೆ. ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ವೆನೆಜುವೆಲಾ ಅವಳಿ ಭೂಕಂಪಕ್ಕೆ ಪ್ರಾಣತೆತ್ತವರ ಸಂಖ್ಯೆ 2,595ಕ್ಕೆ ಏರಿಕೆ
ಲಾರಿ ಚಾಲಕನ ಮೇಲೆ ಗುಂಡು ಹಾರಿಸಿದ ಪ್ರಭಾವಿ ವ್ಯಕ್ತಿಯ ಪುತ್ರನ ಬಳಿ ಗನ್ ಲೈಸೆನ್ಸ್ ಇಲ್ಲ. ಆದರೂ ಆತನಿಗೆ ಗನ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆಯೂ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.
