-11,000ಕ್ಕೂ ಹೆಚ್ಚು ಜನರಿಗೆ ಗಾಯ
ಕಾರಕಾಸ್: ಸೆಕೆಂಡುಗಳ ಅಂತರದಲ್ಲಿ ವೆನೆಜುವೆಲಾದಲ್ಲಿ (Venezuela) ಸಂಭವಿಸಿದ್ದ ಅವಳಿ ಭೂಕಂಪದ (Earthquake) ಪರಿಣಾಮ 2,595 ಜನರು ಪ್ರಾಣಕಳೆದುಕೊಂಡಿದ್ದಾರೆ. ಜೊತೆಗೆ 11,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodriguez) ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.24ರಂದು ಸಂಭವಿಸಿದ ಭೀಕರ ಅವಳಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,595ಕ್ಕೆ ಏರಿಕೆಯಾಗಿದೆ. ಈ ಭೀಕರ ನೈಸರ್ಗಿಕ ವಿಕೋಪದಲ್ಲಿ 11,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆ ಇನ್ನು ನಿರಂತರವಾಗಿ ಸಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೆನೆಜುವೆಲಾದಲ್ಲಿ ಮತ್ತೆ ಕಂಪಿಸಿದ ಭೂಮಿ – 4.9 ತೀವ್ರತೆ ದಾಖಲು, 900ರ ಗಡಿದಾಟಿದ ಸಾವಿನ ಸಂಖ್ಯೆ
ಅವಳಿ ಭೂಕಂಪದಿಂದಾಗಿ ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಆದರೆ ಮೃತರ ಗೌರವಾರ್ಥವಾಗಿ ಯಾವುದೇ ಸಾಮೂಹಿಕ ಸಮಾಧಿಗಳನ್ನು ನಿರ್ಮಿಸುವ ಯೋಜನೆ ಸರ್ಕಾರದ ಮುಂದೆ ಇಲ್ಲ. ಪ್ರಸ್ತುತ 31 ದೇಶಗಳು, ವಿವಿಧ ಬಹುಪಕ್ಷೀಯ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲದೊಂದಿಗೆ ವೆನೆಜುವೆಲಾ ಮೂಲಸೌಕರ್ಯಗಳ ಪುನರ್ನಿರ್ಮಾಣದಲ್ಲಿ ತೊಡಗಿದ್ದು, ಇದು ನಮ್ಮ ಜನರಿಗೆ ಸಿಕ್ಕ ಭರವಸೆ ಎಂದು ಬಣ್ಣಿಸಿದ್ದಾರೆ.
ಈ ಮಧ್ಯೆ, ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾದ ಪುನರ್ನಿರ್ಮಾಣ ಕಾರ್ಯಗಳಿಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಮತ್ತು ವಿಶ್ವ ಬ್ಯಾಂಕ್ (World Bank) ಧನಸಹಾಯ ಹಾಗೂ ಸಾಲದ ನೆರವು ನೀಡಲು ಮುಂದೆ ಬಂದಿದೆ. 200 ಮಿಲಿಯನ್ ಡಾಲರ್ (1904 ಕೋಟಿ ರೂ.) ಮೊತ್ತದ ವಿಶೇಷ ಪುನರ್ನಿರ್ಮಾಣ ನಿಧಿಯನ್ನು ಸ್ಥಾಪಿಸಲಾಗುತ್ತಿದ್ದು, ಈ ಹಣವನ್ನು ನೇರವಾಗಿ ಗುತ್ತಿಗೆದಾರರಿಗೆ ವಿತರಿಸಲಾಗುವುದು ಎಂದಿದ್ದಾರೆ.ಇದನ್ನೂ ಓದಿ: ವೆನೆಜುವೆಲಾ ಭೂಕಂಪದಲ್ಲಿ ಮಗಳನ್ನು ಕಾಪಾಡಿ ಪ್ರಾಣತ್ಯಾಗ ಮಾಡಿದ ಫುಟ್‌ಬಾಲರ್ ಪತ್ನಿ
Recorrimos hospitales de campaña instalados por naciones hermanas y organizaciones internacionales.
La solidaridad de 31 países, organismos multilaterales y organizaciones no gubernamentales ha sido un abrazo de esperanza para nuestro pueblo. ¡Gracias pic.twitter.com/UrPLvqiBrQ
— Delcy Rodríguez (@delcyrodriguezv) July 2, 2026
ದುರಂತ ಸಂಭವಿಸಿದ ಬಳಿಕ ನಾವು ಒಂದು, ಎರಡು ಅಥವಾ ಮೂರು ದಿನ ಕಾಯಲಿಲ್ಲ, ದುರಂತ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದೇವೆ. ಆದರೆ ಕಟ್ಟಡಗಳು ಕುಸಿದ ಜಾಗಗಳಲ್ಲಿ ಅಲ್ಲಿನ ಪ್ರತ್ಯಕ್ಷದರ್ಶಿಗಳು, ನೆರೆಹೊರೆಯವರು ಮತ್ತು ಸಂಬಂಧಿಕರೇ ಮೊದಲ ರಕ್ಷಕರಾಗಿ ಧಾವಿಸುವುದು ಸಹಜ ಪ್ರಕ್ರಿಯೆ. ಆದರೆ ಲಾಗೌರಾ ಭಾಗದ ನಿವಾಸಿಗಳು ಮೊದಲ 48 ಗಂಟೆಗಳ ಕಾಲ ಸರ್ಕಾರದ ಯಾವುದೇ ಸಹಾಯವಿಲ್ಲದೆ ಬರಿಗೈಯಿಂದಲೇ ತಮ್ಮ ಪ್ರೀತಿಪಾತ್ರರನ್ನು ಅವಶೇಷಗಳಡಿ ಹುಡುಕಬೇಕಾಯಿತು ಎಂಬ ವರದಿಗಳ ಸುಳ್ಳು. ಇದೆಲ್ಲ ವ್ಯವಸ್ಥಿತ ಪ್ರಚಾರದ ಪ್ರಯೋಗಾಲಯಗಳಲ್ಲಿ ಸೃಷ್ಟಿಯಾದ ಸುಳ್ಳು ಕಥೆಗಳು. ಇಂತಹ ದುರಂತದ ಸಂದರ್ಭದಲ್ಲಿ ರಾಜಕೀಯ ಮಾಡುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ.
🇻🇪 La ONU afirma que la cifra de muertos por los terremotos en Venezuela es superior a la registrada por el Gobierno local y confirma la adquisición, ya acordada, de 10.000 bolsas para cadáveres ante la magnitud del desastre. pic.twitter.com/tFoyEvgVWC
— Alerta Mundial (@AlertaMundoNews) June 30, 2026
ಡೆಲ್ಸಿ ರೊಡ್ರಿಗಸ್ ಅವರು ಮಾಧ್ಯಮಮಿತ್ರರೊಂದಿಗೆ ಮಾತನಾಡುವಾಗ, ಶೋಕಾಚರಣೆಯ ಸಂಕೇತವಾಗಿ ಕಪ್ಪು ರಿಬ್ಬನ್ ಧರಿಸಿ ಮಾತನಾಡಿರುವುದು ಗಮನ ಸೆಳೆದಿದೆ. ಇದಕ್ಕೂ ಮುನ್ನ ವಿವಿಧ ಸಹೋದರ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಸ್ಥಾಪಿಸಿರುವ ತಾತ್ಕಾಲಿಕ ಫೀಲ್ಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಹಿಂದೆ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿದ್ದ ಡೆಲ್ಸಿ ರೊಡ್ರಿಗಸ್, ಜನವರಿಯಲ್ಲಿ ಮಡುರೊ ಅಧಿಕಾರ ಕಳೆದುಕೊಂಡ ಬಳಿಕ ಟ್ರಂಪ್ ಆಡಳಿತದ ಬೆಂಬಲದೊಂದಿಗೆ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಇದನ್ನೂ ಓದಿ: 40 ಡಿಗ್ರಿ ತಾಪಮಾನಕ್ಕೆ ಕರಗುತ್ತಿವೆ ಯುರೋಪ್ ರಸ್ತೆಗಳು – ಭಾರತದಲ್ಲಿ 55 ಡಿಗ್ರಿ ಬಿಸಿಲಿದ್ದರೂ ಹೈವೇಗಳು ಗಟ್ಟಿಯಾಗಿದೆ ಯಾಕೆ?
