ಕರಾಕಾಸ್: ಎರಡು ದಿನಗಳ ಹಿಂದೆ ಸಂಭವಿಸಿದ್ದ ಪ್ರಬಲ ಅವಳಿ ಭೂಕಂಪಗಳ ಬೆನ್ನಲ್ಲೇ ಇದೀಗ ವೆನೆಜುವೆಲಾದಲ್ಲಿ (Venezuela) ಮತ್ತೆ ಭೂಮಿ ಕಂಪಿಸಿದೆ.
ಇಎಂಎಸ್‌ಸಿ ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲಾಗಿದ್ದು, ಮರಕೇಯಿಂದ ವಾಯುವ್ಯಕ್ಕೆ 61 ಕಿಲೋಮೀಟರ್ ದೂರದಲ್ಲಿ ಇದರ ಕೇಂದ್ರಬಿಂದುವಿದೆ. ಪರಿಣಾಮ ಮರಕೇ ಮತ್ತು ರಾಜಧಾನಿ ಕರಾಕಾಸ್ ಎರಡರಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ: ವೆನೆಜುವೆಲಾ ಅವಳಿ ಭೂಕಂಪ; ಮೃತರ ಸಂಖ್ಯೆ 589ಕ್ಕೆ ಏರಿಕೆ, 4,300ಕ್ಕೂ ಹೆಚ್ಚು ಮಂದಿಗೆ ಗಾಯ

ಜೂನ್ 24ರಂದು ವೆನೆಜುವೆಲಾದ ಕೆರಿಬಿಯನ್ ಕರಾವಳಿ ಸಮೀಪ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಇದರ ಪರಿಣಾಮ 920ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 4,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವಾರು ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ವೆನೆಜುವೆಲಾದಲ್ಲಿ ಪ್ರಬಲ ಅವಳಿ ಭೂಕಂಪ – 164 ಮಂದಿ ಸಾವು, 970 ಕ್ಕೂ ಹೆಚ್ಚು ಮಂದಿಗೆ ಗಾಯ

ಇನ್ನೂ ಈ ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿದ್ದು, ವ್ಯಾಪಕ ಹಾನಿಯಾಗಿದೆ. ಭೂಕಂಪದಿಂದ ವೆನೆಜುವೆಲಾದ ಪ್ರಮುಖ ವಿಮಾನ ನಿಲ್ದಾಣಕ್ಕೂ ಹಾನಿಯಾಗಿದೆ. ಇದರಿಂದ ಪರಿಹಾರ ಸಾಮಗ್ರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಲುಪಿಸಲು ತೊಂದರೆ ಉಂಟಾಗಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ.

ವೆನೆಜುವೆಲಾದಲ್ಲಿ ಕಳೆದ 126 ವರ್ಷಗಳಲ್ಲೇ ಇದು ಅತಿ ಪ್ರಬಲ ಭೂಕಂಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1900ರ ಬಳಿಕ ಇಷ್ಟು ತೀವ್ರ ಭೂಕಂಪ ದೇಶದಲ್ಲಿ ದಾಖಲಾಗಿರಲಿಲ್ಲ. 1997ರಲ್ಲಿ ಸಂಭವಿಸಿದ್ದ 6.9 ತೀವ್ರತೆಯ ಭೂಕಂಪದಲ್ಲಿ 73 ಮಂದಿ ಮೃತಪಟ್ಟಿದ್ದರು. ಇದನ್ನೂ ಓದಿ: ವೆನೆಜುವೆಲಾ ಭೂಕಂಪಕ್ಕೆ ಪ್ರಧಾನಿ ದಿಗ್ಭ್ರಮೆ – ಭಾರತದಿಂದ ಅಗತ್ಯ ನೆರವು ನೀಡೋದಾಗಿ ಮೋದಿ ಘೋಷಣೆ
