ಬಿರು ಬಿಸಿಲಿನ ಬೇಗೆ ಸಹಿಸಲಾಗುತ್ತಿಲ್ಲ. ಯಾವ ಬಟ್ಟೆ ಧರಿಸಿದರೂ ಮೈಗೆ ಕಿರಿ ಆಗಾಗ್ಗೆ, ತೊಟ್ಟಿಕ್ಕುವ ಬೆವರಹನಿಯಿಂದಾಗಿ ಯಾವ ಬಟ್ಟೆ ತೊಟ್ಟರೂ ಒಂದು ರೀತಿ ಅನ್‌ಕಂಫರ್ಟೆಬಲ್. ಕಚೇರಿಗೆ ಹೋಗ್ಬೇಕಂದ್ರೂ ಇವತ್ತುವ ಯಾವ ಬಟ್ಟೆ ಹಾಕಲಿ, ಬಿಸಿಲು ಜಾಸ್ತಿ ಇರುತ್ತದಲ್ಲಾ ಎಂಬುದೇ ಪ್ರಶ್ನೆ.
ಏಕೆಂದರೆ ನಾವು ಧರಿಸೋ ಬಟ್ಟೆ ಕಣ್ಣಿಗೂ, ದೇಹಕ್ಕೂ ಸುಖದಾಯಕವಾಗಿರಬೇಕು. ಬೇಸಿಗೆಯಲ್ಲಿ ಫಳಫಳ ಹೊಳೆಯುವ, ಜರಿತಾರಿ ಬಟ್ಟೆಗಳು ಎಂದರೆ ಎಲ್ಲರಿಗೂ ಆಲರ್ಜಿಯೇ ಸರಿ. ಈಗೇನಿದ್ದರೂ ಹಗುರವಾದ, ಮೆತ್ತನೆಯ ಹತ್ತಿ ಬಟ್ಟೆಯೇ ಸೊಗಸು. ಅದೂ ಸೀರೆಯಾಗಿರಬಹುದು, ಚೂಡಿದಾರವಾಗಿರಬಹುದು ಅಥವಾ ಸ್ಕರ್ಟ್ ಆದರೂ ಸರಿಯೇ ಹಗರುವಾದ ಭಾವನೆ ನೀಡಬೇಕು ಎನಿಸುತ್ತದೆ.
Advertisement
Advertisement
ಬೇಸಿಗೆಯಲ್ಲಿ ಸಡಿಲವಾದ ಉಡುಪುಗಳು ಹೆಚ್ಚು ಹಿತಕರ. ಸ್ಲೀವ್‌ಲೆಸ್ ಟಾಪ್‌ಗಳು ಬೇಸಿಗೆಯ ಟ್ರೆಂಡ್. ಎಲ್ಲ ವಯೋಮಾನದವರು ಈ ಬೇಸಿಗೆಯಲ್ಲಿ ಸ್ಲೀವ್‌ಲೆಸ್ ಉಡುಪು ಧರಿಸಲು ಇಚ್ಛಿಸುತ್ತಾರೆ. ಅದು ಸೀರೆಯಾಗಿರಬಹುದು, ಚೂಡಿದಾರ್ ಆಗಿರಬಹುದು ಅಥವಾ ಪ್ಯಾಂಟ್ ಶರ್ಟ್ ಧರಿಸುವವರಾಗಿರಬಹುದು. ಅದು ಎಲ್ಲರಿಗೂ ಇಷ್ಟವಾಗುವ ಫ್ಯಾಷನ್. ತೋಳಿನ ಅಳತೆಗೆ ಸರಿಯಾಗಿದ್ದರೆ ಹಾಕಿಕೊಳ್ಳಲು, ಕೆಲಸ ಮಾಡಲು ಮುಜುಗರವಾಗುವುದಿಲ್ಲ. ಈ ಬಗ್ಗೆ ಸ್ವಲ್ಪ ಮಟ್ಟಿನ ಎಚ್ಚರಿಕೆ ವಹಿಸುವುದು ಸೂಕ್ತ. ಇದಕ್ಕಾಗಿಯೇ ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ.
Advertisement
ಸ್ಕೇಟರ್ ಉಡುಗೆ:
ವರ್ಣರಂಜಿತ ಮಾದರಿಯ ಸ್ಕೇಟರ್ ಉಡುಪು ಮಹಿಳೆಯರ ಮೇಲಿನ ಆಕರ್ಷಕ ನೋಟ ಹೆಚ್ಚಿಸುತ್ತದೆ. ನೋಡಲು ಚಿಕ್ಕ ಶೈಲಿಯಿದ್ದರೂ ಎ-ಲೈನ್ ಆಕಾರ ಹೊಂದಿರುವ ಸ್ಕರ್ಟ್ ನಿಮ್ಮ ದೇಹದ ಆಕಾರವನ್ನೂ ಹೈಲೈಟ್ ಮಾಡುತ್ತದೆ. ಎಲ್ಲ ವಯಸ್ಸಿನ ಮಹಿಳೆಯರಿಗೂ ಈ ಡ್ರೆಸ್ ಬೇಸಿಗೆಯಲ್ಲಿ ಫೆವರೆಟ್.
Advertisement
ಹೂವಿನ ಉಡುಗೆ:
ಹೂವಿನ ಚಿತ್ರಣ ಹೊಂದಿದಂತೆ ಇರುವ ಈ ಉಡುಗೆ ಬೇಸಿಗೆಯಲ್ಲಿ ಹೆಚ್ಚು ಟ್ರೆಂಡ್ ಆಗಿದೆ. ನೀಳ ದೇಹ ವುಳ್ಳವರಿಗೆ ಈ ಡ್ರೆಸ್ ಸೂಕ್ತವಾಗುತ್ತದೆ. ಡ್ರೆಸ್ ಮೇಲಿನ ಹೂವಿನ ಬಾರ್ಡರ್ ಬಿರು ಬಿಸಲಿನಲ್ಲೂ ಇತರರು ವಾರೆ ನೋಟ ಬೀರುವಂತೆ ಆಕರ್ಷಿಸುತ್ತದೆ.
ಸ್ಲೀವ್ ಲೆಸ್ ಉಡುಗೆ:
ಬೇಸಿಗೆ ಕಾಲದಲ್ಲಿ ಹೆಚ್ಚಿನವರು ಸ್ಲೀವ್‌ಲೆಸ್ ತೋಳನ್ನೇ ಬಳಸುತ್ತಾರೆ. ಅದರಲ್ಲೂ ನೀಲಿ ಮತ್ತು ಆಕಾಶ ನೀಲಿ ಬಣ್ಣದ ಸ್ಲೀವ್‌ಲೆಸ್ ಉಡುಗೆ ಹುಡುಗಿಯರಿಗೆ ಮಾದಕ ಲುಕ್ ನೀಡುತ್ತದೆ. ಆ ದಿನದ ತಾಪಮಾನ ಹೇಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸ್ಲೀವ್‌ಲೆಸ್ ಧರಿಸಬಹುದು. ಇದನ್ನೂ ಓದಿ: ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್
ಲಾಂಗ್ ಸಮ್ಮರ್ ಮ್ಯಾಕ್ಸಿ ಉಡುಗೆ:
ವಿಶಿಷ್ಟ ರೀತಿಯಿಂದ ಕೂಡಿದ ಈ ಉಡುಗೆಯು ಎತ್ತರದ ಮಹಿಳೆಯರಿಗೆ ಸ್ಯೂಟ್ ಆಗುತ್ತದೆ. ಚರ್ಚ್ ಗಳಿಗೆ ಹೋಗುವಾಗ, ಪದವಿ, ಮದುವೆ ಪಾರ್ಟಿ ಇತ್ಯಾದಿ ಕಾರ್ಯಕ್ರಮಗಳಿಗೆ ಹೆಚ್ಚು ಸೂಕ್ತವೆನಿಸುತ್ತದೆ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್ – ಏನಿದೆ ವಿಶೇಷ?
ಸನ್‌ಡ್ರೆಸ್:
ಅಲಂಕಾರಿಕ ಡ್ರೆಸ್‌ನಲ್ಲಿ ಸನ್ ಡ್ರೆಸ್‌ಕೂಡ ಒಂದು,ಕಡಲತೀರದ ಜನರು ಹಾಗೂ ಬೇಸಿಗೆಯಲ್ಲಿ ಬೀಚ್ ಗಳಿಗೆ ಪ್ರವಾಸಕ್ಕೆ ತೆರಳುವವರು ಈ ರೀತಿಯ ಉಡುಗೆ ಧರಿಸುತ್ತಾರೆ. ಇದು ಮಹಿಳೆಯರ ಅಂದವನ್ನು ಇಮ್ಮಡಿಗೊಳಿಸುತ್ತದೆ.