ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರಿಗೆ ರೈತರು ಮುತ್ತಿಗೆ ಹಾಕಿ ಘೇರಾವ್ ಕೂಗಿದ್ದಾರೆ.
ಶಿವಕುಮಾರ್ ಅವರು ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ರೈತರು ಈ ಮಾರ್ಗವಾಗಿ ಡಿಕೆಶಿ ಬರುವುದನ್ನು ತಿಳಿದು ಹೆದ್ದಾರಿಗಿಳಿದಿದ್ದರು. ಅದರಂತೆಯೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶಿವಕುಮಾರ್ ಕಾರು ತಡೆದು ಮಂಡ್ಯ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾರಿನಿಂದ ಕೆಳಗಿಳಿಸಿ ಡಿಕೆಶಿಯನ್ನು ತರಾಟೆ ತೆಗೆದುಕೊಂಡ ರೈತರು
Advertisement
Advertisement
ಚುನಾವಣೆಗೂ ಮುಂಚೆ ಮಂಡ್ಯ ರೈತರ ಜಮೀನಿಗೆ ಪ್ರಾಧಿಕಾರವನ್ನು ಕೇಳದೆ ನೀರು ಬಿಟ್ಟಿದ್ದೀರಿ. ಆದರೆ ಚುನಾವಣೆ ಮುಗಿದ ಮೇಲೆ ನೀರು ಬಿಡಿ ಅಂದರೆ ಪ್ರಾಧಿಕಾರದ ಕಡೆ ಕೈ ತೋರಿಸುತ್ತೀರಾ ಎಂದು ಶಿವಕುಮಾರ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿ ಪ್ರಶ್ನೆ ಮಾಡಿದ್ದಾರೆ.
Advertisement
ರೈತರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಆ ಸಮಯದಲ್ಲಿ ನೀರು ಬಿಡಲು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿತ್ತು. ಕಾವೇರಿ ನದಿ ನೀರನ್ನು ಹರಿಸುವ ಅಧಿಕಾರ ನಮ್ಮ ಅಧಿಕಾರಿಗಳಿಗೆ ಇಲ್ಲ. ಈ ಬಗ್ಗೆ ಜೂನ್ 25ರಂದು ಸಭೆ ಕರೆದಿದ್ದು, ಈ ಸಂಬಂಧವಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement
ಕಳೆದ ಮೂರ್ನಾಲ್ಕು ದಿನಗಳಿಂದ ಮಂಡ್ಯದಲ್ಲಿ ನೀರಿಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಆದರೂ ನೀರು ಬಿಟ್ಟಿಲ್ಲ ಎಂದು ಡಿಕೆಶಿ ಮುಂದೆ ರೈತರು ಅಸಮಾಧಾನ ಹೊರಹಾಕಿದ್ದಾರೆ.