– ಕ್ಷಮೆ ಕೋರಿದ ವಾಟ್ಸಪ್, ಎಫ್‍ಬಿ
ಬೆಂಗಳೂರು: ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ (WhatsApp), ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಜಗತ್ತಿನಾದ್ಯಂತ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದವು. ಮಧ್ಯರಾತ್ರಿ 3.30ರ ವೇಳೆಗೆ ವಾಟ್ಸಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತೆ ಸಹಜ ಸ್ಥಿತಿಗೆ ಮರಳಿದೆ.
Advertisement
ಜಗತ್ತಿನಲ್ಲಿ 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸಪ್ ಬಳಕೆದಾರರು, 41 ಕೋಟಿ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‍ಸ್ಟಾಗ್ರಾಂ ಬಳಕೆದಾರರು ಇದ್ದಾರೆ. ವಾಟ್ಸಪ್ ಮತ್ತು ಇನ್‍ಸ್ಟಾಗ್ರಾಂ ಕೂಡಾ ಫೇಸ್‍ಬುಕ್‍ನ ಸಹವರ್ತಿ ಕಂಪನಿಗಳಾಗಿವೆ. ಸ್ಥಗಿತ ಗೊಂಡಿರುವುದಕ್ಕೆ ಬಳಕೆದಾರರಲ್ಲಿ ವಾಟ್ಸಾಪ್, ಎಫ್‍ಬಿ ಕ್ಷಮೆಯಾಚಿಸಿದೆ. ಇದನ್ನೂ ಓದಿ: WhatsApp, Facebook, ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ – ಮೆಸೇಜ್ ಹೋಗ್ತಿಲ್ಲ, ಬರ್ತಿಲ್ಲ..!
Advertisement
Advertisement
2014ರಲ್ಲಿ ವಾಟ್ಸಪ್‍ನ್ನು ಫೇಸ್‍ಬುಕ್ ಖರೀದಿಸಿತ್ತು. ಫೇಸ್‍ಬುಕ್ ಸೇವೆ ಸ್ಥಗಿತಗೊಂಡಿದ್ದರಿಂದ ಫೇಸ್‍ಬುಕ್‍ನ ಷೇರು ಮೌಲ್ಯ ಕೆಲವೇ ಗಂಟೆಗಳಲ್ಲಿ ಶೇಕಡಾ 4.9ರಷ್ಟು ಕುಸಿದಿದೆ. ಪರಿಣಾಮ ಮಾಲೀಕ ಮಾರ್ಕ್ ಝುಕರ್‍ಬರ್ಗ್‍ಗೆ ಕೆಲವೇ ಗಂಟೆಗಳಲ್ಲಿ 44,743 ಕೋಟಿ ರೂಪಾಯಿ ನಷ್ಟ ಆಗಿದೆ. ಸೆಪ್ಟೆಂಬರ್ 15ರಂದು ಫೇಸ್‍ಬುಕ್‍ನ ಷೇರು ಮೌಲ್ಯ ಶೇಕಡಾ 15ರಷ್ಟು ಕುಸಿತದ ಬಳಿಕ ನಿನ್ನೆ ಅತೀ ದೊಡ್ಡ ಕುಸಿತ ಆಗಿದೆ.
Advertisement
ಇಂಟರ್ ನೆಟ್ ಡೊಮೈನ್‍ಗೆ ಇಂಟರ್ನಲ್ ರೂಟಿಂಗ್ ವೇಳೆ ಸಮಸ್ಯೆ ಕಂಡುಬಂದಿದ್ದು, ಫೇಸ್‍ಬುಕ್‍ನಲ್ಲಿರುವವರೇ Internet ಸೇವೆಗೆ ಅಡ್ಡಿಪಡಿಸಿರುವ ಅನುಮಾನ ಎದ್ದಿದೆ.