Connect with us

Latest

ಫೇಸ್ಬುಕ್ ಲೈವ್‍ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದು ಹೇಗೆ ತೋರಿಸ್ತೀನೆಂದು 19ನೇ ಮಹಡಿಯಿಂದ ಜಿಗಿದ!

Published

on

– ಮುಂಬೈ ಖಾಸಗಿ ಹೋಟೆಲ್‍ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಇಲ್ಲಿನ ಬಾಂದ್ರಾದಲ್ಲಿರೋ ತಾಜ್ ಹೋಟೆಲ್‍ನ 19 ನೇ ಮಹಡಿಯ ಕಿಟಿಕಿಯಿಂದ ಹಾರಿ ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಆತ್ಮಹತ್ಯೆಗೈದಾತನನ್ನು 24 ವರ್ಷದ ಅರ್ಜುನ್ ಭಾರದ್ವಾಜ್ ಎನ್ನಲಾಗಿದ್ದು, ಈತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಭಾರದ್ವಾಜ್ ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ಲೈವ್ ವೀಡಿಯೋ ಅಪ್‍ಲೋಡ್ ಮಾಡಿದ್ದಾನೆ. ವೀಡಿಯೋದಲ್ಲಿ `ಇದು ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಟ್ಯುಟೋರಿಯಲ್’ ಅಂತಾ ಹೇಳಿದ್ದಾನೆ.

ಹೋಟೆಲ್‍ನ 1925 ರೂಮ್ ನಂಬರಿನಲ್ಲಿ 9 ಸಣ್ಣ ಚೀಟಿಗಳಲ್ಲಿ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ಗಳು ದೊರಕಿವೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಅಪ್ಪ-ಅಮ್ಮ ನನ್ನ ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.

ಅರ್ಜುನ್ ಭಾರದ್ವಾಜ್ ಖಿನ್ನತೆಗೆ ಒಳಗಾಗಿದ್ದು, ಮಾದಕ ವ್ಯಸನಿಯಾಗಿದ್ದ. ಆದ್ದರಿಂದ ಈ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರದ್ವಾಜ್ ಸೋಮವಾರ ಮುಂಜನೆ 3 ಗಂಟೆ ಸುಮಾರಿಗೆ ಹೋಟೆಲ್‍ಗೆ ಆಗಮಿಸಿ ರೂಮ್ ಕಾದಿರಿಸಿದ್ದಾನೆ. ಇಡೀ ದಿನ ರೂಂನಲ್ಲೇ ಇದ್ದ ಭಾರದ್ವಾಜ್ ವೀಡಿಯೋದಲ್ಲಿ ತೋರಿಸಿದಂತೆ ಆತ್ಮಹತ್ಯೆಗೆ ಮುನ್ನ ಮದ್ಯಪಾನ ಹಾಗೂ ಧೂಮಪಾನ ಮಾಡಿದ್ದಾನೆ. ಬಳಿಕ ಕಿಟಕಿಯ ಗಾಜು ಒಡೆದು ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದಾನೆ ಅಂತಾ ಬಾಂದ್ರಾದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಭಾರದ್ವಾಜ್ ಮಹಡಿಯಿಂದ ಜಿಗಿದಾಗ ಆದ ಭಾರೀ ಶಬ್ದ ಹೊಟೇಲ್‍ನ ಭದ್ರತಾ ಸಿಬ್ಬಂದಿಗೆ ಕೇಳಿಸಿದೆ. ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿದಾಗ ಭಾರದ್ವಾಜ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಅದಾಗಲೇ ಆತ ಸಾವನಪ್ಪಿದ್ದಾನೆ ಅಂತಾ ವೈದ್ಯರು ಘೋಷಿಸಿದ್ದಾರೆ.

https://www.youtube.com/watch?v=Rx6u2MtFT4w

Click to comment

Leave a Reply

Your email address will not be published. Required fields are marked *

www.publictv.in