– ಪೊಲೀಸರ ಭಯವಿಲ್ಲ. ಇಸ್ಪೀಟ್ ದಂಧೆ ನಿತ್ಯ ನೂತನ
– ಪಬ್ಲಿಕ್ ಟಿವಿ ಬಯಲು ಮಾಡುತ್ತಿದೆ ಬಿಗ್ ಗ್ಯಾಂಬ್ಲಿಂಗ್ ಕಹಾನಿ
ಪ್ರವೀಣ್ ರೆಡ್ಡಿ
ಕಲಬುರಗಿ: ಸೂಫಿ ಸಂತರ ನಾಡು ಕಲಬುರಗಿ ಜಿಲ್ಲೆಯಲ್ಲಿ ಇದೀಗ ಇಸ್ಪೀಟ್ ಜೂಜಾಟ ಬಿಂದಾಸ್ ಆಗಿ ನಡೆಯುತ್ತಿದೆ. ಜಿಲ್ಲೆಯ ಗಡಿ ಭಾಗವಾದ ಕೂಂಚಾವರಂ ಪ್ರದೇಶದಲ್ಲಿ ಪಕ್ಕದ ತೆಲಂಗಾಣ ಉದ್ಯಮಿಗಳು ಈ ದಂಧೆ ನಡೆಸುತ್ತಿದ್ದು, ಪ್ರತಿನಿತ್ಯ ಕೋಟ್ಯಂತರ ರೂಪಾಯಿ ಜೂಜಾಟ ನಡೆಯುತ್ತಿದೆ. ಈ ಮೂಲಕ ಕರ್ನಾಟಕ ಮಾನವನ್ನು ಪಕ್ಕದ ಆಂಧ್ರ-ತೆಲಂಗಾಣದಲ್ಲಿ ಹರಾಜಾಗುತ್ತಿದೆ.
ಚಿಂಚೋಳಿ ತಾಲೂಕಿನ ಕೂಂಚಾವರಂ ಪ್ರದೇಶದಲ್ಲಿ ರಾಜಾರೋಷದಿಂದ ಜೂಜಾಟ ನಡೆಯುತ್ತಿದೆ. ಕೂಂಚಾವರಂ ಎಂಬ ಕುಗ್ರಾಮದ ರೆಡ್ಡಿ ಪೆಟ್ರೋಲ್ ಬಂಕ್ ಹಿಂಭಾಗದ ಶೆಡ್‍ನಲ್ಲಿ ಇಸ್ಪೀಟ್ ದಂಧೆ ನಿತ್ಯ ನೂತನವಾಗಿದೆ. ಇಲ್ಲಿ ಏನಿಲ್ಲ ಅಂದ್ರೂ ಕನಿಷ್ಠ 2 ಕೊಟಿ ಕೈ ಬದಲಾಗುತ್ತವೆ ಅಂದರೆ ನಂಬಲೇ ಬೇಕಾಗಿದೆ.
Advertisement
Advertisement
ಇಲ್ಲಿಗೆ ದಂಧೆ ಮಾಡಲು ಬರುವವರು ಸಾಮಾನ್ಯರಲ್ಲ ಆಂಧ್ರ, ತೆಲಂಗಾಣದ ದೊಡ್ಡ ದೊಡ್ಡ ಉದ್ಯಮಿಗಳಾಗಿದ್ದಾರೆ. ಇಲ್ಲಿಗೆ ಕನಿಷ್ಟ 500ಕ್ಕೂ ಹೆಚ್ಚು ವಾಹನ ಧಾವಿಸುತ್ತವೆ. ಈ ಇಸ್ಪೀಟ್ ದಂಧೆಯ ರೂವಾರಿ ವೆಂಕಟ್ ರೆಡ್ಡಿ. ವಿಶೇಷ ಅಂದರೆ ದಂಧೆ ಸ್ಥಳದ ಕೂಗಳತೆ ದೂರದಲ್ಲೇ ಪೊಲೀಸ್ ಠಾಣೆ ಇದೆ. ಆದ್ರೂ ಪೊಲೀಸರು ಮಾತ್ರ ಸೈಲೆಂಟ್ ಆಗಿ ಇದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
Advertisement
ಸ್ವತಃ ದಂಧೆಯ ರೂವಾರಿ ವೆಂಕಟರೆಡ್ಡಿಯನ್ನು ಮಾತಿಗೆಳೆದಾಗ ಸ್ಫೋಟಕ ಸತ್ಯ ಅನಾವರಣಗೊಂಡಿದೆ. ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಇರುವರೆಗೂ ಕಲಬುರಗಿಯಲ್ಲಿ ಈ ಜೂಜುಕೋರರು ಬಾಲ ಬಿಚ್ಚಿರಲಿಲ್ಲ. ಅವರು ಬೆಂಗಳೂರಿಗೆ ಶಿಫ್ಟ್ ಆಗುತ್ತಲೇ ದಂಧೆ ಶುರು ಮಾಡಿದ್ದಾರೆ.
Advertisement
ಸ್ಥಳೀಯ ಪೊಲೀಸರಿಂದ ಹಿಡಿದು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳವರೆಗೆ ತಿಂಗಳಿಗೆ ಮೂಮುಲು ಹೋಗುತ್ತಂತೆ. ಇಲ್ಲಿ ಜೂಜಾಟಕ್ಕೆ ಬರೋ ಪ್ರತಿ ವಾಹನಕ್ಕೆ 1 ಸಾವಿರ ರೂಪಾಯಿಯನ್ನು ದಂಧೆಕೋರರೇ ನೀಡುತ್ತಾರೆ. ಇದನ್ನು ಸ್ವತಃ ದಂಧೆಕೋರನೇ ಬಾಯ್ಬಿಟ್ಟಿದ್ದಾನೆ.
ಪಬ್ಲಿಕ್ ಟಿವಿ ಪ್ರತಿನಿಧಿ ಹಾಗೂ ದಂಧೆಕೋರನ ನಡುವಿನ ಸಂಭಾಷಣೆ
ವರದಿಗಾರ – ಹಲೋ ವೆಂಕಟ್ ರೆಡ್ಡಿನಾ
ವೆಂಕಟ್ ರೆಡ್ಡಿ – ಹೌದು, ಹೇಳಿ
ವರದಿಗಾರ – ಆಟ ಆಡಲು ಬರಬೇಕಿತ್ತು. ಎಲ್ಲಿ ಬರಬೇಕು? ಯಾವಾಗ ಬರಬೇಕು?
ವೆಂಕಟ್ ರೆಡ್ಡಿ – ಆ, ಯಾವ ಆಟ?
ವರದಿಗಾರ -ಕಾಡ್ರ್ಸ್
ವೆಂಕಟ್ ರೆಡ್ಡಿ – ಕಾಡ್ರ್ಸ್‍ನಲ್ಲೇ ಏನು ಆಡ್ತೀರಿ?
ವರದಿಗಾರ – ರಮ್ಮೀ
ವೆಂಕಟ್ ರೆಡ್ಡಿ – ರಮ್ಮೀ. ಕೂಂಚಾವರಂನಲ್ಲಿಯೇ ಕ್ಲಬ್ ಆರಂಭವಾಗಿದೆ.
ವರದಿಗಾರ – ಕೂಂಚಾವರಂನಲ್ಲಾ?
ವೆಂಕಟ್ ರೆಡ್ಡಿ -ಹೌದು.
ವೆಂಕಟ್ ರೆಡ್ಡಿ – ಎಲ್ಲಿಂದ ಬರ್ತೀರಿ.
ವರದಿಗಾರ – ಕಲಬುರಗಿಯಿಂದ ನಾವು ನಮ್ಮ ಸ್ನೇಹಿತರು ಬರಬೇಕು ಅಂದು ಕೊಂಡಿದ್ವಿ. ನಮ್ಮ ಸ್ನೇಹಿತರು ಹೇಳಿದ್ರು.
ವೆಂಕಟ್ ರೆಡ್ಡಿ – ಹಾಗಾದ್ರೆ.. ಕೂಂಚಾವರಂನಲ್ಲಿ ಆಟವಾಡಿ.
ವರದಿಗಾರ – ಕೂಂಚಾವರಂನಲಿನಾದ್ರು ಸಮಸ್ಯೆಯಿದ್ಯಾ?
ವೆಂಕಟ್ ರೆಡ್ಡಿ – ಎಲ್ಲಿ?
ವರದಿಗಾರ -ಕೂಂಚಾವರಂನಲ್ಲಿ ಪೊಲೀಸರು ತೊಂದರೆ ಮಾಡಬಹುದು ಅಲ್ವಾ?
ವೆಂಕಟ್ ರೆಡ್ಡಿ – ಏನಿಲ್ಲ..! ಇಲ್ಲಿ ಎಲ್ಲಾ ನಿರ್ಭಯವಾಗಿ ನಡೆಯುತ್ತಿದೆ.
ವರದಿಗಾರ – ಇಲ್ಲ ಒಂದು ವೇಳೆ, ಅಲ್ಲಿ ಕಲಬುರಗಿ ಪೊಲೀಸರು ಬಂದು ಹಿಡಿದುಬಿಟ್ರೇ.
ವೆಂಕಟ್ ರೆಡ್ಡಿ – ಯಾರು ಹಿಡಿಯುವುದಿಲ್ಲ ಸರ್. ನಿರ್ಭಯವಾಗಿ ಆಟವಾಡಬಹುದು. ತುಂಬಾ ಗ್ಯಾರಂಟಿಯಿದೆ.. ಯಾರು ಹಿಡಿಯುವುದಿಲ್ಲ ಅಲ್ಲಿ.
ವರದಿಗಾರ – ಅಲ್ಲಾ..! ನಮ್ಮ ಬಳಿ ಸಹ ಹಣ ಜಾಸ್ತಿಯಿರುತ್ತೆ. ಒಂದು ವೇಳೆ ಬಂದು ಹಿಡಿದ್ರೆ, ನಮ್ಮ ಬಳಿ 20-15 ಲಕ್ಷದವರೆಗೆ ಹಣ ಇರುತ್ತದೆ. ಅದಕ್ಕಾಗಿ ಇಷ್ಟು ಕೇಳ್ತಿರೋದು..
ವೆಂಕಟ್ ರೆಡ್ಡಿ – 20-25 ಲಕ್ಷ ಯಾಕೆ ತರ್ತೀರಾ? 10-15 ಸಾವಿರ ಟೇಬಲ್ ಆಡುವುದಕ್ಕೆ.
ವರದಿಗಾರ – ಇಲ್ಲ ಅಷ್ಟು ಹಣ ಇಟ್ಟುಕೊಂಡೆ ನಾವು ಆಟವಾಡೋದು.. ಅದಕ್ಕೆ ಕೇಳ್ತಾ ಇದ್ದೀವಿ..
ವೆಂಕಟ್ ರೆಡ್ಡಿ – ಏನು ಸಮಸ್ಯೆಯಿಲ್ಲ.. ಇಲ್ಲಿ ನಿತ್ಯ ಕನಿಷ್ಟ 400 ಜನ ಬಂದು ಆಟವಾಡುತ್ತಿದ್ದಾರೆ.. ಅದರಲ್ಲಿ ಕನಿಷ್ಠ ಅಂದ್ರು 25 ರಿಂದ 30 ಟೇಬಲ್‍ಗಳಿವೆ.
ವರದಿಗಾರ – ಓಕೆ ಓಕೆ ಓಕೆ.. ಹಾಗಿದ್ರೆ ಏನು ಸಮಸ್ಯೆಯಿಲ್ಲ ಅಂತಾಯ್ತು..
ವೆಂಕಟ್ ರೆಡ್ಡಿ – ಇಲ್ಲ.. ಏನು ಸಮಸ್ಯೆಯಿಲ್ಲ…!
ಸೂಪರ್ಸ್ -1 ಸಾವಿರ ಕೊಡ್ತಾರೆ.
ಜೂಜುಕೋರ: ಏನು ಆಟವಾಡಲು ಬಂದಿದ್ದಿರಾ?
ವರದಿಗಾರ: ಇಲ್ಲ.. ಇನ್ನೂ ಹಣ ತರಬೇಕಾಗಿದೆ.
ಜೂಜುಕೋರ: ಆಯ್ತು, ಆಯ್ತು. ನಿಮ್ಮ ಗಾಡಿ ನಂಬರ್ ಬರೆಯುತ್ತೇವೆ ಇಲ್ಲಿ. ನೀವು ಈ ಟೋಕನ್ ಕೊಡಬೇಕು.. ವಾಪಸ್ ಬರುವಾಗ.
ವರದಿಗಾರ: ಇದಕ್ಕೆ ನಾವು ಒಂದು ಸಾವಿರ ರೂಪಾಯಿ ಕೊಡಬೇಕಾ? ಒಂದು ಗಾಡಿಗೆ?
ಜೂಜುಕೋರ: ಇಲ್ಲ ನೀವು ಕೊಡಬೇಕಾಗಿಲ್ಲ.. ನಾವೇ ಕೊಡ್ತಿವಿ ನಿಮಗೆ
ವರದಿಗಾರ: ನೀವು ಟೋಕನ್ ಕೊಡ್ತಿರಾ ನಮಗೆ?
ಜೂಜುಕೋರ: ಹೂ.. ಹೌದು ನಾವು ಕೊಡ್ತಿವಿ ನಿಮಗೆ.. ನೀವು ಇಲ್ಲಿಂದ ವಾಪಸ್ ಹೋಗುವಾಗ ನಾವೇ ನಿಮಗೆ ಒಂದು ಸಾವಿರ ರೂಪಾಯಿ ಕೊಡ್ತಿವಿ..
ವರದಿಗಾರ: 1 ಸಾವಿರ ರೂಪಾಯಿ.
ಜೂಜುಕೋರ: ಹೌದು… ನಾವೇ ನಿಮಗೆ ನಿಮ್ಮ ವಾಹನದ ಬಾಡಿಗೆ ಅಂತಾ ನಮ್ಮ ಕಡೆಯಿಂದ ಕೊಡ್ತೀವಿ…
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=UM1zG1zA_ec