– ನಮ್ಮಿಂದ ಕೇವಲ 1 ಕಿ.ಮೀ ದೂರದಲ್ಲಿ ಪ್ರವಾಹ ಹರಿದು ಹೋಗುತ್ತಿತ್ತು
ನವದೆಹಲಿ: ನೇಪಾಳದ ಪ್ರವಾಹದಿಂದ (Nepal Flood) ಕೂದಲೆಳೆಯ ಅಂತರದಲ್ಲಿ ಪಾರಾಗಿ ಬಂದೆ. ದೇವರು, ಹಿರಿಯರ ಆರ್ಶಿವಾದದಿಂದ ಬದುಕಿ ಬಂದೆ. ಇನ್ನೊಂದು ಗಂಟೆ ಪ್ರಯಾಣ ಮಾಡಿದರೂ ಅಪಾಯಕ್ಕೆ ಸಿಲುಕುತ್ತಿದ್ದೆ ಎಂದು ನೇಪಾಳದಿಂದ ವಾಪಸ್ ಆದ ಕನ್ನಡಿಗ ಮಲ್ಲಿನಾಥ್ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬಂದಿರುವುದು ತುಂಬಾ ಖುಷಿಯಾಗುತ್ತಿದೆ. ನೇಪಾಳದಲ್ಲಿ ಪ್ರವಾಹ ಕಂಡಾಗ ಮತ್ತೆ ವಾಪಸ್ ಬರುತ್ತೇವೋ, ಇಲ್ಲವೋ ಎನಿಸಿತು. ನೀರು ರಭಸದಿಂದ ಎಲ್ಲವನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ನಾನು 60 ಕಿ.ಮೀ ದೂರದಲ್ಲಿದ್ದೆ, ಆದರೂ ನೀರಿನ ವೇಗ ಕಡಿಮೆ ಆಗಿರಲಿಲ್ಲ. ದೇವರ ದಯೆಯಿಂದ ಜೀವಂತವಾಗಿ ಭಾರತಕ್ಕೆ ಬಂದಿದ್ದೇವೆ ಎಂದರು. ಇದನ್ನೂ ಓದಿ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ – ಅನಾಥವಾದ ಕಂದಮ್ಮ
ನಾವು ಕೈಲಾಸ ಸರೋವರದ ಪರ್ವತದ ಕಡೆ ತೆರಳುತ್ತಿದ್ದೆವು. ನಮ್ಮಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಪ್ರವಾಹ ಹರಿದು ಹೋಗುತ್ತಿತ್ತು. ನಮ್ಮ ಚಾಲಕರಿಗೆ ಕರೆ ಬಂದಿದ್ದು, ಅವರು ನಮಗೆ ಮಾಹಿತಿ ನೀಡಿದರು. ಘಟನೆ ತಿಳಿದು ತುಂಬಾ ಭಯವಾಯಿತು, ಆದರೂ ದೇವರ ಮೇಲೆ ಭಾರ ಹಾಕಿ ಮುಂದುವರಿದೆವು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಮಗೆ ಸಾಕಷ್ಟು ಸಹಾಯ ಮಾಡಿದೆ. ಸಿಎಂ ಡಿಕೆ ಶಿವಕುಮಾರ್ ಹಾಗೂ ಸ್ಥಳೀಯ ಶಾಸಕರು ನಮ್ಮ ಸಂಪರ್ಕದಲ್ಲಿದ್ದರು. ನೇಪಾಳದಿಂದ ನಮ್ಮನ್ನು ಸುರಕ್ಷಿತವಾಗಿ ಕರೆತರಲು ಸಹಾಯ ಮಾಡಿದ್ದಾರೆ. ಅಪಾಯದಿಂದ ಪಾರಾಗಿ ಬಂದಿದ್ದು ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪಿಎಫ್ ಹಣವೂ ಬಂದಿಲ್ಲ, ಮನೆಯವರ ಸಾವಿಗೆ ನ್ಯಾಯವೂ ಸಿಕ್ಕಿಲ್ಲ: ಮೃತ ಚಂದ್ರಶೇಖರ್ ಪತ್ನಿ ಕವಿತಾ ಅಳಲು
