ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ (West Godavari) ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ಸಂಭವಿಸಿದ ದುರಂತವೊಂದು ಸಂಭವಿಸಿದೆ. ಮೂರು ವರ್ಷದ ಮಗುವನ್ನು ಬಿಟ್ಟು ದಂಪತಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಿದ್ದು, ಕಂದಮ್ಮ ಅನಾಥವಾಗಿದೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೆಲ್ಪುರು ಗ್ರಾಮದ ನಿವಾಸಿಗಳಾದ ಪತಿ ದೊಡ್ಡ ಸಾಯಿ (29) ಮತ್ತು ಅವರ ಪತ್ನಿ ಶಿರೀಷಾ (28) ನದಿಗೆ ಹಾರಿದ ದಂಪತಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸರಣಿ ಕಳ್ಳತನ ಮಾಡ್ತಿದ್ದ ಮೂವರು ಖದೀಮರ ಬಂಧನ – 20 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶಕ್ಕೆ
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ರಾತ್ರಿ 10 ಗಂಟೆ ಸುಮಾರಿಗೆ ದಂಪತಿಯು ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದರು. ಬಳಿಕ ಮಗುವನ್ನು ಸ್ಕೂಟರ್ ಮೇಲೆಯೇ ಬಿಟ್ಟು ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಕತ್ತಲು ಹಾಗೂ ಚಳಿ ಮಧ್ಯೆ ಮಗು ಒಂಟಿಯಾಗಿ ಸೇತುವೆ ಮೇಲೆ ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗು ಅಮ್ಮ… ಅಪ್ಪ ಎಂದು ಕರೆಯುತ್ತಿರುವುದನ್ನು ಕೇಳಿ ಸ್ಥಳೀಯರು ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸ್ಕೂಟರ್ ಅನ್ನು ಜಪ್ತಿ ಮಾಡಿದ್ದಾರೆ. ಬಳಿಕ ಮಗುವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ. ಸದ್ಯ ದಂಪತಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸ್ ಸಿಬ್ಬಂದಿ, ಈಜುಗಾರರು ಮತ್ತು ದೋಣಿ ತಂಡಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ನಿನ್ನ ತಲೆದಂಡ ಮಾಡಿದ್ದು ಕಾಂಗ್ರೆಸ್, ರಾಮಾಯಣದ ಕಥೆ ಹೇಳಿ ಜನರನ್ನ ದಾರಿ ತಪ್ಪಿಸಬೇಡ: ನಾಗೇಂದ್ರಗೆ ರೆಡ್ಡಿ ತಿರುಗೇಟು
In Andhra Pradesh, a couple jumped into the Godavari and died by suicide, leaving behind their three-year-old child
Tragic incident near Chinchinada Bridge in West Godavari district.
Dodda Sai (29) and Sireesha (28), a couple from Velpur in Tanuku mandal, came to the bridge… pic.twitter.com/Eve3F37axv
— Political Critic (@PCSurveysIndia) August 28, 2026
ಪ್ರಾಥಮಿಕ ತನಿಖೆಯಲ್ಲಿ, ತಂದೆಯು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶಕ್ಕೆ ಹಿಂತಿರುಗುವ ಮೊದಲು ಗಲ್ಫ್‌ನಲ್ಲಿದ್ದರು. ಸಾಲದ ಹೊರೆ ಹಾಗೂ ಹಣಕಾಸಿನ ಒತ್ತಡದಿಂದ ಅವರು ಬಳಲುತ್ತಿದ್ದರು. ಅಲ್ಲದೇ ಆರ್ಥಿಕ ಸಮಸ್ಯೆಯ ಕಾರಣದಿಂದಲೇ ದಂಪತಿ ತಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಸದ್ಯ ಘಟನೆಗೆ ನಿಖರವಾದ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ – ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ
