ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾವು, ಬಾವಲಿ ನಡುವಿನ ಕಾಳಗದ ವಿಡಿಯೋ ಮೈ ಜುಮ್ಮೆನಿಸುವಂತಿದೆ.
Advertisement
Advertisement
ಕಾರ್ಪೆಟ್ ಪೈಥಾನ್ ಜಾತಿಗೆ ಸೇರಿದ ಹೆಬ್ಬಾವು ಬಾವಲಿಯನ್ನ ಸುಮಾರು ಅರ್ಧ ಗಂಟೆ ಕಾಲ ತನ್ನ ಹಿಡಿತದಲ್ಲಿ ಸಿಲುಕಿಸಿಕೊಂಡು ನುಂಗಲು ಯತ್ನಿಸಿದೆ. ಬಾವಲಿ ಕೂಡ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದೆ. ಬಾವಲಿಯ ಅದೃಷ್ಟಕ್ಕೆ ಹೆಬ್ಬಾವು ಅರ್ಧ ಗಂಟೆ ನಂತರ ವಿಫಲವಾಗಿ ಬಾವಲಿಯನ್ನ ನೆಲಕ್ಕುಳುರುವಂತೆ ಕೆಳಗೆ ಬಿಟ್ಟಿದೆ.
Advertisement
Advertisement
ಉರಗ ರಕ್ಷಕ ಟೋನಿ ಮಾರಿಸ್ಸನ್ ಎಂಬವರು ಇದರ ವಿಡಿಯೋ ಮಾಡಿದ್ದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಬಾವಲಿಯ ರೆಕ್ಕೆಯನ್ನ ನುಂಗಲಾಗದೆ ಹಾವು ವಿಫಲವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ .
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಪೆಟ್ ಪೈಥಾನ್‍ಗಳು ಕಾಣಸಿಗುತ್ತವೆ. ಇವು ಮಾನವನಿಗೆ ಯಾವುದೇ ಅಪಾಯ ಮಾಡಲ್ಲ ಎಂದು ಮಾರಿಸ್ಸನ್ ಹೇಳಿದ್ದಾರೆ.
https://www.facebook.com/redlandssnakes/videos/2053112358250176/
https://www.facebook.com/redlandssnakes/posts/2053116511583094