ಮಣ್ಣು ಅಗೆಯುವ ಯಂತ್ರ ಜೆಸಿಬಿ ಜೊತೆ ಕಾಳಗಕ್ಕೆ ಇಳಿದ ಆನೆಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜೆಸಿಬಿ ಹೊಲದಲ್ಲಿ ಮಣ್ಣು ಅಗೆಯುತ್ತಿದ್ದಂತೆ ಅಲ್ಲಿಗೆ ಆನೆ ಎಂಟ್ರಿ ಕೊಟ್ಟಿದೆ. ಜೆಸಿಬಿಯನ್ನು ನೋಡುತ್ತಿದ್ದಂತೆ ಸಿಟ್ಟಿಗೆದ್ದ ಆನೆ, ಜೆಸಿಬಿ ಜೊತೆ ಫೈಟ್ ಮಾಡಲು ಆರಂಭಿಸಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ಇದನ್ನೂ ಓದಿ: ಇನ್ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ
ಈ ವೀಡಿಯೋವನ್ನು wild animals creation ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಜೆಸಿಬಿ ಜೊತೆ ಆನೆ ಫೈಟ್ ಮಾಡಲು ಆರಂಭಿಸಿದೆ. ಈ ವೇಳೆ ಜೆಸಿಬಿ ಡ್ರೈವರ್ ಜೆಸಿಬಿಯ ಮುಂಭಾಗದ ಕೊಕ್ಕೆಯಿಂದ ಆನೆಗೆ ಹೆದರಿಸಲು ಪ್ರಯತ್ನ ಪಟ್ಟಿದ್ದಾನೆ. ಆನೆ ಕೂಡ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿ ಜೆಸಿಬಿಯನ್ನು ತಳ್ಳಲು ಪ್ರಯತ್ನಿಸಿದೆ ಬಳಿಕ ಜೆಸಿಬಿಯಿಂದ ತನಗೆ ಗಾಯವಾಗಬಹುದೆಂದು ಅರಿವಾಗಿ ಆನೆ ಅಲ್ಲಿಂದ ಜಾಗ ಖಾಲಿ ಮಾಡಿದೆ.
View this post on Instagram
ಇದೀಗ ಈ ವೀಡಿಯೋ ಬಗ್ಗೆ ನೆಟ್ಟಿಗರು ವಿವಿಧ ಬಗೆಯ ಕಾಮೆಂಟ್ ಮೂಲಕ ಜೆಸಿಬಿ ಮತ್ತು ಆನೆಯ ಪರ, ವಿರುದ್ಧ ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!