Connect with us

ನಾಡ ಬಾಂಬ್ ಸಿಡಿಸಿ ಕಾಂಗ್ರೆಸ್ ನಾಯಕನ ಕೊಲೆ – ಸ್ಫೋಟದ ತೀವ್ರತೆಗೆ ಛಿದ್ರವಾಯ್ತು ದೇಹ!

ನಾಡ ಬಾಂಬ್ ಸಿಡಿಸಿ ಕಾಂಗ್ರೆಸ್ ನಾಯಕನ ಕೊಲೆ – ಸ್ಫೋಟದ ತೀವ್ರತೆಗೆ ಛಿದ್ರವಾಯ್ತು ದೇಹ!

ಹೈದರಾಬಾದ್: ಮಲಗುವ ಮಂಚದ ಕೊಳಗೆ ನಾಡ ಬಾಂಬ್ ಇಟ್ಟು ಸ್ಫೋಟಿಸಿ ಕಾಂಗ್ರೆಸ್ ಪಂಚಾಯತ್ ನಾಯಕನ ಕೊಲೆ ಮಾಡಿರುವ ಭಯಾನಕ ಘಟನೆ ನೆರೆಯ ರಾಜ್ಯ ತೆಲಂಗಾಣದ ನಾಲ್‍ಗೊಂಡ ಜಿಲ್ಲೆಯ ತಿರುಮಲಗಿರಿ ಪ್ರದೇಶದಲ್ಲಿ ನಡೆದಿದೆ.

ಧರ್ಮನಾಯಕ್ (45) ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಕೈ ನಾಯಕ. ಸೋಮವಾರ ಮಧ್ಯರಾತ್ರಿ ವೇಳೆ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಧರ್ಮನಾಯಕ್ ದೇಹ ಛಿದ್ರವಾಗಿದೆ.

ಧರ್ಮನಾಯಕ್ ಪ್ರತಿನಿತ್ಯದಂತೇ ತಮ್ಮ ಮನೆಯಲ್ಲಿದ್ದ ಸಾಂಪ್ರದಾಯಿಕ `ನೂಲಕ ಮಂಚ’ದ ಮೇಲೆ ಮಲಗಿದ್ದ ವೇಳೆ ದುಷ್ಕರ್ಮಿಗಳು ಮಂಚದ ಕೇಳಗೆ ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ. ಮೃತರಿಗೆ ಇಬ್ಬರು ಪತ್ನಿಯರು ಹಾಗೂ ಇಬ್ಬರು ಮಕ್ಕಳಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ನಾಗಾರ್ಜುನ ಸಾಗರ್ ಪ್ರದೇಶದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಪ್ರಾಥಮಿಕ ತನಿಕೆ ನಡೆಸಲು ಶ್ವಾನದಳ, ಹಾಗೂ ಬೆರಳಚ್ಚು ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಬಾಂಬ್ ಸಿಡಿಸಿ ಕೊಲೆ ನಡೆಸಿರುವುದರಿಂದ ಸದ್ಯ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Advertisement
Advertisement