ಬೆಂಗಳೂರು: ಬೆಳಗಾವಿ, ಮಹಾರಾಷ್ಟ್ರ ಭಾಗದಲ್ಲಿ ಜನರಿಗೆ ಮೋಸ ಮಾಡಿ, ಸಿಕ್ಕಿಬಿದ್ದಿದ್ದ ಶಿವಾನಂದ್ ನೀಲಣ್ಣನವರ್ (Shivanand Neelannavar) ವಿರುದ್ಧ ಇದೀಗ ಇಡಿ ಅಧಿಕಾರಿಗಳು (ED Officers) ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 35,000 ಜನಕ್ಕೆ 2,165 ಕೋಟಿ ರೂ. ವಂಚನೆ ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣನವರ್ ಅನ್ನು ಬಂಧಿಸಿದ್ದರು. ದಾಖಲಾತಿ ಪರಿಶೀಲನೆ ನಡೆಸಿ, ಇದೀಗ ಅಧಿಕಾರಿಗಳು ಶಿವಾನಂದ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಈಗಾಗಲೇ ನೀಲಣ್ಣನವರ್ ಬ್ಯಾಂಕ್‌ನಿಂದ 2.02 ಕೋಟಿ ರೂ.ಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ಪರ ಬ್ಯಾಟಿಂಗ್ – 124 ಐಎಎಸ್, IFS ಮಾಜಿ ಅಧಿಕಾರಿಗಳಿಂದ ಬಹಿರಂಗ ಪತ್ರ
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಈ ಪ್ರಕರಣದಲ್ಲಿ 185.95 ಕೋಟಿ ರೂ. ನಷ್ಟ ಆಗಿದೆ. 25 ಕೋಟಿ ರೂ.ಗಳನ್ನು ಸಹಕಾರಿ ಸಾಲ ಸಂಘಗಳಾದ `ಶ್ರೀಮತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್’ ಮತ್ತು `ಧನಶ್ರೀ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ ಲಿಮಿಟೆಡ್’ ಹೂಡಿಕೆ ಮಾಡಿದ್ದಾರೆ. ಇದೇ ಠೇವಣಿಗಳ ಆಧಾರದ ಮೇಲೆ ಆಪ್ತರ ಹೆಸರಿನಲ್ಲಿ ಸಾಲ ಪಡೆದು ಭೂಮಿಯನ್ನು ಖರೀದಿಸಲಾಗಿದೆ.
ರಿಯಲ್ ಎಸ್ಟೇಟ್ ಹೂಡಿಕೆಗಳಲ್ಲದೆ, ಹಣವನ್ನು ಆತನ ಪತ್ನಿ ಶ್ರೀಮತಿ ಸಂಗೀತಾ ಮತ್ತು ಅಪ್ರಾಪ್ತ ಮಗ ಸಿದ್ಧಾಂತ್ ಅವರ ಬ್ಯಾಂಕ್ ಖಾತೆಗಳಿಗೆ ಹಾಗೂ `ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್’ (19 ಕೋಟಿ ರೂ.), `ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್’ ಮತ್ತು `ಶಿವಂ ಫುಡ್ಸ್’ನಂತಹ ಸಂಬಂಧಿತ ವ್ಯಾಪಾರ ಉದ್ಯಮಗಳಿಗೆ ವರ್ಗಾಯಿಸಲಾಗಿದೆ. ಅಂತಿಮವಾಗಿ, ಸಾರ್ವಜನಿಕರಿಂದ ಸಂಗ್ರಹಿಸಲಾದ ಠೇವಣಿಗಳ ಪೈಕಿ 5 ಕೋಟಿ ರೂ.ಗಳನ್ನು ಚಲನಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ವಿಮಾನದಲ್ಲೇ ಸಿಜೆಪಿ ನಾಯಕರು ವಶಕ್ಕೆ – ಮಹಿಳಾ ಪೊಲೀಸರನ್ನೇ ನಿಯೋಜಿಸಿದ್ದೇಕೆ?

