ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಅಭಿಜಿತ್ ದೀಪ್ಕೆ (Abhijeet Dipke), ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನೇ (Women Cops) ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.
ಜಂತರ್ಮಂತರ್ನಲ್ಲಿ (Jantarmantar) ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಈ ಮೂವರು ನಾಯಕರು ವಿಮಾನದಿಂದ ಕೆಳಗಿಳಿಯುವ ಮುನ್ನವೇ ಪೊಲೀಸ್ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಿಜೆಐ ಸೂರ್ಯಕಾಂತ್ ಮಧ್ಯಪ್ರವೇಶ – SIR ಪ್ರತಿಭಟನೆ ವೇಳೆ ವಶಕ್ಕೆ ಪಡೆದ ವಕೀಲರ ಬಿಡುಗಡೆ
ಸಿಜೆಪಿ ನಾಯಕರ ವಶಕ್ಕೆ ಮಹಿಳಾ ಪೊಲೀಸರ ನಿಯೋಜನೆ ಏಕೆ?
ದೆಹಲಿ ಪೊಲೀಸರು ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲು ನಿರ್ಧರಿಸಿದ್ದರ ಹಿಂದಿನ ನಿಖರ ಕಾರಣವನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಆದರೆ, ವಿಮಾನದೊಳಗಿನ ಸೀಮಿತ ಸ್ಥಳಾವಕಾಶ ಮತ್ತು ಪರಿಸ್ಥಿತಿ ಕೈಮೀರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರಬಹುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ ರಜೆಯಿಂದ ಮಂಡ್ಯದ ಶಾಲೆಯಲ್ಲಿ ತಪ್ಪಿದ ಅನಾಹುತ!

ವಿಮಾನದೊಳಗೆ ಆಸನಗಳ ಸಾಲುಗಳ ನಡುವೆ ಓಡಾಡಲು ಕಡಿಮೆ ಸ್ಥಳಾವಕಾಶವಿರುತ್ತದೆ. ಇಂತಹ ಸಂದರ್ಭದಲ್ಲಿ ಪುರುಷ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಸಣ್ಣ ಮಟ್ಟದ ಮಾತಿನ ಚಕಮಕಿ ನಡೆದರೂ ಅದು ದೊಡ್ಡ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯಲು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿರಬಹುದು ಎಂಬುದು ಒಂದು ಸಾಧ್ಯತೆಯಾಗಿದೆ. ಕಾರ್ಯಾಚರಣೆಯ ವೇಳೆ ಕೆಲ ಮಾತಿನ ಚಕಮಕಿ ನಡೆದಿದ್ದರೂ, ದೊಡ್ಡ ಮಟ್ಟದ ಗೊಂದಲವಿಲ್ಲದೆ ಮೂವರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರಿ ಬಸ್ಗಳಿಗೆ ಕೊನೆಗೂ ಡೀಸೆಲ್ ಭಾಗ್ಯ – 100 ಕೋಟಿ ಅನುದಾನ ಬಿಡುಗಡೆ
ಜುಲೈ 20ರ ಪ್ರತಿಭಟನೆಯ ಹಿನ್ನೆಲೆ:
ಜುಲೈ 20ರಂದು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ವಿದ್ಯಾರ್ಥಿಗಳು ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ಈ ಘಟನೆಯ ಬಳಿಕ ಪುರುಷ ಪೊಲೀಸ್ ಸಿಬ್ಬಂದಿ ಯುವತಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿಜೆಪಿ ಆರೋಪಿಸಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಮೂವರು ಮಾಜಿ ಸಿಎಂ ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿ ವಶಕ್ಕೆ
12 ವರ್ಷದ ಬಾಲಕಿಯರು ಸೇರಿದಂತೆ ಹಲವು ಯುವತಿಯರ ತಲೆಗೆ ಗಾಯಗಳಾಗಿದ್ದು, ಬಟ್ಟೆಗಳನ್ನು ಹರಿಯಲಾಗಿದೆ ಎಂದು ಸಂಘಟನೆ ಆರೋಪಿಸಿತ್ತು. ಸಿಜೆಪಿಯ ಬೆಂಬಲಿಗರಲ್ಲಿ ಹೆಚ್ಚಿನವರು ಯುವಕರು ಮತ್ತು ಜೆನ್ ಝೀ ವರ್ಗಕ್ಕೆ ಸೇರಿದವರಾಗಿದ್ದು, ನಾಯಕರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಮತ್ತೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಪೊಲೀಸರು ಮಹಿಳಾ ಸಿಬ್ಬಂದಿಗೆ ಆದ್ಯತೆ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಕೇಸ್ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಿ: ಛಲವಾದಿ

ವಿಮಾನದೊಳಗೆ ನಡೆದಿದ್ದೇನು?
ದೆಹಲಿ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನ ಬಂದಿಳಿದ ಬಳಿಕ ಪೊಲೀಸ್ ಸಿಬ್ಬಂದಿ ವಿಮಾನದೊಳಗೆ ಪ್ರವೇಶಿಸಿದ್ದಾರೆ. ಕಿಟಕಿ ಪಕ್ಕದ ಆಸನದಲ್ಲಿ ಕುಳಿತಿದ್ದ ಅಭಿಜಿತ್ ದೀಪ್ಕೆ ಈ ಕಾರ್ಯಾಚರಣೆಯನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಲು ಆರಂಭಿಸಿದ್ದಾರೆ. ಸೌರವ್ ದಾಸ್ ಮಧ್ಯದ ಆಸನದಲ್ಲಿದ್ದರೆ, ಅವರ ಪಕ್ಕದಲ್ಲಿ ಆಶುತೋಷ್ ರಂಕಾ ಕುಳಿತಿದ್ದರು. ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ಗೆ ಚೂರಿ ಇರಿದ ಓಮಾನಿ ಪೈಲಟ್ – ಕೇಸ್ ದಾಖಲಿಸಿದ ಎನ್ಐಎ!
ಪೊಲೀಸರನ್ನು ಕಂಡ ಮೂವರು ನಾಯಕರು `ಇಂಕ್ವಿಲಾಬ್ ಜಿಂದಾಬಾದ್’ ಮತ್ತು `ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ವಿಮಾನದೊಳಗಿನ ದೃಶ್ಯಗಳಲ್ಲಿ ಸುಮಾರು ಹನ್ನೆರಡು ಮಹಿಳಾ ಪೊಲೀಸ್ ಸಿಬ್ಬಂದಿ ನಾಯಕರನ್ನು ಸುತ್ತುವರಿದಿರುವುದು ಕಂಡುಬಂದಿದೆ. ಈ ವೇಳೆ ಅಭಿಜಿತ್ ದೀಪ್ಕೆ, ತಮ್ಮನ್ನು ವಿಮಾನದಿಂದ ಕೆಳಗಿಳಿದ ಬಳಿಕ ವಶಕ್ಕೆ ಪಡೆಯಬಹುದಿತ್ತು ಎಂದು ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದಾರೆ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೀವು ನೋಡಬಹುದು. ನಮ್ಮನ್ನು ನೇರವಾಗಿ ವಿಮಾನದಿಂದಲೇ ಬಂಧಿಸಲು ಬಂದಿದ್ದಾರೆ. ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ. ಇದು ಸರ್ವಾಧಿಕಾರ ಎಂದು ದೀಪ್ಕೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯ ನೇತೃತ್ವ ವಹಿಸಿದ ಅಜಿಂಕ್ಯ ಶಿಂಧೆ ಯಾರು?

