ಬೆಂಗಳೂರು: ಬರಗಾಲದ ನಡುವೆ ಬಸ್ಗಳಿಗೆ ಡಿಸೇಲ್ ಅಭಾವದ ಉಂಟಾಗಿದ್ದ ಬೆನ್ನಲ್ಲೇ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದ್ದು, ರಾಜ್ಯದ 4 ನಿಗಮದ ಬಸ್ಗಳ ಡಿಸೇಲ್ಗಾಗಿ 100 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ಕೆಎಸ್ಆರ್ಟಿಸಿಗೆ-18.90 ಕೋಟಿ ರೂ., ಬಿಎಂಟಿಸಿಗೆ 62.53 ಕೋಟಿ ರೂ., ಎನ್ಡಬ್ಲೂಕೆಎಸ್ಆರ್ಟಿಸಿ-7.96 ಕೋಟಿ ರೂ. ಹಾಗೂ ಕೆಕೆಆರ್ ಟಿಸಿಗೆ-10.61 ಕೋಟಿ ರೂ.ಯಂತೆ ಒಟ್ಟು 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಕೊಪ್ಪಳ| ಡೀಸೆಲ್ ಕೊರತೆ – ಡಿಪೋದಲ್ಲೇ ನಿಂತ ಕೆಎಸ್ಆರ್ಟಿಸಿ ಬಸ್ಗಳು
ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ಗೆ (ಹೆಚ್ಪಿಸಿಎಲ್) 1124.91 ಕೋಟಿ ರೂ. ಡಿಸೇಲ್ ಹಣವನ್ನು ಸಾರಿಗೆ ಇಲಾಖೆ ನೀಡಬೇಕಿದೆ. ಇದೀಗ 100 ಕೋಟಿ ರೂ. ರಿಲೀಸ್ ಆಗಿರೋ ಹಿನ್ನೆಲೆ, ಇನ್ನೂ 1004 ಕೋಟಿ ರೂ. ಹಣವನ್ನು ಸಾರಿಗೆ ಇಲಾಖೆ ಬಾಕಿ ಉಳಿಸಿಕೊಂಡ ಹಾಗೆ ಆಗಿದೆ.
ಇನ್ನೂ ಸರ್ಕಾರದಿಂದ ಅಕ್ಟೋಬರ್ ತಿಂಗಳ ಶಕ್ತಿ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ನಾಲ್ಕು ಸಾರಿಗೆ ನಿಗಮಗಳಿಗೆ 430 ಕೋಟಿ ರಿಲೀಸ್ ಆಗಿದೆ. ಹಾಗೆಯೇ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಶಕ್ತಿ ಹಣದ ವೆಚ್ಚದಲ್ಲಿ 2,15,000 ಲಕ್ಷ ರೂಪಾಯಿ ಮುಂಗಡ ಬಿಡುಗಡೆಗೆ ಆದೇಶಿಸಿದೆ. ಇದನ್ನೂ ಓದಿ:ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಮೂವರು ಮಾಜಿ ಸಿಎಂ ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿ ವಶಕ್ಕೆ

