ಮುಂಬೈ: ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕ ಹಾಗೂ ಪೊಲೀಸ್ ಅಧಿಕಾರಿಯ ಮೇಲೆ ಯುವತಿಯೊಬ್ಬಳು ದೌರ್ಜನ್ಯ ಎಸಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
A thread of 11 videos, drunk girl abusing everyone including Police
Video 1 pic.twitter.com/SC4AGM7h5j
— Kungfu Pande ????????2.0 (@pb3060) June 19, 2022
Advertisement
ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವತಿ ಕ್ಯಾಬ್ ಚಾಲಕನೊಂದಿಗೆ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ತಡರಾತ್ರಿ ಮುಂಬೈನಲ್ಲಿ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಯುವತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಓಲಾ ಕ್ಯಾಬ್ ಹತ್ತಿದ್ದ ವೇಳೆ ಗಲಾಟೆ ಮಾಡಿದ್ದಾಳೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ತಂದೆಯೊಂದಿಗಿನ ಸಂಬಂಧ ಕಡಿದುಕೊಳ್ಳಲು ಸಿದ್ಧವಾದ ಮಸ್ಕ್ ತೃತೀಯ ಲಿಂಗಿ ಮಗಳು
Advertisement
एक और परी की Video Viral है।
देखिए कैसे एक पुलिस अधिकारी की वर्दी का कॉलर पकड़ कर खड़ी है और पुलिस वाला बेबस है।
क्योंकि जानता है गलती से अगर उसने लड़की को ही हाथ लगा दिया तो क़ानून उसको ही नाप देगा। pic.twitter.com/5AHtj3E2A7
— Sagar Kumar “Sudarshan News” (@KumaarSaagar) June 19, 2022
Advertisement
ಅತೀ ಹೆಚ್ಚು ಕುಡಿದಿದ್ದ ಯುವತಿ ಏಕಾಏಕಿ ಕ್ಯಾಬ್ ಚಾಲಕನನ್ನು ನಿಂದಿಸಲು ಆರಂಭಿಸಿದಳು. ನಂತರ ಕಾರು ಚಲಾಯಿಸುತ್ತಿದ್ದ ಚಾಲಕನನ್ನು ತಳ್ಳಲು ಪ್ರಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಅಧಿಕಾರಿಯೊಬ್ಬರ ಕಾಲರ್ ಪಟ್ಟಿಯನ್ನು ಬೆದರಿಕೆಯೊಡ್ಡಿದ್ದಾಳೆ. ಅಲ್ಲದೇ ರಸ್ತೆಯಲ್ಲೆಲ್ಲ ಉರುಳಾಡುತ್ತಾ ಮೈಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸಿದ್ದಾಳೆ. ಇದೇ ವೇಳೆ ಕ್ಯಾಬ್ ಡ್ರೈವರ್ ಹಾಗೂ ಪೊಲೀಸರಿಗೆ ಮನಬಂದಂತೆ ನಿಂದಿಸಿದ್ದಾಳೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ: ಆರೋಪಿ ಮೇಲೆ ಫೈರಿಂಗ್
Advertisement
ಗಲಾಟೆಯ ವೀಡಿಯೋ ಮಾಡಲು ಬಂದವರಿಗೆಲ್ಲ ಯುವತಿ ಹೊಡೆಯಲು ಯುವತಿ ಯತ್ನಿಸಿದ್ದಾಳೆ. ಅಷ್ಟೇ ಅಲ್ಲೇ ಪಕ್ಕದಲ್ಲಿದ್ದ ದ್ವಿಚಕ್ರವಾಹವನ್ನೂ ತಳ್ಳಿದ್ದಾಳೆ. ವಿಡಿಯೋ ಮಾಡಿ ಎಂದು ನಡು ರಸ್ತೆಯಲ್ಲಿ ಕಿರುಚಾಡಿದ್ದಾಳೆ. ಬಾರ್‌ನಲ್ಲಿ ಕುಡಿದಾಗಲೂ ಯುವತಿಯರ ಗುಂಪು ಅಲ್ಲಿಯೂ ಕಿರಿಕ್ ಮಾಡಿದೆ ಎಂದು ಹೇಳಲಾಗಿದೆ. ಬಾರ್‌ನಿಂದ ಹೊರಬರುತ್ತಿದ್ದಂತೆ ಅಲ್ಲಿಯೂ ಕೆಲವರ ಜೊತೆ ವಾಗ್ವಾದ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ನಡುರಸ್ತೆಯಲ್ಲಿ ಯುವತಿ ರಂಪಾಟ ಮಾಡಿರುವ ಎಂಟು ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.