ರಾಮನಗರ: ವೈದ್ಯನ (Doctor) ಸಾವಿನ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಸಹ ಆತ್ಮಹತ್ಯೆಗೆ ಶರಣಾದ ಘಟನೆ ಕನಕಪುರ (Kanakapura) ನಗರದ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ. ಎರಡು ದಿನಗಳ ಅಂತರದಲ್ಲಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನವೋದಯ ಆಸ್ಪತ್ರೆಯ ನರ್ಸ್ ಸರಸ್ವತಿ (45) ನೇಣಿಗೆ ಶರಣಾದ ನರ್ಸ್. 2 ದಿನಗಳ ಹಿಂದೆ ಕೌಟುಂಬಿಕ ಕಲಹದಿಂದ ಕನಕಪುರ ನವೋದಯ ಆಸ್ಪತ್ರೆ ವೈದ್ಯ ಡಾ.ಚೇತನ್ ಟೆಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಡಾ.ಚೇತನ್ ಅವರ ಆಸ್ಪತ್ರೆಯಲ್ಲಿ ಸಾಕಷ್ಟು ವರ್ಷಗಳಿಂದ ನರ್ಸ್ ಸರಸ್ವತಿ ಕೆಲಸ ಮಾಡಿಕೊಂಡಿದ್ದರು. ಮೊನ್ನೆ ಮನೆಯಲ್ಲಿ ಜಗಳ ಮಾಡಿಕೊಂಡು ವೈದ್ಯರು ನೇಣಿಗೆ ಶರಣಾಗಿದ್ದರು. ಇದನ್ನೂ ಓದಿ: ಸಾಲ ಕೊಟ್ಟ ವೃದ್ಧೆಗೆ ಆಕ್ಸಿಡೆಂಟ್ – ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು!
ವೈದ್ಯ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ನರ್ಸ್ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಡಾಕ್ಟರ್ ಜೊತೆ ನರ್ಸ್‌ಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧ ಕನಕಪುರ ಟೌನ್ ಪೊಲೀಸ್ (Police) ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆ್ಯಕ್ಸಲ್ ತುಂಡಾಗಿ ಸಾರಿಗೆ ಬಸ್ ಪಲ್ಟಿ – ವಿದ್ಯಾರ್ಥಿ ಸಾವು, 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

