ಬೆಂಗಳೂರು: ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ (GBA Election) ಮುಹೂರ್ತ ಕೂಡಿಬಂದಿದೆ. ಮುಂದಿನ ಜೂನ್ 14 ರಿಂದ 24ರ ಒಳಗೆ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ (Election Commissioner) ಜಿ.ಎ ಸಂಗ್ರೇಶಿ ಸೂಚನೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ಕರೆಯಲಾಗಿತ್ತು.ಜಿಬಿಎ ಅಧ್ಯಕ್ಷರಾಗಿರುವ ಸಿಎಂ ಹಾಗೂ ಡಿಸಿಎಂ ಸಭೆಗೆ ಗೈರಾಗಿದ್ದರು. ಈ ಹಿನ್ನೆಲೆ ರಾಜ್ಯ ಚುನಾವಣಾ ಆಯುಕ್ತ ಜಿ.ಎ ಸಂಗ್ರೇಶಿ ನೇತೃತ್ವದಲ್ಲಿ ಸಭೆ ನಡೆಯಿತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿ.ಎ ಸಂಗ್ರೇಶಿ ಅವರು, ಜೂನ್ 14 ರಿಂದ 24 ರ ಒಳಗೆ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂದ್ ಆಗಿದ್ದ ಪೀಣ್ಯ ಫ್ಲೈಓವರ್ ಓಪನ್ – ವಾಹನ ಸಂಚಾರ ಆರಂಭ

ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಸಮಾಲೋಚಿಸಿ ದಿನಾಂಕ ನಿಗದಿಯಾಗಬೇಕು ಅನ್ನೋ ಕಾನೂನು ಇತ್ತು. ಆದಕಾರಣ ಇಂದು ಸಭೆ ನಡೆಸಿದ್ದೇವೆ. ಚುನಾವಣೆ ನಡೆಸಲು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ದಿನಾಂಕ ನಿಗದಿ ಮಾತ್ರ ಬಾಕಿ ಅನ್ನೋದು ಜಿಬಿಎಯೂ ತಿಳಿಸಿದೆ. ಜನಗಣತಿ, ಮನೆ ಸೇರಿದಂತೆ ಅನೇಕ ಕಾರ್ಯ ಇರೋದ್ರಿಂದ ಸಮಯ ನೋಡಿ ದಿನಾಂಕ ನಿಗದಿ ಪಡಿಸಿ ಅಂತಾ ಜಿಬಿಎಗೆ ಹೇಳಿದೆ. ಆದ್ರೆ ವೇಳಾಪಟ್ಟಿ ನೋಡಲು ಸಾಧ್ಯವಿಲ್ಲ. ಜೂನ್ -30 ರೊಳಗೆ ಚುನಾವಣೆ ದಿನಾಂಕ ನಿಗದಿ ಪಡಿಸಬೇಕು ಅಂತಾ ಹೇಳಿದ್ದೇವೆ. ಸುಪ್ರೀಂ ಕೋರ್ಟ್ ಗೆ ನಾವು ಇದನ್ನು ತಿಳಿಸಬೇಕಾಗಿದೆ ಎಂದು ವಿವರಿಸಿದರು.
ಗೊತ್ತುಪಡಿಸಿದ ಅವಧಿಯಲ್ಲಿ ದಿನಾಂಕ ನಿಗದಿಪಡಿಸುವಂತೆ ತಿಳಿಸಿದ್ದೇನೆ, ಆದ್ರೆ ಚುನಾವಣೆ ಮುಂದೂಡುವ ಅಧಿಕಾರ ನಮಗಿಲ್ಲ. ಜೂನ್ – 14 ರಿಂದ 24 ರೊಳಗಿನ ಡೇಟ್ ಫಿಕ್ಸ್ ಮಾಡಿ ಅಂತಷ್ಟೇ ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಾಲ ಕೊಟ್ಟ ವೃದ್ಧೆಗೆ ಆಕ್ಸಿಡೆಂಟ್ – ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು!
ಇನ್ನೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ, ಮೀಸಲಾತಿ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಚುನಾವಣೆಗೆ RO, AeRO, BLO ಗಳ ನೇಮಕಾತಿಗೆ ಜಿಬಿಎ ಆಯುಕ್ತರಿಗೆ ಸೂಚನೆ ನೀಡಿದ್ದೇವೆ. ಸರ್ಕಾರಿ ಪ್ರಾಯೋಜಿತ ಯಾವುದೇ ಕಾರ್ಯಕ್ರಮಗಳಿದ್ದರೆ ಶೀಘ್ರವೇ ಮುಗಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

